ಕೊಲೆ ಪ್ರಕರಣ: ಮಾಜಿ ಶಾಸಕನ ಪುತ್ರನ ರಕ್ಷಣೆಗೆ ಯತ್ನ -ಮಳವಳ್ಳಿ ಸರ್ಕಲ್​ ಇನ್ಸ್​ಪೆಕ್ಟರ್​ ಧನರಾಜು ಸಸ್ಪೆಂಡ್

ಕೊಲೆ ಪ್ರಕರಣ: ಮಾಜಿ ಶಾಸಕನ ಪುತ್ರನ ರಕ್ಷಣೆಗೆ ಯತ್ನ -ಮಳವಳ್ಳಿ  ಸರ್ಕಲ್​ ಇನ್ಸ್​ಪೆಕ್ಟರ್​ ಧನರಾಜು ಸಸ್ಪೆಂಡ್
ಸಿಪಿಐ ಡಿ.ಪಿ.ಧನರಾಜು

ಮಾಜಿ ಶಾಸಕನ ಪುತ್ರನ ರಕ್ಷಣೆಗೆ ಯತ್ನ ಆರೋಪ ಹಿನ್ನೆಲೆ ಮಳವಳ್ಳಿ ಉಪವಿಭಾಗದ ಸಿಪಿಐ ಡಿ.ಪಿ.ಧನರಾಜುರನ್ನು ಸಸ್ಪೆಂಡ್ ಮಾಡಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಆದೇಶ ಹೊರಡಿಸಿದ್ದಾರೆ.

TV9kannada Web Team

| Edited By: Ayesha Banu

Mar 02, 2022 | 5:43 PM

ಮಂಡ್ಯ: ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆದ ಮಾಜಿ ಶಾಸಕನ ಪುತ್ರನ ರಕ್ಷಣೆಗೆ ಯತ್ನ ಆರೋಪ ಹಿನ್ನೆಲೆ ಮಳವಳ್ಳಿ ಉಪವಿಭಾಗದ ಸಿಪಿಐ ಡಿ.ಪಿ.ಧನರಾಜುರನ್ನು ಸಸ್ಪೆಂಡ್ ಮಾಡಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಆದೇಶ ಹೊರಡಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಕೆ.ಸಿ.ಶ್ರೀಕಾಂತ್ ರಕ್ಷಣೆಗೆ ಯತ್ನ ಮಾಡಿದ್ದಾರೆ ಎಂಬ ಆರೋಪದಡಿ ಸಿಪಿಐ ಡಿ.ಪಿ.ಧನರಾಜುರನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತು ಮಾಡಿರುವ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ ಕೊಲೆ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕನ ಪುತ್ರನನ್ನು ಅರೆಸ್ಟ್ ಮಾಡಲಾಗಿದೆ. ರೈಲ್ ಫುಲ್ಲಿಂಗ್ ವಿಚಾರವಾಗಿ ಫೆಬ್ರವರಿ 7ರಂದು ಕೊಳ್ಳೇಗಾಲದ ಸಲೀಂ ಎಂಬಾತನ ಹತ್ಯೆಯಾಗಿತ್ತು. ರೈಲ್ ಫುಲ್ಲಿಂಗ್ ವಿಚಾರವಾಗಿ ಕೊಳ್ಳೇಗಾಲದ ಸಲೀಂ ಎಂಬಾತನನ್ನು ಮೈಸೂರಿನಲ್ಲಿ ಗುಂಪೊಂದು ಕೊಂದು ಮಳವಳ್ಳಿಯ ಪಡಂತಹಳ್ಳಿಯ ರಸ್ತೆ ಬದಿ ಬಿಸಾಡಿತ್ತು. ಪ್ರಕರಣದಿಂದ ಪಾರಾಗಲು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ (ಸಿಪಿಐ) ಒಬ್ಬರ ನೆರವಿನಿಂದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿತ್ತು. ಸದರಿ ಸಿಪಿಐ 10 ಲಕ್ಷ ರೂಪಾಯಿ ಹಣ, ಹೊಸ ಕಾರಿನ ಆಸೆಗೆ ಸಹಾಯಕ್ಕೆ ಒಪ್ಪಿದ್ದರು.

ಮಾಜಿ ಶಾಸಕ ಪುತ್ರನ ಪಾತ್ರ ಎಲ್ಲಿ, ಹೇಗೆ? ರಸ್ತೆ ಬದಿಯಲ್ಲಿ ಶವ ಹಾಕಿ, ಮೂವರನ್ನ ಪ್ರಕರಣ ಒಪ್ಪಿಕೊಳ್ಳವಂತೆ ರೆಡಿ ಮಾಡಲು ಸೂಚನೆ ರವಾನೆಯಾಗಿತ್ತು. ಅದರಂತೆ ಮಾಜಿ ಶಾಸಕನ ಪುತ್ರ ಹಣದಾಸೆ ತೋರಿಸಿ ತನ್ನ ಸಹಚರರಿಗೆ ಸುಪಾರಿ ನೀಡಿದ್ದ. ಆದರೆ ಮೃತದೇಹ ಹಾಕುವಾಗ ಮಾಡಿದ ಯಡವಟ್ಟಿನಿಂದ ಪ್ರಕರಣ ಬಯಲಾಗಿತ್ತು!

ಬೆಳಕವಾಡಿ ಠಾಣೆಯ ವ್ಯಾಪ್ತಿ ಬದಲಿಗೆ ಮಳವಳ್ಳಿ ಗ್ರಾಮಾಂತರ ಲಿಮಿಟ್ ಗೆ ಶವ ಹಾಕಿದ ಆ ಮೂವರೂ ಠಾಣೆಗೆ ಬಂದು ಶರಣಾಗಿದ್ದರು. 100 ಮೀಟರ್ ವ್ಯತ್ಯಾಸದಿಂದ ಸಿಪಿಐ ಮಾಸ್ಟರ್ ಪ್ಲಾನ್ ಉಲ್ಟಾ ಹೊಡೆದಿದೆ. ಮಳವಳ್ಳಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಹಾಗೂ ತಂಡ ಕೈಗೆತ್ತಿಕೊಂಡಿದ್ದ ಸೂಕ್ಷ್ಮ ತನಿಖೆಯಿಂದ ಪ್ರಕರಣ ಬಟಾಬಯಲಾಗಿದೆ.

ಇದನ್ನೂ ಓದಿ: KR Pet: ಕೊಲೆ ಪ್ರಕರಣದಲ್ಲಿ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕನ ಪುತ್ರ ಅರೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada