AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya News: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಸಂಸದೆ ಸುಮಲತಾ ತರಾಟೆ, ಜೆಡಿಎಸ್​ ಶಾಸಕರಿಗೆ ಮತ್ತೊಮ್ಮೆ ಪಂಥಾಹ್ವಾನ

ನೀವು ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಿದರೆ ಮಂಡ್ಯದ ಜನರು ರಸ್ತೆತಡೆ ಮಾಡಿ ಪ್ರತಿಭಟಿಸ್ತಾರೆ. ಇಡೀ ಯೋಜನೆ ವ್ಯರ್ಥವಾಗುತ್ತೆ ಎಂದು ಸುಮಲತಾ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಎಚ್ಚರಿಸಿದರು.

Mandya News: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಸಂಸದೆ ಸುಮಲತಾ ತರಾಟೆ, ಜೆಡಿಎಸ್​ ಶಾಸಕರಿಗೆ ಮತ್ತೊಮ್ಮೆ ಪಂಥಾಹ್ವಾನ
ಮಂಡ್ಯ ಸಂಸದೆ ಸುಮಲತಾ
TV9 Web
| Edited By: |

Updated on:Oct 18, 2022 | 2:23 PM

Share

ಮಂಡ್ಯ: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಸಂಸದೆ ಸುಮಲತಾ (MP Sumalatha) ತರಾಟೆಗೆ ತೆಗೆದುಕೊಂಡಿರುವ ಘಟನೆ ನಗರದಲ್ಲಿ ಮಂಗಳವಾರ (ಅ 18) ನಡೆದಿದೆ. ಸಮಸ್ಯೆ ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಅಧಿಕಾರಿ (National Highway Authority of India – NHAI) ಸ್ಥಳಕ್ಕೆ ಬಾರದಿದ್ದಕ್ಕೆ ಸಂಸದೆ ಕೆಂಡಾಮಂಡಲವಾದರು. ಈ ವೇಳೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಅವರಿಗೆ ಕರೆ ಮಾಡಿದ ಸುಮಲತಾ ಬೇಸರ ವ್ಯಕ್ತಪಡಿಸಿದರು. ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ಬಂದಾಗಲೆಲ್ಲಾ ಪರಿಸ್ಥಿತಿ ಹದಗೆಡುತ್ತದೆ ಎಂದು ಈ ವೇಳೆ ಸ್ಥಳೀಯರು ದೂರಿದರು.

ನೀವು ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಿದರೆ ಮಂಡ್ಯದ ಜನರ ರಸ್ತೆತಡೆ ಮಾಡಿ ಪ್ರತಿಭಟಿಸ್ತಾರೆ. ಇಡೀ ಯೋಜನೆ ವ್ಯರ್ಥವಾಗುತ್ತೆ. ಇದನ್ನು ಇಲ್ಲಿಗೆ ಬಿಡಲ್ಲ, ಮೇಲಿನವರ ಗಮನಕ್ಕೆ ತರ್ತೀನಿ ಮಿಸ್ಟರ್ ಶ್ರೀಧರ್ ಎಂದು ಸುಮಲತಾ ಅವರು ಎಂಜಿನಿಯರ್​ಗೆ ತಾಕೀತು ಮಾಡಿದರು.

ಒಂದೂವರೆ ತಿಂಗಳ ಹಿಂದೆಯೇ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಮೊನ್ನೆ ಸುರಿದ ಮಳೆಯಿಂದಾಗಿ ನೀರು ಹೆದ್ದಾರಿಗೆ ನುಗ್ಗಿತ್ತು. ಜನರ ದೂರಿನ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಮತ್ತೊಮ್ಮೆ ಪರಿಶೀಲನೆ ನಡೆಸಿದರು. ಈ ವೇಳೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.

ಸಂಸದರ ಸ್ಥಳ ಪರಿಶೀಲನೆ ಕುರಿತು ಸಾಕಷ್ಟು ಮೊದಲೇ ಮಾಹಿತಿ ನೀಡಿದ್ದರೂ ಹೆದ್ದಾರಿ ಅಧಿಕಾರಿಯಾಗಲಿ ಅಥವಾ ಗುತ್ತಿಗೆದಾರರಾಗಲಿ ಸ್ಥಳಕ್ಕೆ ಬಂದಿರಲಿಲ್ಲ. ಬದಲಿಗೆ ಕಾಮಗಾರಿ ಗುತ್ತಿಗೆಗೆ ಪಡೆದಿರುವ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಕಿರಿಯ ಅಧಿಕಾರಿ ಸ್ಥಳದಲ್ಲಿದ್ದರು. ಅವರ ಬಳಿ ಹೆಚ್ಚಿನ ಮಾಹಿತಿ ಇರಲಿಲ್ಲ. ಇದರಿಂದ ಸಿಟ್ಟಾದ ಸಂಸದರು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್​ಗೆ ಕರೆ ಮಾಡಿ ‘ನಾಟಕ ಮಾಡ್ತಿದ್ದೀರೇನ್ರೀ’ ಎಂದು ತರಾಟೆಗೆ ತೆಗೆದುಕೊಂಡರು.

ಶಾಸಕರಿಗೆ ಸುಮಲತಾ ಪಂಥಾಹ್ವಾನ

ಮಂಡ್ಯದ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಸವಾಲು ಹಾಕಿದರು. ಜೆಡಿಎಸ್ ಶಾಸಕರು ತಮ್ಮ ಸಮಯ ತಿಳಿಸಿದರೆ ಸಾಕು. ನಾನು ಅಷ್ಟೊತ್ತಿಗೆ ಮೇಲುಕೋಟೆಗೆ ಬರುತ್ತೇನೆ. ಎಲ್ಲ ಜೆಡಿಎಸ್ ಶಾಸಕರೂ ಬಂದು ಪ್ರಮಾಣ ಮಾಡಲಿ ಎಂದು ಆರು ಶಾಸಕರಿಗೂ ಸುಮಲತಾ ಸವಾಲು ಹಾಕಿದರು.

ಕಳೆದ ಲೋಕಸಭೆ ಚುನಾವಣೆ ಸಂದರ್ಭದಿಂದಲೂ ಸುಮಲತಾ ಮತ್ತು ಇತರ ಜೆಡಿಎಸ್ ಶಾಸಕರೊಂದಿಗೆ ಟೆಂಡರ್ ಕಮಿಷನ್ ವಿಚಾರವಾಗಿ ಆಣೆ-ಪ್ರಮಾಣದ ವಿವಾದ ನಡೆಯುತ್ತಲೇ ಇದೆ. ಪರಸ್ಪರ ಆರೋಪ-ಪ್ರತ್ಯಾರೋಪ ಮತ್ತು ವಾಕ್ಸಮರ ತಾರಕಕ್ಕೇರಿದ್ದು, ಮೇಲುಕೋಟೆ ಚಲುವ ನಾರಾಯಣ ಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡಬೇಕು ಎಂದು ಸಮುಲತಾ ಜಿಲ್ಲೆಯ ಎಲ್ಲಾ ಆರು ಜೆಡಿಎಸ್ ಶಾಸಕರಿಗೆ ಸವಾಲು ಹಾಕಿದ್ದಾರೆ.

Published On - 2:19 pm, Tue, 18 October 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ