ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು(ಡಿ.1) ಹನುಮ ಮಾಲಾಧಾರಿಗಳು ಸಂಕೀರ್ತನಾ ಯಾತ್ರೆಯನ್ನು ಬೆಳಿಗ್ಗೆ 10.30 ಗಂಟೆಯಿಂದ ನಿಮಿಷಾಂಬ ದೇವಾಲಯದಿಂದ ಜಾಮಿಯಾ ಮಸೀದಿ ವೃತ್ತದ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಾಲಯ ತಲುಪಲಿರುವ ಯಾತ್ರೆಯಲ್ಲಿ ಸುಮಾರು 10000 ಹನುಮ ಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆಯಿದೆ. ಇನ್ನು ಯಾತ್ರೆ ಹಿನ್ನೆಲೆ ಜಾಮಿಯಾ ಮಸೀದಿ ಬಳಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು, ಜಿಲ್ಲಾಡಳಿತ ನಿನ್ನೆ ಸಂಜೆ 5 ಗಂಟೆಯಿಂದಲೇ ಶ್ರೀರಂಗಪಟ್ಟಣದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಇಂದು ಹನುಮ ಮಾಲಾದಾರಿಗಳಿಂದ ಸಂಕೀರ್ತನಾ ಯಾತ್ರೆ ಹಿನ್ನಲೆ, ಜಾಮಿಯಾ ಮಸೀದಿ ಬಳಿ ಪೊಲೀಸ್ ಸರ್ಪಗಾವಲು, 25ಕ್ಕೂ ಹೆಚ್ಚು ಸಿಸಿ ಕ್ಯಾಮರಾ, ಒಂದು ಸಾವಿರಕ್ಕು ಅಧಿಕ ಪೊಲೀಸರ ನೀಯೋಜನೆ, ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಕೀರ್ತನಾ ಯಾತ್ರೆಯಲ್ಲಿ ರಾರಾಜಿಸುತ್ತಿರುವ ಸಾವರ್ಕರ್ ಫೋಟೋ, ಜಾಮಿಯಾ ಮಸೀದಿ ಪ್ರವೇಶ ದ್ವಾರದ ಕಟ್ಟೆಗೆ ಸಾವರ್ಕರ್ ಬ್ಯಾನರ್, ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ಬಳಿ ಸಾವರ್ಕರ್ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು, ಶ್ರೀರಂಗಪಟ್ಟಣದಾದ್ಯಂತ ಕೇಸರಿ ಬಾವುಟ, ಹನುಮನ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ:ಕೊಪ್ಪಳದಲ್ಲಿ ಭಾವೈಕ್ಯತೆ ಸಂದೇಶ: ಪುರಾತನ ಆಂಜನೇಯ ವಿಗ್ರಹಕ್ಕೆ ಮುಸ್ಲಿಂ ವ್ಯಕ್ತಿ ಭಕ್ತಿಯಿಂದ ಪೂಜೆ
ಈ ಸಮಾಜ ಹಾಗೂ ರಾಷ್ಟ್ರವನ್ನು ಉನ್ನತಿಗೆ ಕೊಂಡೊಯ್ಯುವ ಪ್ರತಿಯೊಂದು ಕಾರ್ಯವು ಈ ದೇಶದ ಇತಿಹಾಸವಾಗಿ ದಾಖಲಿಸ್ಪಡುತ್ತದೆ. ಆ ಇತಿಹಾಸ ಮುಂದೆ ಧರ್ಮವಾಗುತ್ತದೆ ನಾಡಮುಂದೆ ಸಾವು ಕೂಡ ಸಣ್ಣದು ವಿನಾಯಕ ದಾಮೋದರ ಸಾವರ್ಕರ್. ಈ ರೀತಿಯ ಬರಹವುಳ್ಳ ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ವಿವಾದಿತ ಪ್ರದೇಶಕ್ಕೆ ಮಂಡ್ಯ ಎಸ್.ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Sun, 4 December 22