ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಕಲ್ಲುತೂರಾಟ; ಮನೆ ಕಿಟಕಿ ಗಾಜು, 8 ಕಾರುಗಳ ಗಾಜು ಪುಡಿಪುಡಿ

ತಡರಾತ್ರಿ ಕೆಲ ಕಿಡಿಗೇಡಿಗಳು ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆ ಮೇಲೆ ಕಲ್ಲು ಎಸೆದು ಮನೆ ಕಿಟಕಿ ಗಾಜು ಹೊಡೆದು, ರಸ್ತೆ ಬದಿ ನಿಂತಿದ್ದ 8 ಕಾರುಗಳ ಗಾಜನ್ನೂ ಕೂಡ ಪುಡಿ ಮಾಡಿದ್ದಾರೆ.

ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಕಲ್ಲುತೂರಾಟ; ಮನೆ ಕಿಟಕಿ ಗಾಜು, 8 ಕಾರುಗಳ ಗಾಜು ಪುಡಿಪುಡಿ
ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಕಲ್ಲುತೂರಾಟ; ಮನೆ ಕಿಟಕಿ ಗಾಜು, 8 ಕಾರುಗಳ ಗಾಜು ಪುಡಿಪುಡಿ


ಮಂಡ್ಯ: ಜಿಲ್ಲೆಯ ಪಾಂಡವಪುರ ಪಟ್ಟಣದ ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಕಲ್ಲುತೂರಾಟ ನಡೆದಿದೆ. ಕಿಡಿಗೇಡಿಗಳು ಮನೆ ಮೇಲೆ ಕಲ್ಲೆಸೆದು ಮನೆ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ. ರಸ್ತೆಯಲ್ಲಿ ನಿಲ್ಲಿಸಿದ್ದ 8 ಕಾರುಗಳ ಗಾಜು ಒಡೆದು ಅಟ್ಟಹಾಸ ಮೆರೆದಿದ್ದಾರೆ.

ತಡರಾತ್ರಿ ಕೆಲ ಕಿಡಿಗೇಡಿಗಳು ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆ ಮೇಲೆ ಕಲ್ಲು ಎಸೆದು ಮನೆ ಕಿಟಕಿ ಗಾಜು ಹೊಡೆದು, ರಸ್ತೆ ಬದಿ ನಿಂತಿದ್ದ 8 ಕಾರುಗಳ ಗಾಜನ್ನೂ ಕೂಡ ಪುಡಿ ಮಾಡಿದ್ದಾರೆ. ಅಲ್ಲದೆ ಖಾಸಗಿ ಬಸ್, ಶೋರೂಮ್ ಮೇಲೂ ಕಲ್ಲುತೂರಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು ಬರ್ತ್ಡೇ ಫ್ಲೆಕ್ಸ್ ಹರಿದು ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳ ದುಷ್ಕೃತ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಘಟನೆ ಸಂಬಂಧ ಟಿವಿ9ಗೆ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ಹೇಳಿಕೆ ನೀಡಿದ್ದಾರೆ. ಯಾರೋ ಹುಡುಗರು ಸೇರಿಕೊಂಡು ಕಲ್ಲು ಹೊಡೆದಿದ್ದಾರೆ. ಈಗಾಗಲೇ ಅವರನ್ನ ಅರೆಸ್ಟ್ ಕೂಡಾ ಮಾಡಲಾಗಿದೆ. ಅಂತಹ ದೊಡ್ಡ ಮಟ್ಟದಲ್ಲಿ ಎನೂ ಆಗಿಲ್ಲ ಎಂದು ತಿಳಿಸಿದ್ದಾರೆ.

ಹಾಗೂ ಪುಟ್ಟರಾಜು ಸಹೋದರ ಅಶೋಕ್ ಕೂಡ ಈ ಬಗ್ಗೆ ಮಾತನಾಡಿದ್ದು ಇದು ನಮ್ಮನ್ನು ಟಾರ್ಗೆಟ್ ಮಾಡಿರುವುದು ಅಲ್ಲ. ಯಾರೋ ಕುಡುಕರು ಈ ಕೃತ್ಯವೆಸಗಿದ್ದಾರೆ. ನಿನ್ನೆ ರಾತ್ರಿ ಮೂವರು ಕುಡಿದು ಪೆಟ್ರೋಲ್ ಬಂಕ್ ಬಳಿ ಗಲಾಟೆ ಮಾಡಿಕೊಂಡಿದ್ದಾರೆ. ನಂತರ ಕಾರುಗಳು, ಮನೆಗಳ ಮೇಲೆ ಕಲ್ಲು ತೂರಿದ್ದಾರೆ. ಈ ವೇಳೆ ನಮ್ಮ ಮನೆಗೂ ಕಲ್ಲು ತೂರಿದ್ದಾರೆ. ಈ ಬಗ್ಗೆ ಹೀಗಾಗಲೇ ಪೊಲೀಸರಿಗೆ ದೂರು ನೀಡಿದ್ದೇವೆ. ಕಾರ್ಯಕರ್ತರು ಯಾರು ಭಯಪಡುವ ಅವಶ್ಯಕತೆ ಇಲ್ಲ. ಅಣ್ಣನಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನನ್ನನ್ನು ಟಾರ್ಗೆಟ್​ ಮಾಡಿದೋರು ಮಣ್ಣಲ್ಲಿ ಮಣ್ಣಾಗಿದ್ದಾರೆ: ಸುಮಲತಾ ವಿರುದ್ದ ಶಾಸಕ ಪುಟ್ಟರಾಜು ಪರೋಕ್ಷವಾಗಿ ಆಕ್ರೋಶ

Read Full Article

Click on your DTH Provider to Add TV9 Kannada