ಮಂಡ್ಯ ಜಿಲ್ಲೆಗೆ ಹೆಮ್ಮೆಯ ಕೀರೀಟ ಅಂದ್ರೆ ಅದು ಪುರಾಣ ಪ್ರಸಿದ್ದ ಮೇಲುಕೋಟೆ (Melukote).. ಚಲುವನಾರಾಯಣನ (cheluvanarayana swamy) ದರ್ಶನ ಪಡೆಯಲು ಹೊರ ರಾಜ್ಯಗಳಿಂದ ಯಾತ್ರಾತ್ರಿಗಳು ಬರ್ತಾರೆ.. ಪವಿತ್ರ ತಂಗಿ ಕೊಳದ ಕಲ್ಯಾಣಿ ನೀರನ್ನ ಸ್ಪರ್ಶಿಸಿ ಪುನೀತರಾಗ್ತಾರೆ.. ಆದ್ರೆ ಇಂತಹ ಪ್ರಸಿದ್ದ ಸ್ಥಳದ ಸ್ಥಿತಿ ಹೇಗಿದೆ ಗೊತ್ತಾ..? ಈ ರಿಪೋರ್ಟ್ ನೋಡಿ… `ಅಲ್ಲಿನ ಪಾರ್ಕಿಂಗ್ ಲಾಟ್ ಸದಾ ವಾಹನಗಳಿಂದ ಭರ್ತಿಯಾಗಿರುತ್ತದೆ. ಕಣ್ಣಾಡಿಸಿದ ಕಡೆಯಲ್ಲಾ ಪ್ರವಾಸಿಗರ ದಂಡು ತುಂಬಿರುತ್ತದೆ. ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಯಾತ್ರಿಗಳು ಭಕ್ತಗಣ ಅಲ್ಲಿ ಕಾಣಬರುತ್ತಾರೆ.. ಈ ಎಲ್ಲಾ ದೃಶ್ಯ ಕಣ್ಣಿಗೆ ಬೀಳುವುದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ. ಆದರೆ ಇಂತಹ ಪುರಾಣ ಪ್ರಸಿದ್ದ ಮೇಲುಕೋಟೆಯ ಪ್ರವಾಸಿ ತಾಣದಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.. ಮಳೆಯಿಂದ ತಂಗಿ ಕೊಳದ ತಡೆ ಗೋಡೆ (Akka Tangi Kola) ಕುಸಿದಿದ್ದು ಆರು ತಿಂಗಳು ಕಳೆದ್ರು ತಡೆ ಗೋಡೆ ನಿರ್ಮಾಣ ಮಾಡದೆ ಅಸಡ್ಡೆ ತೋರಿದ್ದಾರೆ ಎಂದು ಸ್ಥಳೀಯರಾದ ನಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲೇನಾಗಿದೆಯೆಂದರೆ ಕಳೆದ ವರ್ಷ ಮಂಡ್ಯ ಜಿಲ್ಲಾದ್ಯಂತ ಭಾರಿ ಮಳೆ ಸುರಿದಿತ್ತು.. ಮಳೆರಾಯನ ಆರ್ಭಟಕ್ಕೆ ಎಲ್ಲೆಡೆ ಪ್ರವಾಹ ಸೃಷ್ಟಿಯಾಗಿತ್ತು.. ಅದೇ ರೀತಿ ಮೇಲುಕೋಟೆ ಹಾಗೂ ಸುತ್ತಮುತ್ತ ಉಧೋ ಎಂದು ಮಳೆ ಸುರಿದಿತ್ತು. ರಣ ರಕ್ಕಸ ಮಳೆಗೆ ಪುರಾಣ ಪ್ರಸಿದ್ದ ತಂಗಿ ಕೊಳದ ತಡೆ ಗೋಡೆಗಳು ಕುಸಿದು ಆತಂಕ ಸೃಷ್ಟಿಯಾಗಿತ್ತು.. ಆದ್ರೆ ಈಗ ಮಳೆ ನಿಂತು ತಿಂಗಳುಗಳೇ ಕಳೆದು ಹೋಗಿದೆ.. ಆದರೂ ಸಹ ಕಲ್ಯಾಣಿಯನ್ನ ದುರಸ್ಥಿ ನಡೆಸಲು ಅಧಿಕಾರಿಗಳು ಮುಂದಾಗಿಲ್ಲ..
ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಯಾತಾತ್ರಿಗಳು ಮೇಲುಕೋಟೆ ಚಲುವನಾರಾಯಣನ ದರ್ಶನ ಪಡೆಯುತ್ತಾರೆ. ಬಳಿಕ ಅಕ್ಕ ತಂಗಿ ಕೊಳ ಧನುಷ್ ಕೋಟಿ ತಾಣವನ್ನ ವೀಕ್ಷಣೆ ಮಾಡ್ತಾರೆ.. ಇಂತ ಪವಿತ್ರ ಪುರಾಣ ಪ್ರಸಿದ್ದ ತಾಣಗಳನ್ನ ಉಳಿಸಿಕೊಂಡು ಹೋಗುವುದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಸ್ಥಳೀಯ ಜಿಲ್ಲಾಡಳಿತದ ಜವಾಬ್ದಾರಿ.. ಆದ್ರೆ ದುರಸ್ಥಿ ಕಾರ್ಯ ಮಾಡದೆ ನಿರ್ಲಕ್ಷ ವಹಿಸಿದ್ದಾರೆ.. ಈ ಹಿನ್ನೆಲೆಯಲ್ಲಿ ಮೇಲುಕೋಟೆ ಗ್ರಾಮಸ್ಥರು ಹಾಗೂ ಪ್ರವಾಸಿಗರು ಅಧಿಕಾರಿಗಳ ನಡೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ