ಹುಟ್ಟು ಕೋಟ್ಯಧೀಶರಾಗಿದ್ದ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್​ ಚಂದ್ರು ಬಳಿ ಈಗ ಆಸ್ತಿ ಎಷ್ಟಿದೆ ಗೊತ್ತಾ?

| Updated By: Rakesh Nayak Manchi

Updated on: Apr 01, 2024 | 5:33 PM

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಇಂದು ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರದಲ್ಲಿ ಸ್ಟಾರ್ ಚಂದ್ರು ಅವರು ತಮ್ಮ ಹೆಸರಿನಲ್ಲಿರುವ ಆಸ್ತಿ ಹಾಗೂ ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿ ಮೌಲ್ಯದ ಬಗ್ಗೆ ಉಲ್ಲೇಖಿಸಿದ್ದಾರೆ.

ಹುಟ್ಟು ಕೋಟ್ಯಧೀಶರಾಗಿದ್ದ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್​ ಚಂದ್ರು ಬಳಿ ಈಗ ಆಸ್ತಿ ಎಷ್ಟಿದೆ ಗೊತ್ತಾ?
ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರ ಆಸ್ತಿ ಮೌಲ್ಯ ಘೋಷಣೆ
Follow us on

ಮಂಡ್ಯ, ಏ.1: ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರ ಪುತ್ರ, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧವೇ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru)ಎಂದು ಕರೆಯಲ್ಪಡುವ ವೆಂಕಟರಾಮೇಗೌಡ ಅವರು ಇಂದು ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದರು. ಉಮೇದುವಾರಿಕೆಯಲ್ಲಿ ಸ್ಟಾರ್ ಚಂದ್ರು ಅವರು ತಮ್ಮ ಹಾಗೂ ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿ ಮೌಲ್ಯಗಳ ಬಗ್ಗೆ ಘೋಷಣೆ ಮಾಡಿದ್ದಾರೆ.

ದೊಡ್ಡ ದೊಡ್ಡ ಮಟ್ಟದ ಕಾಮಗಾರಿಗಳನ್ನು ನಡೆಸುವ ಸ್ಟಾರ್‌ ಬಿಲ್ಡರ್ಸ್‌ ಎಂಬ ಕಂಪನಿಯ ಒಡೆದತನ ಹೊಂದಿರುವ ವೆಂಕಟರಾಮೇಗೌಡ ಅವರು 410 ಕೋಟಿ ಒಡೆಯರಾಗಿದ್ದಾರೆ. ವೆಂಕಟರಾಮೇಗೌಡ ಅವರ ಹೆಸರಿನಲ್ಲಿ 237 ಕೋಟಿ ರೂ. ಮೌಲ್ಯದ ಆಸ್ತಿ ಇದ್ದು, ಪತ್ನಿ ಕುಸುಮ ಹೆಸರಲ್ಲಿ 146 ಕೋಟಿ ಮೌಲ್ಯದ ಆದಾಯ ಇರುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್‌ ಚಂದ್ರು ಯಾರು? ಅವರ ಹಿನ್ನೆಲೆ ಏನು? ಸ್ಟಾರ್ ಬಂದಿದ್ದೇಗೆ?

ಹುಟ್ಟವಾಗಲೇ ಸ್ಟಾರ್ ಚಂದ್ರು ಕೋಟ್ಯಾಧೀಶ

ಸ್ಟಾರ್ ಚಂದ್ರುಗೆ 26 ಕೋಟಿ ಮೌಲ್ಯದ ಆಸ್ತಿ ಪಿತ್ರಾರ್ಜಿತವಾಗಿ (ಅವಿಭಕ್ತ ಕುಟುಂಬದ ಆಸ್ತಿ) ಬಂದಿದೆ. ಸದ್ಯ, ಇವರ ಬಳಿ 99.36 ಕೋಟಿ ರೂಪಾಯಿ ಚರಾಸ್ತಿ ಇದ್ದು, ಪತ್ನಿ ಕುಸುಮ ಹೆಸರಲ್ಲಿ 4.20 ಕೋಟಿ ಚರಾಸ್ತಿ ಇದೆ.

ಸ್ಟಾರ್ ಚಂದ್ರು ಹೆಸರಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲ. 15 ಕೋಟಿ ರೂಪಾಯಿ ಸಾಲ ಮಾಡಿರುವ ಇವರು, ಉದ್ಯಮಿಯಾಗಿ ಕಾಲಕಾಲಕ್ಕೆ ತೆರಿಗೆ ಪಾವತಿಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಘೋಷಣೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ