ಮಂಡ್ಯ, ಮಾರ್ಚ್.03: ಕೆರಗೋಡು ಹನುಮಧ್ವಜ ತೆರವು ವಿವಾದ ಸಾಕಷ್ಟು ದೊಡ್ಡಮಟ್ಟಿಗೆ ಸುದ್ದಿಯಾಗಿತ್ತು. ಇದೇ ವಿಚಾರವನ್ನ ಇಟ್ಟುಕೊಂಡು ಬಿಜೆಪಿ (BJP) ಹಾಗೂ ಜೆಡಿಎಸ್ (JDS), ಕಾಂಗ್ರೆಸ್ (Congress) ಅನ್ನ ಹಿಂದೂ ವಿರೋಧಿ ಪಕ್ಷ ಎಂಬ ಹಣೆಪಟ್ಟಿ ಕಟ್ಟಲು ಮುಂದಾಗಿತ್ತು. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರೋ ಕಾಂಗ್ರೆಸ್, ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ಗೆ ಟಕ್ಕರ್ ಕೊಡಲು ಇದೇ ಮೊದಲ ಬಾರಿಗೆ ಸಕ್ಕರಿನಗರಿ ಮಂಡ್ಯದಲ್ಲಿ ಬೂದನೂರು ಉತ್ಸವವನ್ನ ಹಮ್ಮಿಕೊಂಡಿದೆ.
ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದ ಅರ್ಜುನ ಸ್ತಂಭದ ಮೇಲೆ ಇದ್ದ ಹನುಮಧ್ವಜ ತೆರವು ವಿವಾದ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ, ಜೆಡಿಎಸ್ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಾಕಷ್ಟು ಹೋರಾಟವನ್ನ ನಡೆಸಿದ್ರು. ಕಾಂಗ್ರೆಸ್ ಅನ್ನ ಹಿಂದೂ ವಿರೋಧಿ ಪಕ್ಷ ಎಂಬ ಹಣೆಪಟ್ಟಿ ಕಟ್ಟಿದ್ರು. ಈ ವಿವಾದ ಕಾಂಗ್ರೆಸ್ ಗೂ ಸಹ ದೊಡ್ಡಮಟ್ಟದ ಇರಿಸು-ಮುರಿಸು ತರಿಸಿತ್ತು. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಮಂಡ್ಯದಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರೋ ಕಾಂಗ್ರೆಸ್ ಸಾವಿರಾರು ವರ್ಷಗಳ ಇತಿಹಾಸ ಇರೋ ಬೂದನೂರು ಗ್ರಾಮದಲ್ಲಿ ಅದ್ದೂರಿಯಾಗಿ ಇದೇ ಮೊದಲ ಬಾರಿಗೆ ಬೂದನೂರು ಉತ್ಸವ ಆಚರಣೆ ಮಾಡುತ್ತಿದೆ.
ಅದರಲ್ಲೂ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗೆ ಕ್ಷೇತ್ರದಲ್ಲಿಯೇ ವಿವಾದ ತಾರಕಕ್ಕೇ ಏರಿತ್ತು. ಈ ನಿಟ್ಟಿನಲ್ಲಿ ಶಾಸಕನ ಕ್ಷೇತ್ರದಲ್ಲಿಯೇ ಸರ್ಕಾರದ ವತಿಯಿಂದಲೇ ಇದೇ ಮೊದಲ ಬಾರಿಗೆ ಅದ್ದೂರಿಯಾಗಿ ಬೂದನೂರು ಉತ್ಸವನ್ನ ಆಚರಣೆ ಮಾಡುತ್ತಿದೆ. ನಿನ್ನೆಯಿಂದ ಆರಂಭಗೊಂಡಿರೋ ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯಲಿದೆ. ಈ ಮೂಲಕ ನಾವು ಹಿಂದೂ ವಿರೋಧಿ ಅಲ್ಲ ಎಂದು ಸಾರಲು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮವನ್ನ ಸಚಿವ ಎನ್ ಚಲುವರಾಯಸ್ವಾಮಿ ಉದ್ಘಾಟಿಸಿ, ವಿರೋಧ ಪಕ್ಷದ ವಿರುದ್ದ ವಾಗ್ದಾಳಿ ಕೂಡ ನಡೆಸಿದ್ರು.
ಇದನ್ನೂ ಓದಿ: ಎನ್ಇಎಫ್ಟಿ ಹೊಸ ಮೈಲಿಗಲ್ಲು; ಒಂದೇ ದಿನ 4 ಕೋಟಿಗೂ ಹೆಚ್ಚು ಹಣದ ವಹಿವಾಟು
ಅಂದ ಹಾಗೆ ಮಂಡ್ಯ ತಾಲೂಕಿನ ಬೂದನೂರು ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಈ ಕಾರ್ಯಕ್ರಮದಲ್ಲಿ ಇರುವ ಎರಡು ಪ್ರಮುಖ ದೇವಾಲಯಗಳು ಇತಿಹಾಸವನ್ನ ಸಾರಿ ಹೇಳುತ್ತಿವೆ. ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ ಹಾಗೂ ಆನಂತ ಪದ್ಮನಾಭ ದೇವಸ್ಥಾನಗಳು 13ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು. ಹೀಗಾಗಿ ದೇವಸ್ಥಾನದ ಇತಿಹಾಸವನ್ನ ಸಾರುವ ಜೊತೆಗೆ ಉತ್ಸವವನ್ನ ಆಚರಣೆ ಮಾಡಿ, ನಾವು ಹಿಂದೂ ವಿರೋಧಿ ಅಲ್ಲ. ಹಿಂದೂಗಳ ಪರವಾಗಿ ಇದ್ದೇವೆ ಎಂದು ಬಿಂಬಿಸಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಕಾರ್ಯಕ್ರಮವನ್ನ ಬೂದನೂರು ಗ್ರಾಮದಲ್ಲಿಯೇ ದೇವಸ್ಥಾನದ ಆವರಣದಲ್ಲಿಯೇ ಆಯೋಜನೆ ಮಾಡಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ, ಇತಿಹಾಸ ಇದ್ದಾಗ ಮಾತ್ರ ಇತಿಹಾಸ ಸೃಷ್ಠಿಸಲು ಸಾಧ್ಯ. ಯಾರು ಮಾಡದ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂದರು.
ಒಟ್ಟಾರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರೋ ಕಾಂಗ್ರೆಸ್ ಬೂದನೂರು ಉತ್ಸವನ್ನ ಆಚರಣೆ ಮಾಡಿ, ಹಿಂದೂ ವಿರೋಧಿ ಹಣೆಪಟ್ಟಿಯಿಂದ ಹೊರಬಂದು ಹಿಂದೂಮತಗಳನ್ನ ಸೆಳೆಯಲು ಮುಂದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ