ಮುಸಲ್ಮಾನರ ಅಂಗಡಿ ಬಾಯ್ಕಾಟ್ ಬಳಿಕ, ಇದೀಗ ಸ್ಮಶಾನ ಜಾಗಕ್ಕಾಗಿ ಹಿಂದೂಗಳ ಹೋರಾಟ: ಏನಿದು ಪ್ರಕರಣ?

Hosa budanur in Mandya: ಹೊಸ ಬೂದನೂರು ಗ್ರಾಮದಲ್ಲಿರುವ 5 ಸಾವಿರ ಮಂದಿಯೂ ಹಿಂದೂ ಧರ್ಮದವರೆ. ಅಷ್ಟೇ ಅಲ್ಲ, ಸುತ್ತಮುತ್ತಲಿನ 15 ಗ್ರಾಮದಲ್ಲೂ ಹಿಂದೂಗಳನ್ನು ಹೊರತು ಪಡಿಸಿ ಬೇರೆ ಧರ್ಮದವರು ವಾಸವಿಲ್ಲ. ಆದಾಗ್ಯೂ ಮುಸ್ಲಿಂ ಮಕಾನ್ ಎಂದು ಬದಲಾವಣೆ ಮಾಡಿಕೊಡಲಾಗಿದೆ. ಅಂದಿನ ಮಂಡ್ಯ ಜಿಲ್ಲಾಧಿಕಾರಿ ಜಿಯಾ ಉಲ್ಲಾ 2017ರಲ್ಲಿ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಮುಸಲ್ಮಾನರ ಅಂಗಡಿ ಬಾಯ್ಕಾಟ್ ಬಳಿಕ, ಇದೀಗ ಸ್ಮಶಾನ ಜಾಗಕ್ಕಾಗಿ ಹಿಂದೂಗಳ ಹೋರಾಟ: ಏನಿದು ಪ್ರಕರಣ?
ಮುಸಲ್ಮಾನರ ಅಂಗಡಿ ಬಾಯ್ಕಾಟ್ ಬಳಿಕ, ಇದೀಗ ಸ್ಮಶಾನ ಜಾಗಕ್ಕಾಗಿ ಹಿಂದೂಗಳ ಹೋರಾಟ: ಏನಿದು ಪ್ರಕರಣ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 25, 2022 | 1:50 PM

ಮಂಡ್ಯ: ಮಂಡ್ಯ ತಾಲೂಕಿನ ಹೊಸ ಬೂದನೂರು ಗ್ರಾಮ ಸಂದಿಗ್ಧ ಸಮಸ್ಯೆ ಎದುರಸುತ್ತಿದೆ. ಹೊಸ ಬೂದನೂರು ಗ್ರಾಮಸ್ಥರು ಸ್ಮಶಾನಕ್ಕಾಗಿ ಆಗವಿಲ್ಲದೆ ಪರದಾಡುತ್ತಿದ್ದಾರೆ. ಅದಕ್ಕಾಗಿ ಹೋರಾಟ ನಡೆಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಹಾಗಂತ ಸ್ಮಶಾನಕ್ಕಾಗಿ ಜಾಗ ಇಲ್ಲ ಅಂತಲ್ಲ. ಇದೆ, ಆದರೆ ಅದು ಆ ಒದು ಜನಾಂಗದವರ ಪೈಕಿ ಯಾರೊಬ್ಬರೂ ಊರಲ್ಲಿ ನೆಲೆಸಿಲ್ಲವಾದರೂ ಅವರಿಗಾಗಿ ಆ ಸರಕಾರಿ ಜಮೀನನ್ನು ಖಬರಸ್ತಾನಕ್ಕೆಂದೇ ಕಾಯ್ದಿರಿಸಲಾಗಿದೆ. ಹಾಗಾಗಿ ಹೊಸ ಬೂದನೂರು ಗ್ರಾಮಸ್ಥರು ಇದನ್ನು ಸರ್ಕಾರದ ಗಮನಕ್ಕೆ ತಂದು ಆ ಜಾಗವನ್ನು ಇಲ್ಲಿ ವಾಸವಿರುವ ಜನರಿಗಾಗಿ ನೀಡಿ ಎಂದು ಹಕ್ಕೊತ್ತಾಯ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ಒಂದೂ ಮುಸ್ಲಿಂ ಕುಟುಂಬ ಇಲ್ಲ; ಆದರೂ ಗ್ರಾಮದ ಜಮೀನು ಮುಸ್ಲಿಂ ಮಕಾನ್ ಎಂದು ಬದಲು: ಮಂಡ್ಯ ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಏನಾಗಿದೆಯೆಂದರೆ ಸರ್ಕಾರಿ ಸ್ಮಶಾನ ಜಾಗ ಮುಸ್ಲಿಮರ ಮಕಾನ್ ಎಂದು ಬದಲಾಗಿದೆ. 2017ರಲ್ಲಿ ಕರ್ನಾಟಕ ವಕ್ಫ್ ಮಂಡಳಿಗೆ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. ಬೂದನೂರಿನ ಸರ್ವೆ ನಂ. 313ರಲ್ಲಿ ಇರುವ 1 ಎಕರೆ ಜಾಗ ಇದಾಗಿದೆ. ಇನ್ನು, ಹೊಸ ಬೂದನೂರಿನ ಜನಸಂಖ್ಯೆ 5 ಸಾವಿರಕ್ಕೂ ಹೆಚ್ಚು ಇದೆ. ಆದರೆ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ! ಆದರೂ ಗ್ರಾಮದ ಜಮೀನು ಮುಸ್ಲಿಂ ಮಕಾನ್ ಎಂದು ಮಾರ್ಪಾಡು ಮಾಡಿಕೊಡಲಾಗಿದೆ. ಹೀಗಾಗಿ ಸ್ಮಶಾನ ಜಾಗ ವಾಪಸ್ ಕೊಡುವಂತೆ ಈಗ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. ಪಾದಯಾತ್ರೆ ಮಾಡಿಯೂ ಹೋರಾಟ ಮಾಡಿದ್ದಾರೆ ಗ್ರಾಮಸ್ಥರು.

ಅಂದಿನ ಮಂಡ್ಯ ಜಿಲ್ಲಾಧಿಕಾರಿ ಜಿಯಾ ಉಲ್ಲಾ ಚಿತಾವಣೆ: ಹೊಸ ಬೂದನೂರು ಗ್ರಾಮದಲ್ಲಿರುವ 5 ಸಾವಿರ ಮಂದಿಯೂ ಹಿಂದೂ ಧರ್ಮದವರೆ. ಇಡೀ ಗ್ರಾಮದಲ್ಲಿ ಎಲ್ಲಾ ಕೋಮಿನವರಿಗೂ ಇರೋದು ಒಂದೇ ಒಂದು ಸ್ಮಶಾನ. ಆದಾಗ್ಯೂ ಮುಸ್ಲಿಂ ಮಕಾನ್ ಎಂದು ಬದಲಾವಣೆ ಮಾಡಿಕೊಡಲಾಗಿದೆ. ಅಂದಿನ ಮಂಡ್ಯ ಜಿಲ್ಲಾಧಿಕಾರಿ ಜಿಯಾ ಉಲ್ಲಾ ಅವರಿಂದ ಖಾತೆ ಬದಲಾವಣೆಯಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಬೂದನೂರು ಗ್ರಾಮ ಅಷ್ಟೇ ಅಲ್ಲ, ಸುತ್ತಮುತ್ತಲಿನ 15 ಗ್ರಾಮದಲ್ಲೂ ಹಿಂದೂಗಳನ್ನು ಹೊರತು ಪಡಿಸಿ ಬೇರೆ ಧರ್ಮದವರು ವಾಸವಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಇದನ್ನೂ ಓದಿ: ಭಗವದ್ಗೀತೆ ಮೂಲ ಪುಸ್ತಕದ ಬಗ್ಗೆ ಕೇಂದ್ರ ಸರ್ಕಾರದ ಬಳಿಯೇ ಮಾಹಿತಿ ಇಲ್ಲ: ವಕೀಲ ಸುರೇಂದ್ರ ಉಗಾರೆ

ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ