ಮಂಡ್ಯದಲ್ಲಿ ಜೆಡಿಎಸ್​ಗೆ ಮತ್ತೊಂದು ಶಾಕ್: ಮನ್ಮುಲ್ ಕಾಂಗ್ರೆಸ್ ತೆಕ್ಕೆಗೆ, ದಳಪತಿಗಳಿಗೆ ಮುಖಭಂಗ

ಜಿದ್ದಾಜಿದ್ದಿಯಿಂದ ಕೂಡಿದ್ದ ಮನ್ಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್​ ಗೆದ್ದು ಬೀಗಿದೆ. ಇದರಿಂದ ಜೆಡಿಎಸ್​ಗೆ ಮಂಡ್ಯದಲ್ಲಿ ಮತ್ತೊಂದು ಮುಖಭಂಗವಾಗಿದೆ.

ಮಂಡ್ಯದಲ್ಲಿ ಜೆಡಿಎಸ್​ಗೆ ಮತ್ತೊಂದು ಶಾಕ್: ಮನ್ಮುಲ್ ಕಾಂಗ್ರೆಸ್ ತೆಕ್ಕೆಗೆ, ದಳಪತಿಗಳಿಗೆ ಮುಖಭಂಗ
ಜೆಡಿಎಸ್​​, ಕಾಂಗ್ರೆಸ್​
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jul 24, 2023 | 12:17 PM

ಮಂಡ್ಯ, (ಜುಲೈ 24): ವಿಧಾನಸಸಭೆ ಚುನಾವಣೆಯಲ್ಲಿ (Karnataka Assembly Elections 2023) ಮಂಡ್ಯ ಜೆಡಿಎಸ್ (Mandya) ಭದ್ರಕೋಟೆಯನ್ನೇ ಛಿದ್ರ ಛಿದ್ರ ಮಾಡಿದ್ದ ಕಾಂಗ್ರೆಸ್ (Congress)​, ಇದೀಗ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟವನ್ನು ( ಮನ್ಮುಲ್) ಸಹ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಮನ್ಮುಲ್ ( mega dairy of Mandya Milk Union (Manmul)) ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಇಂದು (ಜುಲೈ 24) ನಡೆದ ಮನ್ಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್​ನ ಬೋರೇಗೌಡ ಅವರು ಗೆಲುವು ಸಾಧಿಸಿದ್ದಾರೆ. ನಾಲ್ವರು ಅಧಿಕಾರಿಗಳ ಜೊತೆಗೆ ಓರ್ವ ಬಿಜೆಪಿ ಬೆಂಬಲಿತ ಸ್ವಾಮಿಯ ನೆರವಿನಿಂದ ಅಧಿಕಾರ ಹಿಡಿವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮಂಡ್ಯದಲ್ಲಿ ಜೆಡಿಎಸ್​ ಮತ್ತೊಂದು ಅಧಿಕಾರ ಕಳೆದುಕೊಂಡಿದೆ.

ಇದನ್ನೂ ಓದಿ: ಮಂಡ್ಯದೊಳಗೆ ನುಗ್ಗಿ ಜೆಡಿಎಸ್ ಭದ್ರಕೋಟೆಯನ್ನ ಛಿದ್ರ ಗೊಳಿಸಿದ ಕಾಂಗ್ರೆಸ್​ ಮುಂದಿದೆ ಮತ್ತೊಂದು ಟಾರ್ಗೆಟ್

ತೀವ್ರ ಕುತೂಹಲ ಮೂಡಿಸಿದ್ದ ಮನ್ ಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಗೆಲ್ಲಲು 9 ಮತಗಳು ಬೇಕಿತ್ತು. ಈ ಪೈಕಿ ಕಾಂಗ್ರೆಸ್, ತನ್ನ ಪಕ್ಷದ ನಿರ್ದೇಶಕರು, ಓರ್ವ ನಾಮ ನಿರ್ದೇಶಕ ಸದಸ್ಯ, ನಾಲ್ವರು ಅಧಿಕಾರಿಗಳ ಬೆಂಬಲದ ಜೊತೆಗೆ ಬಿಜೆಪಿ ಬೆಂಬಲಿತ ಸ್ವಾಮಿಯ ನೆರವಿನಿಂದ ಗೆದ್ದು ಬೀಗಿದೆ. ಕೋರಂ ಅಭಾವ ಉಂಟಾಗಲಿ ಎಂದು ಇಂದು ಸಹ ಚುನಾವಣೆ ಪ್ರಕ್ರಿಯೆಗೆ ಜೆಡಿಎಸ್ ಬೆಂಬಲಿತ ನಿರ್ದೇಶಕರು ಗೈರಾಗಿದ್ದರು. ಆದ್ರೆ, ಜೆಡಿಎಸ್ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ.

ಮನ್ಮುಲ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಪೈಪೋಟಿ ಶುರುವಾಗಿದ್ದು, 2 ಪಕ್ಷಗಳಿಗೂ ಬಿಜೆಪಿ ಬೆಂಬಲಿತರ ನಿರ್ದೇಶಕರ ಬೆಂಬಲ ಅನಿವಾರ್ಯವಾಗಿತ್ತು. ಆದ್ರೆ, ಅಂತಿಮವಾಗಿ ಬಿಜೆಪಿ ಬೆಂಬಲಿತ ನಿರ್ದೇಶಕ ಕಾಂಗ್ರೆಸ್​ ಕೈ ಹಿಡಿದಿದ್ದಾರೆ.

2018ರಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 7ಕ್ಕೆ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಕ್ಲೀನ್​ ಸ್ವಿಪ್​ ಮಾಡಿದ್ದ ಜೆಡಿಎಸ್‌, ಈಗ ಒಂದು ಸ್ಥಾನಕ್ಕೆ ಕುಸಿದು ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದೆ. ಇದರ ಮಧ್ಯೆ ಇದೀಗ ಮನ್‌ಮುಲ್‌ ಆಡಳಿತ ಚುಕ್ಕಾಣಿಯನ್ನುಕಳೆದುಕೊಂಡಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:59 am, Mon, 24 July 23