AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿಯುವ ನೀರಿನ ಸಮಸ್ಯೆ ನಡುವೆ KRS ಜಲಾಶಯಕ್ಕೆ ಅಕ್ರಮ ಮೋಟಾರ್ ಅಳವಡಿಕೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಜಲಾಶಯಕ್ಕೆ ಅಕ್ರಮವಾಗಿ ಮೋಟಾರ್ ಅಳವಡಿಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ನಡುವೆ ಅಕ್ರಮ ಮೋಟಾರ್ ಅಳವಡಿಸಿ ಕೆಆರ್​ಎಸ್ ಡ್ಯಾಂನಿಂದ ಫಾರ್ಮ್​ಹೌಸ್​ಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಸಂಬಂಧ ಮಾಹಿತಿ ನೀಡಿದರೂ ಅಧಿಕಾರಿಗಳು ಉಳ್ಳವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಕುಡಿಯುವ ನೀರಿನ ಸಮಸ್ಯೆ ನಡುವೆ KRS ಜಲಾಶಯಕ್ಕೆ ಅಕ್ರಮ ಮೋಟಾರ್ ಅಳವಡಿಕೆ
ಕಡಿಯುವ ನೀರಿನ ಸಮಸ್ಯೆ ನಡುವೆ KRS ಜಲಾಶಯಕ್ಕೆ ಅಕ್ರಮ ಮೋಟಾರ್ ಅಳವಡಿಕೆ
ಪ್ರಶಾಂತ್​ ಬಿ.
| Edited By: |

Updated on:Mar 01, 2024 | 11:13 AM

Share

ಮಂಡ್ಯ, ಮಾ.1: ಜಿಲ್ಲೆಯ (Mandya) ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ (KRS)​ ಜಲಾಶಯಕ್ಕೆ ಅಕ್ರಮವಾಗಿ ಮೋಟಾರ್ ಅಳವಡಿಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ನಡುವೆ ಅಕ್ರಮ ಮೋಟಾರ್ ಅಳವಡಿಸಿ ಕೆಆರ್​ಎಸ್ ಡ್ಯಾಂನಿಂದ ಫಾರ್ಮ್​ಹೌಸ್​ಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಸಂಬಂಧ ಮಾಹಿತಿ ನೀಡಿದರೂ ಅಧಿಕಾರಿಗಳು ಉಳ್ಳವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಡ್ಯಾಂನ ಹಿನ್ನೀರಿಗೆ ಹೊಂದಿಕೊಂಡು ಫಾರ್ಮ್ ಹೌಸ್ ಇದೆ. ಈ ಫಾರ್ಮ್​ಹೌಸ್​ಗೆ ಅಕ್ರಮವಾಗಿ ಮೋಟಾರ್ ಅಳವಡಿಕೆ ಮಾಡಿ ಸುಮಾರು 200 ಮೀ. ಪೈಪ್ ಅಳವಡಿಸಿಕೊಂಡು ಜಲಾಯಶಯದ ನೀರಿಗೆ ಕನ್ನ ಹಾಕಲಾಗುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆ ಇದ್ದರೂ ಫಾರ್ಮ್​ಹೌಸ್​ಗೆ ಅಕ್ರಮವಾಗಿ ನೀರು ಪೂರೈಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಗದಗ: ಶುದ್ಧ ನೀರಿನ ಹರಿಕಾರ ಎಚ್​ಕೆ ಪಾಟೀಲ್ ತವರು ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ

ವಿವಿಧ ಬೆಳೆ ಬೆಳೆದಿರುವ ಪ್ರಭಾವಿಗಳು

ಸ್ವಲ್ಪ ದೂರದಲ್ಲೇ ಜಲಾಶಯ ಇರುವ ಹಿನ್ನೆಲೆ ಪ್ರಭಾವಿಗಳು ಜಲಾಶಯಕ್ಕೆ ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡು ಫಾರ್ಮ್​ಹೌಸ್​ನಲ್ಲಿ ವಿವಿಧ ಬೆಳೆ ಬೆಳೆದಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಕೇವಲ 16 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹವಿದೆ ಎಂಬುದನ್ನು ಗಮನಿಸಬೇಕಾದ ಸಂಗತಿ.

ಎಚ್ಚೆತ್ತ ಅಧಿಕಾರಿಗಳಿಂದ ವಿದ್ಯುತ್ ಕಡಿತ

ಕೆಆರ್‌ಎಸ್ ನೀರಿಗೆ ಕನ್ನ ಹಾಕುತ್ತಿರುವ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಇ ಸುರೇಶ್ ಬಾಬು, ಎಇಇ ಕಿಶೋರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಆರ್​ಎಸ್​​ ಹಿನ್ನೀರಿಗೆ ಅಳವಡಿಸಿದ್ದ ಮೋಟಾರ್​ಗಳನ್ನು ತೆರವು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:12 am, Fri, 1 March 24