ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲಿನಲ್ಲಿ ಗ್ರಾಮಸ್ಥರ ಕೋರಿಕೆ ಮೇರೆಗೆ ಅರಣ್ಯಾಧಿಕಾರಿಗಳು ಶಿವರಾಮ್ ಎಂಬುವವರ ತೋಟದಲ್ಲಿ ಇರಿಸಿದ್ದ ಬೋನಿಗೆ ಇಂದು ಮುಂಜಾನೆ 4 ಗಂಟೆ ವೇಳೆಗೆ ಮತ್ತೊಂದು ಚಿರತೆ ಬಿದ್ದಿದೆ. ಪದೇ ಪದೇ ತೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನ ಕಂಡು ಭಯ ಭೀತರಾಗಿದ್ದ ಗ್ರಾಮಸ್ಥರು ಇದೀಗ ನಿರಾಳರಾಗಿದ್ದಾರೆ.
ಕಳೆದ 30 ದಿನಗಳಲ್ಲಿ ಬೋನಿಗೆ ಬಿದ್ದ ಮೂರನೇ ಚಿರತೆ ಇದಾಗಿದ್ದು, ಡಿಸೆಂಬರ್ 12 ಹಾಗೂ ಡಿಸೆಂಬರ್ 27 ರಂದು ಎರಡು ಚಿರತೆಗಳನ್ನ ಸೆರೆ ಹಿಡಿಯಲಾಗಿತ್ತು. ಇದೀಗ ಮತ್ತೊಂದು ಚಿರತೆ ಬಲೆಗೆ ಬಿದ್ದಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿ, ಚಿರತೆಯನ್ನ ಸುರಕ್ಷಿತ ಮೀಸಲು ಅರಣ್ಯ ಪ್ರದೇಶಕ್ಕೆ ಕೊಂಡ್ಯೊಯಲು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ:ಮೈಸೂರು: ಕೇಂದ್ರ ಆಹಾರ ಸಂಶೋಧನಾಲಯದ ಆವರಣದಲ್ಲಿ ಚಿರತೆ ಪ್ರತ್ಯಕ್ಷ; ಶಾಲೆಗೆ ರಜೆ ಘೋಷಣೆ
ರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ; ಪ್ರಸ್ತಾವನೆ ಸಲ್ಲಿಸುವಂತೆ ಡಿಸಿಗೆ ಸೂಚನೆ
ರಾಮನಗರ: ರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರವಾಗಿ ಮಂದಿರ ಅಭಿವೃದ್ಧಿ ಸಮಿತಿ ರಚಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಂದ ರಾಮನಗರ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ಗೆ ಪತ್ರ ನೀಡಲಾಗಿದೆ.
ದೇವಸ್ಥಾನ ನಿರ್ಮಿಸಲು ಪ್ರಸ್ತಾಪಿಸಿರುವ 19 ಎಕರೆ ಜಾಗದ ಸಂಪೂರ್ಣ ಭೂದಾಖಲೆಗಳ ಮಾಹಿತಿಯೊಂದಿಗೆ
ತಮ್ಮ ಸ್ಪಷ್ಟ ಅಭಿಪ್ರಾಯದ ಮೂಲಕ ಅಗತ್ಯ ಪ್ರಸ್ತಾವನೆಯನ್ನು ತ್ವರಿತವಾಗಿ ಕಳುಹಿಸಲು ರಾಮನಗರ ಡಿಸಿಗೆ ಸೂಚನೆ ನೀಡಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ