AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನ್‌ ಮಾಡಿ ಮೈದಾನಕ್ಕೆ ಕರೆಸಿ ಫೈನಾನ್ಸ್‌ ವ್ಯವಹಾರ ಮಾಡ್ತಿದ್ದವನನ್ನ ಕೊಲೆ ಮಾಡಿದ ಹಂತಕರು

ಗ್ರಾಮದ ವಿಎಸ್ಎಸ್ ಸೊಸೈಟಿ ನಿರ್ದೇಶಕನಾಗಿದ್ದ ಸುನೀಲ್‌, ಹಣಕಾಸಿನ ವಿಚಾರದಲ್ಲಿ ಸೌಂಡ್ ಪಾರ್ಟಿ ಆಗಿದ್ದ. ಫೈನಾನ್ಸ್ ವ್ಯವಹಾರವನ್ನ ಮಾಡ್ಕೊಂಡಿದ್ದ. ಕೇಳಿ ಕೇಳಿದವರಿಗೆ ಬಡ್ಡಿಗೆ ಹಣ ಕೊಡ್ತಿದ್ದ. ವಾರದ ಬಡ್ಡಿಯಂತೆ ಸಾಲ ನೀಡ್ತಾಯಿದ್ದ. ಇದೇ ಕಾರಣಕ್ಕೆ ಸುನೀಲ್‌ನನ್ನ ಹತ್ಯೆ ಮಾಡಿದ್ರಾ ಅನ್ನೋ ಅನುಮಾನವೂ ಇದೆ.

ಫೋನ್‌ ಮಾಡಿ ಮೈದಾನಕ್ಕೆ ಕರೆಸಿ ಫೈನಾನ್ಸ್‌ ವ್ಯವಹಾರ ಮಾಡ್ತಿದ್ದವನನ್ನ ಕೊಲೆ ಮಾಡಿದ ಹಂತಕರು
ಮೃತ ಸುನೀಲ್ ದರ್ಶನಕ್ಕೆ ಮುಗಿಬಿದ್ದ ಜನ
TV9 Web
| Edited By: |

Updated on: Jul 05, 2022 | 2:56 PM

Share

ಮಂಡ್ಯ: ಫೈನಾನ್ಸ್‌ ವ್ಯವಹಾರ ಮಾಡ್ತಿದ್ದವನನ್ನು ಮೈದಾನಕ್ಕೆ ಕರೆದು ಬರ್ಬರವಾಗಿ(Murder) ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಆತ ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿದ್ದ. ಫೈನಾನ್ಸ್‌ ವ್ಯವಹಾರ ಮಾಡ್ತಾ ಬದುಕು ಕಟ್ಟಿಕೊಂಡಿದ್ದ. ರಾಜಕೀಯವಾಗಿಯೂ ಬೆಳೆಯೋಕೆ ಮುಂದಾಗಿದ್ದ. ಆದ್ರೆ ಬೆಳೆಯೋ ಮುನ್ನವೇ ಆತನನ್ನ ಚಿವುಟಿ ಹಾಕಿದ್ದಾರೆ. ಫೋನ್‌ ಮಾಡಿ ಕರೆಸಿಕೊಂಡಿದ್ದ ಹಂತಕರು ಮೈದಾನದಲ್ಲೇ ಮರ್ಡರ್‌ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ವಿಎಸ್ಎಸ್ ಸೊಸೈಟಿ ನಿರ್ದೇಶಕನಾಗಿದ್ದ ಸುನೀಲ್‌ ಎಂಬಾತನನ್ನು ಕೊಲೆ ಮಾಡಲಾಗಿದೆ. ತನ್ನ ಏರಿಯಾದಲ್ಲಿ ಒಳ್ಳೆ ಹೆಸರು ಮಾಡಿದ್ದ ಸುನೀತ್, ಇಬ್ಬರು ಪತ್ನಿಯರ ಗಂಡನಾಗಿದ್ದ. ಸುನೀಲ್‌ ಬಡ್ಡಿ ವ್ಯವಹಾರ ಕೂಡಾ ಮಾಡ್ತಿದ್ದ. ಆದ್ರೆ ಇದೇ ಸುನೀಲ್‌ ನಿನ್ನೆ ರಾತ್ರಿ ಬರ್ಬರವಾಗಿ ಕೊಲೆಯಾಗಿದ್ದಾನೆ. ಬೆಳ್ಳೂರಿನ ಸಂತೆ ಮೈದಾನದ ಬಳಿಯೇ ಸುನೀಲ್‌ನನ್ನ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸುನೀಲ್‌ನನ್ನ ನೆಲಕ್ಕುರುಳಿಸಿ ಎಸ್ಕೇಪ್‌ ಆಗಿದ್ದಾರೆ. ಇದನ್ನೂ ಓದಿ: ಚೆನ್ನೈ: ಒಟಿಪಿ ವಿಷಯಕ್ಕೆ ಜಗಳ, ಟೆಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ ಓಲಾ ಕ್ಯಾಬ್ ಡ್ರೈವರ್

ಗ್ರಾಮದ ವಿಎಸ್ಎಸ್ ಸೊಸೈಟಿ ನಿರ್ದೇಶಕನಾಗಿದ್ದ ಸುನೀಲ್‌, ಹಣಕಾಸಿನ ವಿಚಾರದಲ್ಲಿ ಸೌಂಡ್ ಪಾರ್ಟಿ ಆಗಿದ್ದ. ಫೈನಾನ್ಸ್ ವ್ಯವಹಾರವನ್ನ ಮಾಡ್ಕೊಂಡಿದ್ದ. ಕೇಳಿ ಕೇಳಿದವರಿಗೆ ಬಡ್ಡಿಗೆ ಹಣ ಕೊಡ್ತಿದ್ದ. ವಾರದ ಬಡ್ಡಿಯಂತೆ ಸಾಲ ನೀಡ್ತಾಯಿದ್ದ. ಇದೇ ಕಾರಣಕ್ಕೆ ಸುನೀಲ್‌ನನ್ನ ಹತ್ಯೆ ಮಾಡಿದ್ರಾ ಅನ್ನೋ ಅನುಮಾನವೂ ಇದೆ. ಅದ್ರಲ್ಲೂ ಅಂಬೇಡ್ಕರ್‌ ಕಾಲೋನಿಯಲ್ಲಿ ಎರಡನೇ ಸಾಲಿನ ಲೀಡರ್‌ ಆಗಿದ್ದ ಸುನೀಲ್‌ ಜೆಡಿಎಸ್‌ ಜತೆ ಗುರುತಿಸಿಕೊಂಡಿದ್ದ. ಆದ್ರೆ ಸುನೀಲ್‌ನನ್ನ ಕೊಲೆ ಮಾಡಿದ್ದು ಯಾಕೆ? ಕೊಲೆ ಮಾಡಿದ್ಯಾರು ಅನ್ನೋದೆ ಪ್ರಶ್ನೆಯಾಗಿದೆ. ಇನ್ನು ಮನೆಯಲ್ಲಿದ್ದ ಸುನೀಲ್‌ನನ್ನ ನಿನ್ನೆರಾತ್ರಿ ಯಾರೋ ಫೋನ್‌ ಮಾಡಿ ಕರೆಸಿಕೊಂಡ್ರಂತೆ. ಸಂತೆ ಮೈದಾನದ ಬಳಿ ಬಾ ಅಂತ ಕರೆದಿದ್ರಂತೆ. ಹೀಗಾಗಿ ಸುನೀಲ್‌ ಅಲ್ಲಿಗೆ ಹೋಗಿದ್ದ. ಆದ್ರೆ ಅಲ್ಲಿಗೆ ಹೋಗ್ತಿದ್ದಂತೆ ಮಚ್ಚುಲಾಂಗ್‌ಗಳಿಂದ ಕೊಚ್ಚಿ ಹಾಕಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಬೆಳ್ಳೂರು ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ಬಳಿಯ ಕೆ.ವಿ ಕಂಪರ್ಟ್ ಹೋಟೆಲ್ನಲ್ಲಿ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತುರುವೇಕೆರೆ ಮೂಲದ ಚೇತನ್ ಕುಮಾರ್ (35)ಮೃತ ದುರ್ದೈವಿ, ಸದ್ಯ ದೊಡ್ಡಬಿದರಕಲ್ಲು ಗ್ರಾಮದಲ್ಲಿ ವಾಸವಿದ್ದ ಮೃತ ಚೇತನ್, ಬ್ಯಾಂಕ್ಗಳಲ್ಲಿ ಲೋನ್ ರಿಕವರಿ ಏಜೆನ್ಸಿ ಆಗಿ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ಪಡೆದು ಜೀವನ ನಡೆಸುತ್ತಿದ್ದ. ನಿನ್ನೆ ಸಂಜೆ ಹೋಟೆಲ್ ನಲ್ಲಿ ರೂಂ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಈಚೆ ಬಾರದೆ ಇದ್ದಾಗ ರೂಂ ಬಾಗಿಲು ಹೊಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ