AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಪ್ರಳಯ ಸೂಚಕ ಗಣಪ; ಹಲವು ವೈಶಿಷ್ಟ್ಯ ಹಾಗೂ ವೈವಿಧ್ಯಕ್ಕೆ ಹೆಸರಾದಂತಹ ಧಾರ್ಮಿಕ ಕ್ಷೇತ್ರ

ಶ್ರೀ ಚೆಲುವ ನಾರಾಯಣನ ತಪ್ಪಲು ಮೇಲುಕೋಟೆ ಹಲವು ವೈಶಿಷ್ಟ್ಯ ಹಾಗೂ ವೈವಿಧ್ಯಮಯಕ್ಕೆ ಹೆಸರಾದಂತಹ ಧಾರ್ಮಿಕ ಕ್ಷೇತ್ರ. ಇಲ್ಲಿನ ಯೋಗಾನರಸಿಂಹಸ್ವಾಮಿ ದೇವಾಲಯದ ಬುಡದಲ್ಲಿ ಏಕಶಿಲಾ ಗಣಪನ ಬೃಹತ್ ವಿಗ್ರಹವಿದ್ದು, ಈ ವಿಗ್ರಹ ಇಲ್ಲಿ ಹೇಗೆ ನಿರ್ಮಾಣವಾಗಿದೆ ಎಂಬ ಬಗೆಗೆ ಒಂದು ಕಥೆಯೇ ಇದೆ. 

ಮಂಡ್ಯ: ಪ್ರಳಯ ಸೂಚಕ ಗಣಪ; ಹಲವು ವೈಶಿಷ್ಟ್ಯ ಹಾಗೂ ವೈವಿಧ್ಯಕ್ಕೆ ಹೆಸರಾದಂತಹ ಧಾರ್ಮಿಕ ಕ್ಷೇತ್ರ
ಏಕಶಿಲಾ ಗಣಪ
TV9 Web
| Edited By: |

Updated on:Sep 07, 2021 | 5:08 PM

Share

ಮಂಡ್ಯ: ಹಲವಾರು ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ, ಧಾರ್ಮಿಕ ಕ್ಷೇತ್ರವೆಂದರೆ, ಮೇಲುಕೋಟೆಯಲ್ಲಿನ ಯೋಗಾನರಸಿಂಹಸ್ವಾಮಿ ಬೆಟ್ಟದ ಬುಡದಲ್ಲಿನ ಏಕಶಿಲಾ ಗಣಪನ ಬೃಹತ್ ವಿಗ್ರಹ. ಈ ವಿಗ್ರಹ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎನ್ನಲಾಗಿದೆ.  ಇದು ಏಕಿಶಿಲಾ ಗಣಪ ಅಥವಾ ಬಂಡೆ ಗಣಪ ಎಂಬ ಹೆಸರಿನ ಜೊತೆಗೆ ಪ್ರಳಯ ಗಣಪ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿದೆ.

ಶ್ರೀ ಚೆಲುವ ನಾರಾಯಣನ ತಪ್ಪಲು ಮೇಲುಕೋಟೆ ಹಲವು ವೈಶಿಷ್ಟ್ಯ ಹಾಗೂ ವೈವಿಧ್ಯಕ್ಕೆ ಹೆಸರಾದಂತಹ ಧಾರ್ಮಿಕ ಕ್ಷೇತ್ರ. ಇಲ್ಲಿನ ಯೋಗಾನರಸಿಂಹಸ್ವಾಮಿ ದೇವಾಲಯದ ಬುಡದಲ್ಲಿ ಏಕಶಿಲಾ ಗಣಪನ ಬೃಹತ್ ವಿಗ್ರಹವಿದ್ದು, ಈ ವಿಗ್ರಹ ಇಲ್ಲಿ ಹೇಗೆ ನಿರ್ಮಾಣವಾಗಿದೆ ಎಂಬ ಬಗೆಗೆ ಒಂದು ಕಥೆಯೇ ಇದೆ.

ಏಕಶಿಲಾ ಗಣಪನ ಇತಿಹಾಸ ಮೈಸೂರು ಮತ್ತು ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ಮೇಲುಕೋಟೆಯಲ್ಲಿ ಬೆಟ್ಟದ ಮೇಲಿನ ಯೋಗ ನರಸಿಂಹಸ್ವಾಮಿ ದೇವಾಲಯದ, ರಾಜ ಗೋಪುರ ನಿರ್ಮಾಣ ಕಾಮಗಾರಿ ನಡೆಯುವಾಗ ನಾನಾ ಅನಾಹುತಗಳು ಆಗುತ್ತಿದ್ದವಂತೆ. ಜತೆಗೆ ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳ ನಿರ್ಮಾಣದ ಕಾರ್ಯವೂ ಸರಿಯಾಗಿ ನಡೆಯದೆ ಹಲವು ವಿಘ್ನಗಳಾಗಿದ್ದವಂತೆ. ಈ ಸಂದರ್ಭದಲ್ಲಿ ಜ್ಯೋತಿಷಿಗಳು ಬೆಟ್ಟದ ಬುಡದಲ್ಲಿ ಗಣಪ ಮೂರ್ತಿಯನ್ನು ನಿರ್ಮಿಸಿದರೆ ವಿಘ್ನಗಳು ನಿವಾರಣೆಯಾಗಬಹುದು ಎಂದು ಸಲಹೆ ನೀಡಿದ್ದರಂತೆ, ಅದರಂತೆ ಬೆಟ್ಟದ ಬುಡದಲ್ಲಿ ಏಕಶಿಲಾ ಗಣಪನ ನಿರ್ಮಾಣ ಮಾಡಲಾಗಿದೆ.

ಪ್ರಳಯ ಸೂಚಕ ಗಣಪ ಗಣೇಶ ಮೂರ್ತಿಯ ಪ್ರತಿಷ್ಠಾಪನೆಯ ನಂತರ ಯಾವುದೇ ತೊಂದರೆ ಆಗದೆ ರಾಜಗೋಪುರದ ಕೆಲಸ ನಿರ್ವಿಘ್ನವಾಗಿ ನೆರವೇರಿ ಮೆಟ್ಟಿಲುಗಳ ನಿರ್ಮಾಣವೂ ಪೂರ್ಣಗೊಂಡಿತ್ತಂತೆ. ಈ ಗಣಪ ಸುಮಾರು 16 ಅಡಿ ಎತ್ತರವಿದ್ದು, ಈ ರೀತಿ ಏಕಶಿಲಾ ಗಣಪನ ವಿಗ್ರಹ ಕರ್ನಾಟಕದ ಯಾವುದೇ ದೇವಾಲಯಗಳಲ್ಲೂ ಕಂಡು ಬರುವುದಿಲ್ಲ. ಈ ಗಣೇಶ ವಿಗ್ರಹದ ಇನ್ನೊಂದು ವಿಶೇಷ ಏನೆಂದರೆ‌ ಇದು ಪ್ರಳಯ ಸೂಚಕವನ್ನು ತಿಳಿಸುತ್ತದೆ.  ಉತ್ತರ ದಿಕ್ಕಿನಲ್ಲಿರುವ ಈ ಗಣಪನ ವಿಗ್ರಹ ಪಶ್ಚಿಮ ದಿಕ್ಕಿನವರೆಗೂ ತಿರುಗುತ್ತದೆ ಅದು ಪಶ್ಚಿಮ ದಿಕ್ಕಿಗೆ  ಪೂರ್ತಿಯಾಗಿ ತಿರುಗಿದಾಗ ಪ್ರಳಯವಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಹೀಗಾಗಿಯೇ ಇದನ್ನು ಪ್ರಳಯ ಸೂಚಕ ಗಣಪ ಎಂದೂ ಕರೆಯಲಾಗುತ್ತದೆ.

ವರದಿ: ರವಿ ಲಾಲಿಪಾಳ್ಯ

ಇದನ್ನೂ ಓದಿ:

ಐತಿಹಾಸಿಕ ಮಹತ್ವ ಪಡೆದಿರುವ ಮಾಲತೇಶ ದೇವಸ್ಥಾನ; ದೇವರ ಕಾರ್ಣಿಕವೇ ವರ್ಷದ ಭವಿಷ್ಯವಾಣಿ

ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿಯೇ ದೇವರ ದರ್ಶನ; ಐತಿಹಾಸಿಕ ಝರಣಿ ಗುಹಾ ದೇವಾಲಯದ ಮಹಿಮೆ ಏನು ಗೊತ್ತಾ?

Published On - 7:32 am, Mon, 6 September 21