ರಾತ್ರೋರಾತ್ರಿ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಟ್ಟ ರಾಜ್ಯ ಸರ್ಕಾರ: ರೈತರ ಆಕ್ರೋಶ

| Updated By: ವಿವೇಕ ಬಿರಾದಾರ

Updated on: Aug 30, 2023 | 11:26 AM

ರಾತ್ರೋರಾತ್ರಿ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಮಂಡ್ಯ ರೈತರು ಸರ್ಕಾರದ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಹೋರಾಟದ ರೂಪರೇಷು ಕುರಿತು ಸಭೆ ಇಂದು ರೈತರು ಸಭೆ ನಡೆಸಲಿದ್ದಾರೆ. ಇನ್ನು ಕೆಆರ್​ಎಸ್​​ ಜಲಾಶಯದ ಗರಿಷ್ಠ ಸಾಮರ್ಥ್ಯ 124.80 ಅಡಿ ಇದ್ದು, ಸದ್ಯ ಜಲಾಶಯದಲ್ಲಿ 101.58 ಅಡಿ ನೀರು ಸಂಗ್ರಹವಾಗಿದೆ.

ರಾತ್ರೋರಾತ್ರಿ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಟ್ಟ ರಾಜ್ಯ ಸರ್ಕಾರ: ರೈತರ ಆಕ್ರೋಶ
ಕೆಆರ್​​ಎಸ್​ ಜಲಾಶಯ
Follow us on

ಮಂಡ್ಯ: ಮುಂಗಾರು ಮಳೆಯ (Monsoon Rain) ಕೊರತೆಯಿಂದ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜೂನ್​ನಿ೦ದ ಈವರೆಗೆ ಮು೦ಗಾರು ಅವಧಿಯಲ್ಲಿ ರಾಜ್ಯದಲ್ಲಿ 666 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ರಾಜ್ಯದಲ್ಲಿ ಈವರೆಗೆ ಕೇವಲ 490ಮಿ.ಮೀ.ಮಳೆಯಾಗಿದೆ. ಇದರಿಂದ ರಾಜ್ಯದ 130 ತಾಲೂಕುಗಳಲ್ಲಿ ಬರಗಾಲ ಬಿದ್ದಿದ್ದು, ಜಲಾಶಯಗಳಿಗೆ ನೀರು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಮಂದಾಕಿನಿ ಕಾವೇರಿ (Cauvery) ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಆದರೂ ಕೂಡ ಕಾವೇರಿ ‌ನೀರು ನಿರ್ವಹಣ ಪ್ರಾಧಿಕಾರದ ಆದೇಶಕ್ಕೆ ಮಣಿದು ರಾಜ್ಯ ಸರ್ಕಾರ ರಾತ್ರಿಯಿಂದಲೇ ಕೆಆರ್​​ಎಸ್ (KRS) ಜಲಾಶಯದಿಂದ ಹೆಚ್ಚುವರಿ ಕ್ಯೂಸೆಸ್ ನೀರನ್ನು ತಮಿಳುನಾಡಿಗೆ ಬಿಟ್ಟಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ನಿನ್ನೆ (ಆ.29) ರಂದು ಕೆಆರ್​ಎಸ್​ ಜಲಾಯಶದಿಂದ ಎರಡು ಸಾವಿರ ಕ್ಯೂಸೆಕ್​ ನೀರನ್ನು ನದಿಗೆ ಬಿಡಲಾಗುತ್ತು. ಸಾಯಂಕಾಲದ ಹೊತ್ತಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿನಿತ್ಯ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್​ ನೀರು ಹರಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ರಾತ್ರಿ ಜಲಾಶಯದಿಂದ‌‌ ಕಾವೇರಿ ನದಿಗೆ 4,448 ಕ್ಯೂಸೆಕ್​ ನೀರು ಬಿಡುಗಡೆ ಮಾಡಿದೆ. 15 ದಿನಗಳ ಕಾಲ ನೀರು ಹೀಗೆ ಹರಿಸಿದರೆ ಡ್ಯಾಮ್ ಸಂಪೂರ್ಣ ಬರಿದಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: CWRC ಹೇಳಿದಷ್ಟೇ ನೀರು ಹರಿಸಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ

ರಾತ್ರೋರಾತ್ರಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಮಂಡ್ಯ ರೈತರು ಸರ್ಕಾರದ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಹೋರಾಟದ ರೂಪರೇಷು ಕುರಿತು ಸಭೆ ಇಂದು ರೈತರು ಸಭೆ ನಡೆಸಲಿದ್ದಾರೆ. ಇನ್ನು ಕೆಆರ್​ಎಸ್​​ ಜಲಾಶಯದ ಗರಿಷ್ಠ ಸಾಮರ್ಥ್ಯ 124.80 ಅಡಿ ಇದ್ದು, ಸದ್ಯ ಜಲಾಶಯದಲ್ಲಿ 101.58 ಅಡಿ ನೀರು ಸಂಗ್ರಹವಾಗಿದೆ.

ಕರ್ನಾಟಕಕ್ಕೆ ಸೂಚನೆ ನೀಡಿದ್ದೇನು?

ಪ್ರಸ್ತುತ ಕರ್ನಾಟಕ ತಮಿಳುನಾಡಿಗೆ 1900 ಕ್ಯೂಸೆಕ್‌ ನೀರು ಹರಿಸುತ್ತಿದೆ. ಆದರೆ ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯು ಹೆಚ್ಚುವರಿಯಾಗಿ 3,100 ಕ್ಯೂಸೆಕ್ಸ್​ ನೀರು ಹರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ