ಬೂದನೂರು ಉತ್ಸವ: ಗಂಗಾರತಿ ಮೂಲಕ ಹಿಂದುತ್ವ ತೋರಿದ್ದೇವೆ: ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್

| Updated By: Rakesh Nayak Manchi

Updated on: Mar 03, 2024 | 9:29 PM

ನಿನ್ನೆ ಆರಂಭವಾದ ಮಂಡ್ಯದ ಬೂದನೂರು ಉತ್ಸವ ಇಂದು ಮುಕ್ತಾಯಗೊಂಡಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್, ಇದು ಅಂತ್ಯವಲ್ಲ, ಆರಂಭ. ನಮ್ಮನ್ನ ಹಿಂದೂ ವಿರೋಧಿಗಳು ಅಂತ ಕೆಲವರು ಹೇಳಿದರು. ನಿನ್ನೆ ಗಂಗಾರತಿ ಮೂಲಕ ಹಿಂದುತ್ವ ತೋರಿದ್ದೇವೆ ಎಂದರು. ಸಂಸದೆ ಸಮುಲತಾ ಮಾತನಾಡಿ, ಬೂದನೂರು ಅಂದ್ರೆ ತುಂಬಾ ನೆನಪು, ಅಂಬರೀಶ್ ಅವರಿಗೆ ಅವಿನಾಭಾವ ಸಂಬಂಧ ಇದೆ. ಅಂಬರೀಶ್ ಅವರು ದೇವಸ್ಥಾನಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.

ಬೂದನೂರು ಉತ್ಸವ: ಗಂಗಾರತಿ ಮೂಲಕ ಹಿಂದುತ್ವ ತೋರಿದ್ದೇವೆ: ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್
ಗಂಗಾರತಿ ಮೂಲಕ ಹಿಂದುತ್ವ ತೋರಿದ್ದೇವೆ ಎಂದು ಬೂದನೂರು ಉತ್ಸವದಲ್ಲಿ ಹೇಳಿದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್
Follow us on

ಮಂಡ್ಯ, ಮಾ.3: ಬೂದನೂರು ಉತ್ಸವ (Budanoor Festival) ಅದ್ದೂರಿಯಾಗಿ ನೆಡೆದಿದೆ. ಇದು ಅಂತ್ಯವಲ್ಲ ಆರಂಭ. ನಮ್ಮನ್ನ ಹಿಂದೂ ವಿರೋಧಿಗಳು ಅಂತ ಕೆಲವರು ಹೇಳಿದ್ದರು. ನಿನ್ನೆ ಗಂಗಾರತಿ ಮೂಲಕ ಹಿಂದುತ್ವ ತೋರಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Ganiga Ravikumar) ಹೇಳಿದರು. ಬೂದನೂರು ಉತ್ಸವದಲ್ಲಿ ಮಾತನಾಡಿದ ಅವರು, ಕಾಶಿ ವಿಶ್ವನಾಥ, ಪದ್ಮನಾಭ ದೇವಸ್ಥಾನದ ಇತಿಹಾಸ ತಿಳಿಸಿದ್ದೇವೆ. ಸಾವಿರಾರು ವರ್ಷದ ಇತಿಹಾಸ ವೈಶಿಷ್ಟ ಇದೆ‌. ಧಾರ್ಮಿಕ ವೈಶಿಷ್ಟವನ್ನ ಜನರಿಗೆ ತಿಳಿಸಬೇಕು. ಒಬ್ಬ ಶಾಸಕನ ಕೆಲಸ ರಸ್ತೆ ಮಾಡುವುದಲ್ಲ. ಜನರ ಸಮಸ್ಯೆಗಳನ್ನು ಸುಧಾರಿಸುವ ಕೆಲಸ ಮಾಡುತ್ತಿದ್ದೇವೆ. ಬೂದನೂರು ಉತ್ಸವದಿಂದ ಜನರ ಆರ್ಥಿಕತೆ ಬೆಳೆಯುತ್ತದೆ ಎಂದರು.

ನಮ್ಮ ಸರ್ಕಾರ ಹೊಸ ಸಕ್ಕರೆ ಕಾರ್ಖಾನೆ ಮಾಡುತ್ತೇವೆ. ಶೀಘ್ರವಾಗಿ ಗುದ್ದಲಿ ಪೂಜೆ ಮಾಡುತ್ತೇವೆ. ಹಳೆಯ ಶುಗರ್ ಕಾರ್ಖಾನೆ ಬಳಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣ ಮಾಡುತ್ತೇವೆ ಎಂದು ಸಂಸದೆ ಸುಮಲತಾ ಅಂಬರೀಶ್ ಮುಂದೆಯೇ ರವಿಕುಮಾರ್ ಹೇಳಿದರು. ಮೈಷುಗುರ ಫ್ಯಾಕ್ಟಿರಿ ಬಳಿ ಪಾರ್ಕ್ ನಿರ್ಮಾಣವನ್ನು ಸುಮಲತಾ ಅವರು ವಿರೋಧಿಸುತ್ತಿದ್ದು, ಇದನ್ನು ಮುಟ್ಟಬಾರದು ಎಂಬ ಎಚ್ಚರಿಕೆಯನ್ನು ಇಂದು ನೀಡಿದ್ದರು.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಮಂಡ್ಯದಲ್ಲಾದ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಕಾಂಗ್ರೆಸ್

ಇಟ್ಟ ಹೆಜ್ಜೆಯನ್ನ ಹಿಂದೆ ಹಿಡಿಯುವ ಜಯಮಾನವಲ್ಲ. ನಮ್ಮನ್ನ ಹಿಂದೂ ವಿರೋಧಿಗಳು ಅಂತ ಕೆಲವರು ಹೇಳಿದ್ದರು. ನಿನ್ನೆ ಗಂಗಾರತಿ ಮೂಲಕ ಹಿಂದುತ್ವ ತೋರಿದ್ದೇವೆ. ಮುಖ್ಯಮಂತ್ರಿ ಅವರ ಕೈಯಲ್ಲಿ ಮಾ. 10 ರಂದು ತಮಿಳು ಕಾಲೋನಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತೇವೆ. ಒಂದು ವರ್ಷದಲ್ಲಿ ಎಲ್ಲರಿಗೂ ಹಕ್ಕು ಪತ್ರ ವಿತರಣೆ ಮಾಡುತ್ತೇವೆ. ಬೂದನೂರು ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಂದರು.

ಮಾ.10 ರ ಒಳಗೆ ಉಪವಾಸ ಸತ್ಯಗ್ರಹ

ಮಾ.10 ರ ಒಳಗೆ NHIA ಕಚೇರಿ ಮುಂದೆ ಉಪವಾಸ ಸತ್ಯಗ್ರಹ ಕೂರುತ್ತೇನೆ. ಅಂಬರೀಶ್ ಅವರ ಹೆಸರನ್ನು ನಗರಸಭೆ ಸಭೆಯಲ್ಲಿ ಚರ್ಚೆ ಮಾಡಿ ರಸ್ತೆಗೆ ಹೆಸರು ಇಡುತ್ತೇವೆ. ಹಿಂದೆ ಬಿಜೆಪಿ ಸರ್ಕಾರ ಇತ್ತು ಮಾಡಬಹುದಿತ್ತು. ನಮ್ಮ ಸರ್ಕಾರ ಖಂಡಿತವಾಗಿಯೂ ಅಂಬರೀಶ್ ಹೆಸರನ್ನು ಉಳಿಸುತ್ತೇವೆ ಎಂದರು.

ಪತಿ ಅಂಬರೀಶ್ ನೆನಪಿಸಿಕೊಂಡ ಸುಮಲತಾ

ಬೂದನೂರು ಉತ್ಸವದಲ್ಲಿ ಪತಿ ಅಂಬರೀಶ್ ಅವರನ್ನು ನೆನಪಿಸಿಕೊಂಡ ಸಂಸದೆ ಸುಮಲತಾ (Sumalatha), ಬೂದನೂರು ಅಂದರೆ ತುಂಬಾ ನೆನಪು, ಅಂಬರೀಶ್ ಅವರಿಗೆ ಅವಿನಾಭಾವ ಸಂಬಂಧ ಇದೆ. ಅಂಬರೀಶ್ ಅವರು ದೇವಸ್ಥಾನಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಬೂದನೂರು ಗ್ರಾಮಸ್ಥರು ಪಂಚಪಾಂಡವರು ಅಂತ ಕರೆಯುತ್ತಿದ್ದರು. ಅಂಬರೀಶ್ ಎಂಪಿ ಅಗಿದ್ದ ಕಾಲದಲ್ಲಿ 1 ಕೋಟಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗಿತ್ತು. 3 ಕೋಟಿಯಷ್ಟು ಬೂದನೂರು ಗ್ರಾಮಕ್ಕೆ ನೀಡಿದ್ದಾರೆ ಎಂದರು.

ಕಳೆದ ವರ್ಷ ಪ್ರವಾಹ ಆಗಿ ಸಮಸ್ಯೆ ಆಗಿತ್ತು. ನಾನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ನಿಂತು ಸಮಸ್ಯೆ ಬಗೆಹರಿಸಿದ್ದೇನೆ‌. ಕಾಶಿ ವಿಶ್ವನಾಥ ದೇವಸ್ಥಾನ ಅಭಿವೃದ್ಧಿಗೆ 30 ಲಕ್ಷ ಕೊಟ್ಟಿದ್ದೇನೆ. ಸಂಸದರ ನಿಧಿಯಲ್ಲಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಗೆ ಅಂಬರೀಶ್ ಕೊಡುಗೆ 25 ವರ್ಷ ಏನಿತ್ತು ಅಂತ ಜನತೆಗೆ ಗೊತ್ತಿದೆ. ಅವರು ಜಿಲ್ಲೆಗೆ ಸಲ್ಲಿಸಿದ ಸೇವೆ ಅಪಾರ. ಮಂಡ್ಯದ ಗಂಡು ಅಂತ ಗುರುತಿಸಿಕೊಂಡಿದ್ದಾರೆ. ನನಗೆ ಪ್ರಚಾರ ಸಿಗಬೇಕು ಅಂತ ನಡೆದುಕೊಂಡಿಲ್ಲ. ಅಂಬರೀಶ್ ಪ್ರಚಾರ ಪ್ರಿಯರಾಗಿರಲಿಲ್ಲ ಎಂದರು.

ಮಂಡ್ಯದಲ್ಲಿ ಅಂಬರೀಶ್ ಹೆಸರು, ಪುತ್ಥಳಿ ಆಗಿಲ್ಲ. ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಇದ್ದಂತ ಪಕ್ಷ ಕಾಂಗ್ರೆಸ್ ಆಡಳಿತದಲ್ಲಿದೆ. ರಾಜಕಾರಣ ಸ್ಥಿತಿ ಗತಿ ಬದಲಾವಣೆ ಬೇರೆ. ಪಕ್ಷ ಯಾವುದೇ ಕಾರಣಕ್ಕೂ ಮರೆಯಬಾರದು. ಅಂಬರೀಶ್ ಅವರ ಒಂದು ಸಣ್ಣ ನೆನಪುಬೇಕು. ಮೊದಲ ಬಾರಿಗೆ ಬೂದನೂರು ಉತ್ಸವ ನಡೆಯುತ್ತಿದೆ‌. ಭಾರತದಲ್ಲಿ ಮಂಡ್ಯದ ಬಗ್ಗೆ ಮಾತನಾಡುತ್ತಾರೆ. ಮಂಡ್ಯ ಗತ್ತು ಅಂದರೆ ಇಡೀ ಇಂಡಿಯಾಗೆ ಗೊತ್ತು ಎಂದರು.

ಅರ್ಜುನ್ ಜನ್ಯ ತಂಡದಿಂದ ಸಂಗೀತ ರಸಸಂಜೆ

ಬೂದನೂರು ಉತ್ಸವಕ್ಕೆ ನಿನ್ನೆ ಚಾಲನೆ ನೀಡಲಾಗಿತ್ತು. ಇಂದು ಉತ್ಸವದ ಕೊನೆಯ ದಿನವಾಗಿದ್ದು, ಇಂದೂ ಅದ್ಧೂರಿಯಾಗಿ ನೆರವೇರಿತು. ಅನಂತ ಪದ್ಮನಾಭ ಹಾಗೂ ಕಾಶಿವಿಶ್ವನಾಥನ ದೇವಸ್ಥಾನದ ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ