AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tea Seller: ಅಂದು ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿ, ಇಂದು ದೇವಸ್ಥಾನದ ಮುಂದೆ ಟೀ ಮಾರುತ್ತಿದ್ದ ಮಹಿಳೆಗೆ ಒಲಿಯಿತು ಗ್ರಾ.ಪಂ. ಅಧ್ಯಕ್ಷ ಸ್ಥಾನ!

Urdigere Gram Panchayat: ಗ್ರಾ.ಪಂ‌ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ತುಮಕೂರಿನ ಉರ್ಡಿಗೆರೆ ಗ್ರಾ.ಪಂ. ಸದಸ್ಯರು ಅನ್ನಪೂರ್ಣಮ್ಮ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

Tea Seller: ಅಂದು ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿ, ಇಂದು ದೇವಸ್ಥಾನದ ಮುಂದೆ ಟೀ ಮಾರುತ್ತಿದ್ದ ಮಹಿಳೆಗೆ ಒಲಿಯಿತು ಗ್ರಾ.ಪಂ. ಅಧ್ಯಕ್ಷ ಸ್ಥಾನ!
ದೇವಸ್ಥಾನದ ಮುಂದೆ ಟೀ ಮಾರುತ್ತಿದ್ದ ಮಹಿಳೆಗೆ ಒಲಿಯಿತು ಗ್ರಾ.ಪಂ. ಅಧ್ಯಕ್ಷ ಸ್ಥಾನ!
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ | Edited By: ಸಾಧು ಶ್ರೀನಾಥ್​|

Updated on: Jul 24, 2023 | 8:26 AM

Share

ತುಮಕೂರು, ಜುಲೈ 24: ಅದೃಷ್ಟ ಯಾರಿಗೆ ಒಲಿಯುತ್ತೆ ಅನ್ನೋದನ್ನ ನಿಜಕ್ಕೂ ಯಾರ ಕೈಯಲ್ಲೂ ಊಹಿಸೋಕೂ ಆಗೋಲ್ಲ.. ಚಹಾ ಮಾರುತ್ತಿದ್ದ ಒಬ್ಬ ವ್ಯಕ್ತಿ ಇಂದು ದೇಶದ ಪ್ರಧಾನಿಯಾಗಿದ್ದಾರೆ.. ಅದೇ ಧಾಟಿಯಲ್ಲಿ ಹೇಳುವುದಾದರೆ ಚಹ ಮಾರುವವರಿಗೆ ಶುಕ್ರದೆಸೆ ತಿರುಗಿ, ದೇವಸ್ಥಾನದ ಮುಂದೆ ಟೀ ಮಾರಾಟ ಮಾಡುತ್ತಿದ್ದ ಮಹಿಳೆ (Woman) ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಯಸ್.. ಚಹ ಮಾರಾಟ ಮಾರುವವರಿಗೆ ಶುಕ್ರದೆಸೆ ಕೂಡಿ ಬಂದಿದೆ ಅಂದ್ರೆ ನಿಜಕ್ಕೂ ತಪ್ಪಾಗಲ್ಲ.. ಯಾಕಂದ್ರೆ ಒಬ್ಬ ವ್ಯಕ್ತಿ ಟೀ ಮಾರಾಟ ಮಾಡಿ ಇಂದು ದೇಶದ ಪ್ರಧಾನಿಯಾಗಿದ್ದಾರೆ.. ಅದರ ಜೊತೆಗೆ ತುಮಕೂರು ಜಿಲ್ಲೆಯಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ದೇವಸ್ಥಾನದ ಮುಂದೆ ಟೀ ಮಾರಾಟ ಮಾಡ್ತಿದ್ದ ಮಹಿಳೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.. ಹೌದು.. ತುಮಕೂರು ತಾಲೂಕಿನ ಉರ್ಡಿಗೆರೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನ ನಡೆಸಲಾಯ್ತು.. ದೇವರಾಯದುರ್ಗ ದೇವಾಲಯದ ( Devarayanadurga Temple) ಬಳಿ ಟೀ (Tea Seller) ಮಾರುವ ಅನ್ನಪೂರ್ಣಮ್ಮ ಕಳೆದ ಬಾರಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ದೇವರಾಯನದುರ್ಗದಿಂದ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ರು. ಸದ್ಯ ನಡೆದ ಗ್ರಾ.ಪಂ‌ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ತುಮಕೂರಿನ ಉರ್ಡಿಗೆರೆ ಗ್ರಾ.ಪಂ. (Urdigere Gram Panchayat) ಸದಸ್ಯರು ಅನ್ನಪೂರ್ಣಮ್ಮ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ಇನ್ನು ಟೀ ಮಾರಾಟ ಮಾಡ್ತಿದ್ದ ಮೋದಿ ಇಂದು ದೇಶದ ಪ್ರಧಾನಿಯಾಗಿದ್ದಾರೆ.. ಅವರದ್ದು ದೇಶ ಅಭಿವೃದ್ಧಿ ಕನಸಾದರೆ, ಈಕೆಯದು ಗ್ರಾಮ ಅಭಿವೃದ್ದಿಯ ಕನಸು. ಆದರೆ ಅವ್ರು ಪ್ರಧಾನಿ ಆದ್ಮೇಲೆ ಚಹ ಮಾರೋದು ಬಿಟ್ರು. ಇವ್ರು ಗ್ರಾ.ಪಂ ಅಧ್ಯಕ್ಷೆಯಾದ್ರೂ ಚಹ ಮಾರೋದು ಬಿಡಲ್ಲ. ಹೊಟ್ಟೆ ಪಾಡಿಗೆ ಚಹ, ಗ್ರಾಮ ಸೇವೆಗೆ ಗ್ರಾ.ಪಂ ಅಧ್ಯಕ್ಷೆ ಕೆಲಸ ಎಂದು ಅನ್ನಪೂರ್ಣಮ್ಮ ಅವರು ದೇವಸ್ಥಾನದ ಮುಂದೆ ಟೀ ಮಾರುವ ತಮ್ಮ ಕಾಯಕವನ್ನು ಮುಂದುವರಿಸಿದ್ದಾರೆ. ಜನರ ಕೆಲಸ ಜೊತೆ ಟೀ ಮಾರುವ ಕಾಯಕ ಮುಂದುವರೆಸಿದ್ದು ಅವರಿಗೆ ಸಂತಸ ತಂದಿದೆ ಎಂದು ಪತಿ ನರಸಿಂಹ ಪ್ರಸಾದ್‌‌ ಹೇಳಿದ್ದಾರೆ.

ಒಟ್ನಲ್ಲಿ ದೇವಸ್ಥಾನದ ಮುಂದೆ ಟೀ ಮಾರುವ ಜೊತೆಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಕೆಲಸಗಳ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ತನ್ನ ಕೆಲಸವನ್ನ ಅತ್ಯುತ್ತಮವಾಗಿ ನಿರ್ವಹಿಸೋದಾಗಿ ಅನ್ನಪೂರ್ಣಮ್ಮ ಭರವಸೆ ಕೊಟ್ಟಿದ್ದಾರೆ.. ಅವರ ಕನಸು ನನಸಾಗಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಒಲಿದುಬಂದಿದ್ದಕ್ಕೆ ಅನ್ನಪೂರ್ಣಮ್ಮ ಪುಲ್ ಖುಷಿಯಾಗಿದ್ದಾರೆ.

ತುಮಕೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ