AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಶುದ್ಧ ನೀರಿನ ಹರಿಕಾರ ಎಚ್​ಕೆ ಪಾಟೀಲ್ ತವರು ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ

ಕಳೆದ ಬಾರಿ ಸರಿಯಾಗಿ ಮಳೆ ಬಾರದ ಪರಿಣಾಮ ಕರ್ನಾಟಕದ ಹಲವೆಡೆ ಬರಗಾಲ ಉಂಟಾಗಿದೆ. ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಉಂಟಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಬೋರ್​ವೆಲ್​ಗಳಲ್ಲಿ ನೀರು ಖಾಲಿಯಾಗಿದೆ. ಇದೀಗ ಶುದ್ಧ ನೀರಿನ ಹರಿಕಾರ ಎಚ್ ಕೆ ಪಾಟೀಲ್ ತವರು ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ.

ಗದಗ: ಶುದ್ಧ ನೀರಿನ ಹರಿಕಾರ ಎಚ್​ಕೆ ಪಾಟೀಲ್ ತವರು ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ
ಗದಗ: ಶುದ್ಧ ನೀರಿನ ಹರಿಕಾರ ಎಚ್​ಕೆ ಪಾಟೀಲ್ ತವರು ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi|

Updated on: Mar 01, 2024 | 9:23 AM

Share

ಗದಗ, ಮಾ.1: ಕಳೆದ ಬಾರಿ ಸರಿಯಾಗಿ ಮಳೆ ಬಾರದ ಪರಿಣಾಮ ಕರ್ನಾಟಕದ ಹಲವೆಡೆ ಬರಗಾಲ ಉಂಟಾಗಿದ್ದು, ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಉಂಟಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಇದೀಗ ಶುದ್ಧ ನೀರಿನ ಹರಿಕಾರ ಎಚ್ ಕೆ ಪಾಟೀಲ್ (HK Patil) ತವರು ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ (Drinking Water) ಹಾಹಾಕಾರ ಶುರುವಾಗಿದೆ. ಗದಗ ತಾಲೂಕಿನ ಮುಳಗುಂದ ಪಟ್ಟಣದ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನರು ಗೋಳಾಡುತ್ತಿದ್ದಾರೆ.

ಮುಳಗುಂದ ಪಟ್ಟಣದ ಹಲವು ಪ್ರದೇಶಗಳಲ್ಲಿ ಬರಗಾಲ ಉಂಟಾಗಿದ್ದು, ಕುಡಿಯಲು ನೀರು ಸಿಗದ ಹಿನ್ನೆಲೆ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಫ್ಲೋರೈಡಯುಕ್ತ ನೀರು ಕುಡಿಯುವ ಕೆಟ್ಟ ಸ್ಥಿತಿ ಬಂದಿದೆ. ಮಂಡಿ ನೋವಿನಿಂದ ಜನರು ನರಳಾಡುತ್ತಿದ್ದೇವೆ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Drinking Water Problem: ಯಶವಂತಪುರದಲ್ಲಿ ಕುಡಿಯುವ ನೀರಿಗೆ ತತ್ವಾರ: ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಹಾಹಾಕಾರ

ಎಚ್​ಕೆ ಪಾಟೀಲ್ ವಿರುದ್ಧ ಜನಾಕ್ರೋಶ

ನಮ್ಮ ಶಾಸಕ ಎಚ್ ಕೆ ಪಾಟೀಲ್ ನಮ್ಮ ಸಮಸ್ಯೆಯೇ ಕೇಳಲಿಲ್ಲ. ಅವರ ಮುಖವೇ ನೋಡಿಲ್ಲ. ಪೋಸ್ಟರ್, ಟಿವಿಯಲ್ಲಿ ಮಾತ್ರ ನೋಡಿದ್ದೇವೆ. ಚುನಾವಣೆಯಲ್ಲಿ ಮತ ಕೇಳಲು ಮಾತ್ರ ಬರುತ್ತಾರೆ. ಆದರೆ ಸಮಸ್ಯೆ ಯಾರೂ ಕೇಳುತ್ತಿಲ್ಲ ಅಂತ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

10-15 ದಿನಕ್ಕೊಮ್ಮ ನೀರು ಬರುತ್ತದೆ. ಅದು ಸವಳು ನೀರಾಗಿದ್ದು, ಕುಡಿಯಲು ಯೋಗ್ಯವಿಲ್ಲ. ಇಂಥ ನೀರು ಕುಡಿದು ಹೊಟ್ಟೆ ನೋವು, ಮಂಡಿ ನೋವಿನಿಂದ ಒದ್ದಾಡುತ್ತಿದ್ದೇವೆ. ಕ್ಷೇತ್ರದ ಜನರು ಕುಡಿಯುವ ನೀರಿಗಾಗಿ ಗೋಳಾಡುತ್ತಾ ಇದ್ದರೂ ಶಾಸಕರು, ಸ್ಥಳೀಯ ನಾಯಕರು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್