ಅಪ್ರಾಪ್ತರ ಪ್ರೀತಿ, ಬಾಲಕನ ಹತ್ಯೆ ಪ್ರಕರಣ; ನೇಣು ಬಿಗಿದುಕೊಂಡು ಬಾಲಕಿಯೂ ಸಾವು

4 ತಿಂಗಳಿನಿಂದ ಪೋಷಕರನ್ನು ನೋಡದೆ ಬಾಲಕಿಗೆ ಖಿನ್ನತೆ ಆಗಿತ್ತು ಎಂದು ಹೇಳಲಾಗಿತ್ತು. ಖಿನ್ನತೆಯಿಂದ ಬಾಲಕಿ ನೇಣು ಹಾಕಿಕೊಂಡಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಅಪ್ರಾಪ್ತರ ಪ್ರೀತಿ, ಬಾಲಕನ ಹತ್ಯೆ ಪ್ರಕರಣ; ನೇಣು ಬಿಗಿದುಕೊಂಡು ಬಾಲಕಿಯೂ ಸಾವು
ಪ್ರಾತಿನಿಧಿಕ ಚಿತ್ರ
Edited By:

Updated on: Aug 31, 2021 | 4:12 PM

ಮಂಡ್ಯ : ಇತ್ತೀಚಿಗೆ ಜಿಲ್ಲೆಯ ಕಲ್ಲಹಳ್ಳಿಯಲ್ಲಿ ನಡೆದ ಅಪ್ರಾಪ್ತರ ಪ್ರೀತಿ, ಬಾಲಕನ ಹತ್ಯೆ ಪ್ರಕರಣದ ನಂತರ ಬಾಲಮಂದಿರದಲ್ಲಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಪ್ರಾಪ್ತ ಬಾಲಕ ಮತ್ತು ಬಾಲಕಿ ಪ್ರೀತಿಸಿದ ವಿಷಯ ತಿಳಿದು ಬಾಲಕಿಯ ಪೋಷಕರು ಬಾಲಕನನ್ನು ಏಪ್ರಿಲ್ 15ರಂದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಾಲಕಿ ತಂದೆ ಸೇರಿ 17 ಜನರ ವಿರುದ್ಧ ದೂರು ದಾಖಲಾಗಿತ್ತು. ಕೊಲೆ ಆರೋಪದಡಿ ಬಾಲಕಿಯ ಪೋಷಕರು ಜೈಲಿನಲ್ಲಿದ್ದರು. ಹೀಗಾಗಿ ಬಾಲಕಿಗೆ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿತ್ತು. 4 ತಿಂಗಳಿನಿಂದ ಪೋಷಕರನ್ನು ನೋಡದೆ ಬಾಲಕಿಗೆ ಖಿನ್ನತೆ ಆಗಿತ್ತು ಎಂದು ಹೇಳಲಾಗಿತ್ತು. ಖಿನ್ನತೆಯಿಂದ ಬಾಲಕಿ ನೇಣು ಹಾಕಿಕೊಂಡಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ: ಜಿಲ್ಲೆಯಲ್ಲಿ ಬಡ್ಡಿ ವ್ಯವಹಾರ ದಂದೆ ಮಿತಿ ಮೀರಿದೆ ಎಂಬ ಆರೋಪ ಕೇಳೀಬಂದಿದ್ದು, ಈಸಂಬಂಧ ಪ್ರಕರಣವೊಂದು ದಾಖಲಾಗಿದೆ. ಪತಿ ಮಾಡಿದ್ದ ಸಾಲದಿಂದಾಗಿ ಪತ್ನಿ ಸಂಕಷ್ಟ ಪಡಬೇಕಾದ ಪ್ರಕರಣವೊಂದು ದಾಖಲಾಗಿದೆ. ಖಾಸಗಿ ಫೈನಾನ್ಸ್ ಒಂದರಿಂದ ಮೊಹಮ್ಮದ್ ಎಂಬಾತ 3 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಸಾಲ ಮರುಪಾವತಿಸದ ಕಾರಣ ಮೊಹಮದ್ ಅವರ ಪತ್ನಿಯನ್ನು ಫೈನಾನ್ಸ್ ಮಾಲೀಕರು ತಮ್ಮ ಕಚೇರಿಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕೂಡಿಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ. ಈಕುರಿತು ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: 

Bengaluru Wheeling: ಬೆಂಗಳೂರಿನಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಅಪ್ರಾಪ್ತರೂ ಸೇರಿ 6 ಯುವಕರ ಸೆರೆ; 8 ಬೈಕ್ ವಶಕ್ಕೆ

11 ತಿಂಗಳ ಮಗು ಮತ್ತು 11 ವರ್ಷದ ಬಾಲಕಿಗೆ ಕಂಡುಬಂದಿದ್ದ 2 ಅನ್ನನಾಳದ ಸಮಸ್ಯೆ; ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ, ಗುಣಮುಖ

(Mandya Love of minors murder of a boy girl hanged herself)