ಮಂಡ್ಯ: ಜೈಲಿನಿಂದ ಹೊರಬಂದ ಕಾಳಿ ಸ್ವಾಮೀಜಿಗೆ ಅದ್ಧೂರಿ ಸ್ವಾಗತ; ಹಾರ ಹಾಕಿ ಜೈ ಎಂದ ಅಭಿಮಾನಿಗಳು

ಕಾಳಿ ಸ್ವಾಮೀಜಿ ವಾಹಿನಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮಗಳಲ್ಲೂ ಭಾಗಿ ಆಗಿದ್ದರು. ಅವರು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಖ್ಯಾತಿ ಗಳಿಸಿದ್ದರು. ಕೆಲವು ಖಾಸಗಿ ವಾಹಿನಿಗಳ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿ ಆಗಾಗ ಜನರ ನಡುವೆ ಸುದ್ದಿಯಲ್ಲಿ ಇರುತ್ತಿದ್ದರು.

TV9kannada Web Team

| Edited By: ganapathi bhat

Jan 20, 2022 | 8:46 AM

ಮಂಡ್ಯ: ಇಲ್ಲಿನ ಜಿಲ್ಲಾ ಕಾರಾಗೃಹದಿಂದ ಕಾಳಿ ಸ್ವಾಮೀಜಿ ಬಿಡುಗಡೆ ಆಗಿದ್ದಾರೆ. ಜೈಲಿನಿಂದ ಬಿಡುಗಡೆ ಆದ ಕಾಳಿ ಸ್ವಾಮೀಜಿಗೆ ಅದ್ಧೂರಿ ಸ್ವಾಗತ ದೊರಕಿದೆ. ಹಾರ ಹಾಕಿ ಕಾಳಿ ಸ್ವಾಮಿ ಪರ ಘೋಷಣೆ ಕೂಗಿ ಸ್ವಾಗತ ಮಾಡಲಾಗಿದೆ. ಈ ಮಧ್ಯೆ, ಜೈಲು ಸಿಬ್ಬಂದಿ ಹಾಗೂ ಕಾಳಿ ಸ್ವಾಮೀಜಿ ಅಭಿಮಾನಿಗಳ ಮಧ್ಯೆ ವಾಗ್ವಾದ ಏರ್ಪಟ್ಟಿದೆ. ಕೋಮುಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆ ಆರೋಪದಡಿ ಮಂಗಳವಾರ ಬೆಳಗ್ಗೆ ಕಾಳಿ ಸ್ವಾಮಿಯನ್ನು (Kali swami) ವಶಕ್ಕೆ ಪೊಲೀಸರು ಪಡೆದಿದ್ದರು. ಚಿಕ್ಕಮಗಳೂರಿನ ಕಾಳಿಕಾಮಠದ ಋಷಿಕುಮಾರ ಸ್ವಾಮೀಜಿ ವಿರುದ್ಧದ ಜಾಮೀನು ಅರ್ಜಿ (Bail application) ಮುಂದೂಡಿಕೆ ಹಿನ್ನೆಲೆ ಕಾಳಿ ಸ್ವಾಮಿಯನ್ನು ಪೊಲೀಸ್​ ಸಿಬ್ಬಂದಿ ಜೈಲಿಗೆ ಕರೆತಂದಿದ್ದರು.

ಆಟೋದಲ್ಲಿ ಮಂಡ್ಯ ಜೈಲಿಗೆ (Jail) ಕಾಳಿ ಸ್ವಾಮಿಯನ್ನು ಕರೆತಂದಿದ್ದರು. ಮಂಡ್ಯ ಜೆಎಂಎಫ್​ಸಿ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಜೈಲಿನ ಒಳಗೆ ಕಾಲಿಡುವ ಮೊದಲು ಮುಖಕ್ಕೆ ಕಾವಿ ಬಟ್ಟೆಯನ್ನು ಕಾಳಿ ಸ್ವಾಮಿ ಸುತ್ತಿಕೊಂಡಿದ್ದರು.

ವಿವಾದಾತ್ಮಕ ಹೇಳಿಕೆ

ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ಕಾಳಿ ಸ್ವಾಮೀಜಿ ಬಿಡುಗಡೆ ಮಾಡಿದ್ದ ವಿವಾದಾತ್ಮಕ ವಿಡಿಯೋ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಹಾನಿ ಆಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಪೊಲೀಸರು  ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದರು. ನಿನ್ನೆ ರಿಷಿ ಕುಮಾರ್ ಸ್ವಾಮೀಜಿ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿ ಹಿಂದೂಗಳಿಗೆ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನು ಕೆಡವಿದ್ದಾರೆ ಅಂತಾ ಆರೋಪಿಸಿ, ಇದನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕೆಂದು ರಿಷಿ ಕುಮಾರ್ ಸ್ವಾಮೀಜಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಹಿಂದೂಗಳು ಅತಿ ಬೇಗ ಜಾಗೃತರಾಗಿ ಹೊಡೆಯಬೇಕಾದ ಮಸೀದಿಯಲ್ಲಿ ಇದೂ ಒಂದು ಎಂದು ವಿಡಿಯೋ ಮಾಡಿದ್ದರು. ಹೀಗಾಗಿ ಬೆಳಿಗನ ಜಾವ 4-30ಕ್ಕೆ ಚಿಕ್ಕಮಗಳೂರು ಮಠದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಕಾಳಿ ಸ್ವಾಮೀಜಿ ಈ ಹಿಂದೆ ಬಿಗ್ ಬಾಸ್ ಸ್ಪರ್ಧಿ ಆಗಿದ್ದರು. ವಾಹಿನಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮಗಳಲ್ಲೂ ಭಾಗಿ ಆಗಿದ್ದರು. ಅವರು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಖ್ಯಾತಿ ಗಳಿಸಿದ್ದರು. ಕೆಲವು ಖಾಸಗಿ ವಾಹಿನಿಗಳ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿ ಆಗಾಗ ಜನರ ನಡುವೆ ಸುದ್ದಿಯಲ್ಲಿ ಇರುತ್ತಿದ್ದರು.

ಇದನ್ನೂ ಓದಿ: ಕಾಳಿ ಸ್ವಾಮಿ ವಿರುದ್ಧದ ಜಾಮೀನು ಅರ್ಜಿ ಮುಂದೂಡಿಕೆ; ನಾಳೆಯೂ ಜಾಮೀನು ನಿರಾಕರಿಸಿದ್ರೆ 14 ದಿನ ಜೈಲು ಫಿಕ್ಸ್

ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ಕೆಡವಬೇಕೆಂಬ ಹೇಳಿಕೆಗೆ ಈಗಲೂ ಬದ್ದ-ರಿಷಿಕುಮಾರ್ ಸ್ವಾಮಿ: ಕಾಳಿ ಸ್ವಾಮಿ ಬಿಡುಗಡೆಗೆ ಜಾಮೀನು ಅರ್ಜಿ

Follow us on

Click on your DTH Provider to Add TV9 Kannada