ರೈತರಿಗೆ ಬಿಗ್ ಶಾಕ್: ಲೀಟರ್ ಹಾಲಿಗೆ 1.50 ರೂ. ಇಳಿಸಿದ ಮನ್ಮುಲ್
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಿದೆ. ಹೌದು ಹಾಲಿನ ದರ ಇಳಿಕೆ ಮಾಡಿ, ಪಶು ಆಹಾರದ ಬೆಲೆ ಏರಿಕೆ ಮಾಡಿದೆ. ಇದರಿಂದ ಹೈನುಗಾರಿಕೆ ನಂಬಿಕೊಂಡಿರುವ ಮಂಡ್ಯ ರೈತರು ಕಂಗಾಲ ಆಗಿದ್ದಾರೆ. ಪ್ರತೀ ಲೀಟರ್ ಹಾಲಿಗೆ 1.50 ರೂ. ಇಳಿಸಿ ಮನ್ಮುಲ್ ಆದೇಶ ಹೊರಡಿಸಿದೆ.
ಮಂಡ್ಯ, ಡಿಸೆಂಬರ್ 26: ಮುಂಗಾರು (Monsoon) ಮತ್ತು ಹಿಂಗಾರು ಮಳೆ ಕೈಕೊಟ್ಟಿದೆ. ಇದರಿಂದ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಮತ್ತೊಂದಡೆ ತಮಿಳನಾಡಿಗೆ ನಿತ್ಯ ಕಾವೇರಿ (Cauvery) ನೀರು ಹರಿಸಲಾಗುತ್ತಿದೆ. ಇದರಿಂದ ಜಲಾಶಯದಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬೆಳೆಗಳಿಗೆ ನೀರಿಲ್ಲದೆ ರೈತರು ಪರದಾಡುತ್ತಿದ್ದಾರೆ. ಇದರ ನಡುವೆಯೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (Manmul) ಅನ್ನದಾತರ ಗಾಯದ ಮೇಲೆ ಬರೆ ಎಳೆದಿದೆ. ಹೌದು ಹಾಲಿನ (Milk) ದರ ಇಳಿಕೆ ಮಾಡಿ, ಪಶು ಆಹಾರದ ಬೆಲೆ ಏರಿಕೆ ಮಾಡಿದೆ.
ಇದರಿಂದ ಹೈನುಗಾರಿಕೆ ನಂಬಿಕೊಂಡಿರುವ ಮಂಡ್ಯ ರೈತರು ಕಂಗಾಲ ಆಗಿದ್ದಾರೆ. ಪ್ರತೀ ಲೀಟರ್ ಹಾಲಿಗೆ 1.50 ರೂ. ಇಳಿಸಿ ಮನ್ಮುಲ್ ಆದೇಶ ಹೊರಡಿಸಿದೆ. ಮತ್ತೊಂದೆಡೆ ಪಶು ಆಹಾರದ ಬೆಲೆ ಚೀಲಕ್ಕೆ 50 ರೂ. ಏರಿಕೆ ಮಾಡಿದೆ. ಈ ಪರಿಷ್ಕೃತ ದರ ಡಿಸೆಂಬರ್ 1ರಿಂದಲೇ ಜಾರಿಗೆ ಬಂದಿದೆ. ಮನ್ಮುಲ್ ಈ ಹಿಂದೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ 33.50 ರೂ ನೀಡುತ್ತಿತ್ತು. ಇದೀಗ 1.50 ರೂ. ಕಡಿತಗೊಳಿಸಿ 32 ರೂ. ನಿಗದಿ ಮಾಡಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಜೆಡಿಎಸ್ಗೆ ಮತ್ತೊಂದು ಶಾಕ್: ಮನ್ಮುಲ್ ಕಾಂಗ್ರೆಸ್ ತೆಕ್ಕೆಗೆ, ದಳಪತಿಗಳಿಗೆ ಮುಖಭಂಗ
ಬರದ ನಡುವೆಯೂ ಹಾಲಿನ ದರ ಇಳಿಕೆ ಮಾಡಿರುವುದಕ್ಕೆ ಮನ್ಮುಲ್ ಆಡಳಿತ ಮಂಡಳಿ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಕೂಡಲೇ ದರ ಹೆಚ್ಚಳ ಮಾಡದಿದ್ದರೇ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 am, Tue, 26 December 23