ಮಂಡ್ಯ: ವಸತಿ ನೀಡುವುದಾಗಿ ವಂಚನೆ ಆರೋಪ; ನಿವೃತ್ತ ಪೊಲೀಸ್ ಅಧಿಕಾರಿಗಳಿಂದ ಪ್ರತಿಭಟನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 06, 2023 | 11:07 AM

ಮಂಡ್ಯದಲ್ಲಿ 507 ನಿವೇಶನ ನೀಡುವುದಾಗಿ ಹಣ ಪಡೆದಿದ್ದ ಅಮರಾವತಿ ಚಂದ್ರಶೇಖರ್ ಎಂಬಾತ 12 ವರ್ಷಗಳಿಂದ ನಿವೇಶನ ನೀಡಿಲ್ಲ, ಇದರಿಂದ ಬೇಸತ್ತ ನಿವೃತ್ತ ಪೊಲೀಸ್​ ಅಧಿಕಾರಿಗಳು ನಗರದ ಅಮರಾವತಿ ಎನ್ ಕ್ಲೈವ್​ನಲ್ಲಿ ಪ್ರತಿಭಟನೆ ಮಾಡಿದ್ದಾರೆ.

ಮಂಡ್ಯ: ವಸತಿ ನೀಡುವುದಾಗಿ ವಂಚನೆ ಆರೋಪ; ನಿವೃತ್ತ ಪೊಲೀಸ್ ಅಧಿಕಾರಿಗಳಿಂದ ಪ್ರತಿಭಟನೆ
ನಿವೃತ್ತ ಪೊಲೀಸ್ ಅಧಿಕಾರಿಗಳು
Follow us on

ಮಂಡ್ಯ: 2009 ರಿಂದ ಚಾಲನೆ ಗೊಂಡಿರುವ ಪೊಲೀಸ್ ಪತ್ತಿನ ಗೃಹ ನಿರ್ಮಾಣ ಸಂಘವು ಕಳೆದ 12 ವರ್ಷಗಳಿಂದ ಹಣ ಪಾವತಿಸುತ್ತ ಬಂದಿದ್ದು, ನಿವೃತ್ತ ಪೊಲೀಸ್​ ಅಧಿಕಾರಿಗಳಿಗೆ 507 ನಿವೇಶನ ನೀಡುವುದಾಗಿ ಹಣ ಪಡೆದು ನಿವೇಶನ ನೀಡದೆ ಚಳ್ಳೆ ಹಣ್ಣು ತಿನ್ನುಸುತ್ತಿದ್ದ ಅಮರಾವತಿ ಚಂದ್ರಶೇಖರ್​ನನ್ನ ನೋಡಿ ರೋಸಿ ಹೋದ ನಿವೃತ್ತ ಅಧಿಕಾರಿಗಳು ನಗರದ ಅಮರಾವತಿ ಎನ್ ಕ್ಲೈವ್​ನಲ್ಲಿ ಚಂದ್ರಶೇಖರ್​ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಾರ್ಚ್ ಅಂತ್ಯದೊಳಗೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದಾನೆ.

ದಿ.ಅಂಬರೀಶ್ ಆಪ್ತನಾಗಿರುವ ಅಮರಾವತಿ ಚಂದ್ರಶೇಖರ್ 2009ರಲ್ಲಿ ನಿವೇಶನ ಭರವಸೆ ನೀಡಿದ್ದಾನೆ.ಅಮರಾವತಿ ಡೆವಲಪರ್ಸ್ ಜೊತೆ ಸೇರಿ ಬೂದನೂರು ಬಳಿ 27 ಎಕರೆ ಕೃಷಿ ಜಮೀನು ಖರೀದಿಸಿದ್ದ. ಸಹಕಾರ ಸಂಘ ತಲಾ 4.20 ಲಕ್ಷದಂತೆ 507 ಸದಸ್ಯರಿಂದ 18.82 ಕೋಟಿ ಸಂದಾಯ ಮಾಡಿ 12 ವರ್ಷಗಳಿಂದ ಇಲ್ಲಸಲ್ಲದ ಕಾರಣ‌ ನೀಡಿ ಸೈಟ್ ಹಂಚಲು ಹಿಂದೇಟು ಹಾಕುತ್ತಿದ್ದು. ಜಮೀನಿನ ಮೇಲೆ 5 ಕೋಟಿ ಸಾಲ‌ ಪಡೆದು ವಂಚಿಸಿದ್ದಾರೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ಪತ್ತಿನ ಗೃಹ ನಿರ್ಮಾಣ ಸಂಘದಿಂದ ಆರೋಪಿಸಲಾಗಿದೆ.

ಮೈಸೂರು: ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಗುಜರಾತ್​ನಿಂದ ಬಂದಿದ್ದ ಪ್ರವಾಸಿಗರ ಬಸ್‌ನಲ್ಲಿ ಡೀಸೆಲ್‌ ಸೋರಿಕೆಯಿಂದ ಸೈಲೆನ್ಸರ್ ಪೈಪ್ ನಿಂದ ಇದ್ದಕ್ಕಿದ್ದಂತೆ ಹೊಗೆ ಬಂದು ಬಳಿಕ ಪೈಪ್​ನಿಂದ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕೆಳಗಿಳಿದ ಚಾಲಕ ಸಂಪರ್ಕದ ವೈರ್‌ಗಳನ್ನು ಕಟ್ ಮಾಡಿ ದೊಡ್ಡ ಅನಾಹುತವನ್ನ ತಪ್ಪಿಸಿದ್ದಾನೆ.

ಕೆಎಸ್​​ಆರ್​ಟಿಸಿ ಬಸ್​ ಹಾಗೂ ಟ್ರಕ್​ ನಡುವೆ ಡಿಕ್ಕಿ; ವಿದ್ಯಾರ್ಥಿ ಸಾವು

ಬಾಗಲಕೋಟೆ ತಾಲೂಕಿನ ಗದ್ದನಕೇರಿ ಸಮೀಪ ಕೆಎಸ್​​ಆರ್​ಟಿಸಿ ಬಸ್​ ಹಾಗೂ ಟ್ರಕ್​ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಬಸ್​​ನಲ್ಲಿದ್ದ ವಿದ್ಯಾರ್ಥಿ ರಾಹುಲ್ ಪಾಟೀಲ್(17) ಸಾವನ್ನಪಿದ್ದಾನೆ. ಇನ್ನು 14 ಪ್ರಯಾಣಿಕರಿಗೆ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ರಾಹುಲ್ ಪಾಟೀಲ್ ಬೀಳಗಿ ತಾಲೂಕಿನ ಅರಕೇರಿ ನಿವಾಸಿಯಾಗಿದ್ದು, ಲಾರಿ ಚಾಲಕನ ಅಚಾತುರ್ಯದಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ