ಪಾಂಡವಪುರ ಸರ್ಕಾರಿ ಆಸ್ಪತ್ರೆ ಎಡವಟ್ಟು: ಡಿ ಫ್ರಿಡ್ಜ್ ದುರಸ್ಥಿ, ಕೊಳೆತು ದುರ್ನಾತ ಬೀರಿದ ಅನಾಮಿಕ ಮೃತ ದೇಹ

| Updated By: ಆಯೇಷಾ ಬಾನು

Updated on: Nov 05, 2022 | 3:49 PM

ಇಂದು ಶವಾಗಾರದಲ್ಲಿ ಕೆಟ್ಟ ದುರ್ನಾತ ಬರುತ್ತಿದ್ದ ಪರಿಣಾಮ ಶವಾಗಾರವನ್ನ ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಶವಾಗಾರವನ್ನ ತೆರೆದ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಪಾಂಡವಪುರ ಸರ್ಕಾರಿ ಆಸ್ಪತ್ರೆ ಎಡವಟ್ಟು: ಡಿ ಫ್ರಿಡ್ಜ್ ದುರಸ್ಥಿ, ಕೊಳೆತು ದುರ್ನಾತ ಬೀರಿದ ಅನಾಮಿಕ ಮೃತ ದೇಹ
ಡಿ ಫ್ರಿಡ್ಜ್ ದುರಸ್ಥಿ, ಕೊಳೆತು ದುರ್ನಾತ ಬೀರಿದ ಅನಾಮಿಕ ಮೃತ ದೇಹ
Follow us on

ಮಂಡ್ಯ: ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಯ ಎಡವಟ್ಟು ಮತ್ತೊಮ್ಮೆ ಬಟಾ ಬಯಲಾಗಿದೆ. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಡಿ ಫ್ರಿಡ್ಜ್ ದುರಸ್ಥಿಯಾಗಿದೆ. ಡಿ ಫ್ರಿಡ್ಜ್ ಹಾಳಾಗಿದ್ರು ಅದನ್ನ ನೋಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಂದು ಶವಾಗಾರದಲ್ಲಿ ಕೆಟ್ಟ ದುರ್ನಾತ ಬರುತ್ತಿದ್ದ ಪರಿಣಾಮ ಶವಾಗಾರವನ್ನ ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಶವಾಗಾರವನ್ನ ತೆರೆದ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಮೃತ ಪಟ್ಟಿದ್ದ ಅನಾಮಿಕ ಮೃತ ದೇಹವನ್ನ ಡಿ ಫ್ರಿಡ್ಜ್ ನಲ್ಲಿ ಇಡಲಾಗಿದ್ದು ಆದ್ರೆ ಡಿ ಫ್ರಿಡ್ಜ್ ದುರಸ್ಥಿಯಾದ ಹಿನ್ನಲೆ ಈ ಅವಘಡ ಸಂಭವಿಸಿದೆ. ಸದ್ಯ ಪಾಂಡವಪುರ ಆಸ್ಪತ್ರೆಯಲ್ಲಿ ನಡೆದ ಈ ಅವಘಡ ಎಲ್ಲೆಡೆ ಸಾಕಷ್ಟು ಚರ್ಚೆಯಾಗುತ್ತಿದೆ.

ಮಾಂಗಲ್ಯ ಸರ ಅಪಹರಣ ಪ್ರಕರಣ: ಸಹಾಯಕ ಉಪನ್ಯಾಸಕನ ಬಂಧನ

ಹಿರಿಯ ನಾಗರೀಕರ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಅಪಹರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನನ್ನು ಪೊಲೀಸರು ಬಂಧಿಸಿದ್ದಾರೆ. ಹಣ ದುರುಪಯೋಗ ಮಾಡಿದ ಹಿನ್ನಲೆ ಸಹಾಯಕ ಉಪನ್ಯಾಸಕ ಕೆಲಸದಿಂದ ವಜಾಗೊಂಡ ಬಳಿಕ ಸುರೇಶ್ ಗೆ ಕೆಲಸ ಸಿಕ್ತಿರಲಿಲ್ಲ. ಹೀಗಾಗಿ ಕಳ್ಳತನ ಸುಲಿಗೆ ಕೃತ್ಯಕ್ಕೆ ಮುಂದಾಗಿದ್ದರು. ಈ ವೇಳೆ ಹಿರಿಯ ನಾಗರೀಕರ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಕದ್ದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂಜಯನಗರದಲ್ಲಿ ವೃದ್ದೆಯೊಬ್ಬರ ಸರಗಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಎರಡು ದಿನಗಳಲ್ಲಿ ಬಂಧಿಸಿದ್ದಾರೆ.

ಮೈಸೂರ್ ಬ್ಯಾಂಕ್ ಸರ್ಕಲ್ ಬಳಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ, ಬೈಕ್ ಸವಾರ ಬಿಬಿಎಂಪಿ ನೌಕರ ಕೊನೆಯುಸಿರು

ಬೆಂಗಳೂರು: ಮೈಸೂರ್ ಬ್ಯಾಂಕ್ ಸರ್ಕಲ್ ಬಳಿ ಬೈಕ್ ಸವಾರಿ ಮಾಡುತ್ತಿದ್ದ ಬಿಬಿಎಂಪಿ ನೌಕರನಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರರನ್ನ ಸ್ಥಳೀಯ ಪೊಲೀಸರು ಸೆಂಟ್ ಮಾರ್ಥಸ್ ಆಸ್ಪತ್ರೆಗೆ ದಾಖಲಿಸಿದ್ದರು. ಬಸ್ ತಿರುಪತಿಯಿಂದ ಬೆಂಗಳೂರಿಗೆ ಸಂಚರಿಸುತ್ತಿತ್ತು. ಬಿಬಿಎಂಪಿ ನೌಕರರ ವಿ‌. ಶ್ರೀಧರ್ ಮೃತ ವ್ಯಕ್ತಿ. ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 3:49 pm, Sat, 5 November 22