ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ನೀಡಿರುವುದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಪರಿಕಲ್ಪನೆಗೆ ಪೂರಕವಾಗಿದೆ – ಪ್ರಲ್ಹಾದ್ ಜೋಶಿ

3B ಅಡಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಗಳು ಮತ್ತು ಉಪಜಾತಿಗಳನ್ನು 2D ಕೆಟಗರಿಯಲ್ಲಿ ಮೀಸಲಾತಿ ನೀಡಲು ಸರ್ಕಾರ ಮುಂದಾಗಿರೋದಕ್ಕೆ ಪ್ರಲ್ಹಾದ್ ಜೋಶಿ ಸಿಎಂ ಬೊಮ್ಮಾಯಿ ಅವರನ್ನ ಅಭಿನಂದಿಸಿದ್ದಾರೆ.

ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ನೀಡಿರುವುದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಪರಿಕಲ್ಪನೆಗೆ ಪೂರಕವಾಗಿದೆ - ಪ್ರಲ್ಹಾದ್ ಜೋಶಿ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ
Follow us
| Updated By: ಸಾಧು ಶ್ರೀನಾಥ್​

Updated on:Dec 30, 2022 | 2:02 PM

ರಾಜ್ಯದ ಎರಡು ಪ್ರಬಲ ಸಮುದಾಯಗಳಿಗ ಪ್ರತ್ಯೇಕ ಕೆಟಗರಿ ರಚಿಸಿ ಮೀಸಲಾತಿ (Reservation) ನೀಡುವ ರಾಜ್ಯ ಸರ್ಕಾರ ಆದೇಶವನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸ್ವಾಗತಿಸಿದ್ದಾರೆ. ಲಿಂಗಾಯತ (Lingayat) ಹಾಗೂ ಒಕ್ಕಲಿಗ (Vokkaliga) ಸಮುದಾಯಗಳ ಬೇಡಿಕೆಯ ಮೇರೆಗೆ ಮೀಸಲಾತಿ ಒದಗಿಸುತ್ತಿರುವುದು ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ಪ್ರಯಾಸ್ ಪರಿಕಲ್ಪನೆಗೆ (Sab ka Saath Sab ka Vikas) ಪೂರಕವಾಗಿದೆ ಎಂದು ಪ್ರಲ್ಹಾದ್ ಜೋಶಿ (Pralhad Joshi) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿ 2A ಕೆಟಗರಿಯಲ್ಲಿ ಸೇರುವಂತೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಸರ್ಕಾರ 2C ಮತ್ತು 2D ಕೆಟಗರಿ ರಚಿಸುವ ಮೂಲಕ ಎರಡು ಪ್ರಬಲ ಸಮುದಾಯಗಳ ಮೀಸಲಾತಿ ಬೇಡಿಕೆ ಪರಿಹರಿಸಲು ಹೊಸ ಸೂತ್ರ ಹೆಣೆದಿದೆ. ಇದರೊಂದಿಗೆ ಹಾಲಿ ಒಬಿಸಿ 3A ಮತ್ತು 3B ರದ್ದಗೊಳಿಸಿ 2C, ಮತ್ತು 2D ರಚನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಅಮಿತ್ ಶಾ ವ್ಯಕ್ತಿತ್ವ ಬಹಳ ದೊಡ್ಡದು; ದೇವೇಗೌಡ

3A ಅಡಿಯಲ್ಲಿ ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳಿಗೆ 2C ಕೆಟಗರಿಯಲ್ಲಿ‌ ಮೀಸಲಾತಿ ಕಲ್ಪಿಸಲಾಗುವುದು. 3B ಅಡಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಗಳು ಮತ್ತು ಉಪಜಾತಿಗಳನ್ನು 2D ಕೆಟಗರಿಯಲ್ಲಿ ಮೀಸಲಾತಿ ನೀಡಲು ಸರ್ಕಾರ ಮುಂದಾಗಿರೋದಕ್ಕೆ ಪ್ರಲ್ಹಾದ್ ಜೋಶಿ ಸಿಎಂ ಬೊಮ್ಮಾಯಿ ಅವರನ್ನ ಅಭಿನಂದಿಸಿದ್ದಾರೆ.

ಅಲ್ಲದೇ 2Aನಲ್ಲಿರುವ 102 ಪಂಗಡಗಳ ಮೀಸಲಾತಿಗೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ನೋಡಿಕೊಳ್ಳುವುದು ಉತ್ತಮ ನಿರ್ಧಾರ ಎಂದು ಕೇಂದ್ರ ಸಂಸದೀಯ ವ್ತವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಜೋಶಿ, ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟದ ತೀರ್ಮಾನವನ್ನ ಸ್ವಾಗತಿಸಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Fri, 30 December 22