ಐತಿಹಾಸಿಕ ಮಹತ್ವ ಪಡೆದಿರುವ ಮಾಲತೇಶ ದೇವಸ್ಥಾನ; ದೇವರ ಕಾರ್ಣಿಕವೇ ವರ್ಷದ ಭವಿಷ್ಯವಾಣಿ

ಮಾಲತೇಶ ದೇವಸ್ಥಾನದಲ್ಲಿ ಕಾರ್ಣಿಕೋತ್ಸವ ಸಮಯದಲ್ಲಿ ಪವಾಡಗಳು ನಡೆಯುತ್ತವೆ. ಭಕ್ತರು ದೇವಸ್ಥಾನದಲ್ಲಿ ಬಾರುಕೋಲು ಸೇವೆ, ಪಡ್ಡಲಗಿ ಸೇವೆ ಸಲ್ಲಿಸ್ತಾರೆ. ಸರಪಳಿ ಪವಾಡ ಕೂಡ ಇಲ್ಲಿ ನಡೆಯುತ್ತದೆ. ಹಲವರು ಹಲವು ರೀತಿಯ ಇಷ್ಟಾರ್ಥ ಸಿದ್ಧಿಗಾಗಿ ಮಾಲತೇಶ ದೇವರ ಮೊರೆ ಹೋಗುತ್ತಾರೆ.

ಐತಿಹಾಸಿಕ ಮಹತ್ವ ಪಡೆದಿರುವ ಮಾಲತೇಶ ದೇವಸ್ಥಾನ; ದೇವರ ಕಾರ್ಣಿಕವೇ ವರ್ಷದ ಭವಿಷ್ಯವಾಣಿ
ಮಾಲತೇಶ ದೇವಸ್ಥಾನ
Follow us
| Updated By: preethi shettigar

Updated on: Sep 03, 2021 | 11:29 AM

ಹಾವೇರಿ: ಐತಿಹಾಸಿಕವಾಗಿ ಮಹತ್ವ ಪಡೆದಿರುವ ಮಾಲತೇಶ ದೇವಸ್ಥಾನಕ್ಕೆ ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳಲ್ಲಿ ಭಕ್ತರ ದಂಡೆ ಆಗಮಿಸುತ್ತದೆ. ಪ್ರತಿವರ್ಷ ಆಯುಧ ಪೂಜೆ ಸಮಯದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕವನ್ನು ವರ್ಷದ ಭವಿಷ್ಯವಾಣಿ ಎಂದು ಇಲ್ಲಿನ ಜನರು‌ ನಂಬಿಕೊಂಡು ಬಂದಿದ್ದಾರೆ. ಕೇವಲ ರಾಜ್ಯ ಮಾತ್ರವಲ್ಲ ದೇಶದ ಬೇರೆ ಬೇರೆ ರಾಜ್ಯಗಳ ಜನರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಹಾಗಿದ್ದರೆ ಈ ದೇವಸ್ಥಾನದ ವಿಶೇಷತೆ ಏನು ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ.

ದೇವರಗುಡ್ಡ, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಐತಿಹಾಸಿಕ ಮಾಲತೇಶ ದೇವಸ್ಥಾನವನ್ನು ಹೊಂದಿರುವ ಗ್ರಾಮ. ರಾಣೆಬೆನ್ನೂರು ತಾಲೂಕು ಕೇಂದ್ರದಿಂದ ಹತ್ತು ಕಿ.ಮೀ ಮತ್ತು ಹಾವೇರಿ ಜಿಲ್ಲಾ ಕೇಂದ್ರದಿಂದ ಇಪ್ಪತ್ತೈದು ಕಿ.ಮೀ ದೂರದಲ್ಲಿರುವ ದೇವರಗುಡ್ಡದ ಮಾಲತೇಶ ಸಾಕಷ್ಟು ಪ್ರಸಿದ್ಧಿ ಪಡೆದಿರುವ ದೇವಸ್ಥಾನಗಳಲ್ಲಿ ಒಂದಾಗಿದೆ. ನೂರಾರು ವರ್ಷಗಳ‌ ಹಿಂದೆಯೇ ಈ ದೇವಸ್ಥಾನ ನಿರ್ಮಾಣವಾಗಿದೆ. ಮಾಲತೇಶ ದೇವರನ್ನು ಮಾಲಕಾಂಶ, ಮೈಲಾರಲಿಂಗೇಶ, ಗುಡದಯ್ಯ ಎಂತಲೂ ಕರೆಯುತ್ತಾರೆ.

ಮಾಲತೇಶಸ್ವಾಮಿಗೆ ಲಕ್ಷಾಂತರ ಸಂಖ್ಯೆಯ ಭಕ್ತರಿದ್ದಾರೆ. ಕರ್ನಾಟಕ ರಾಜ್ಯ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಹುಣ್ಣಿಮೆ, ಭಾನುವಾರ ಸೇರಿದಂತೆ ವಿಶೇಷ ದಿನಗಳಲ್ಲಂತೂ ಇಲ್ಲಿಗೆ ಭಕ್ತರ ದಂಡೆ ಆಗಮಿಸುತ್ತದೆ. ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳ ಸಂದರ್ಭಗಳಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆಯುತ್ತವೆ.

ಮಾಲತೇಶ ದೇವರ ಕಾರ್ಣಿಕವಾಣಿ ಪ್ರತಿವರ್ಷ ಆಯುಧ ಪೂಜೆ ಸಮಯದಲ್ಲಿ ಮಾಲತೇಶ ದೇವರ ಕಾರ್ಣಿಕವಾಣಿ ಆಗುತ್ತದೆ. ಕಾರ್ಣಿಕವಾಣಿವನ್ನು ವರ್ಷದ ಭವಿಷ್ಯವಾಣಿ ಎಂತಲೆ ಸುಮಾರು ವರ್ಷಗಳಿಂದ ನಂಬಿಕೊಂಡು ಬರಲಾಗಿದೆ. ಕಾರ್ಣಿಕ ಗೊರವಯ್ಯ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನೇರಿ ಕಾರ್ಣಿಕವಾಣಿವನ್ನು ನುಡಿಯುತ್ತಾನೆ. ಕಾರ್ಣಿಕವಾಣಿಯ ಆಧಾರದ ಮೇಲೆ ರೈತರು ವರ್ಷದ ಮಳೆ, ಬೆಳೆ ನಿರ್ಧರಿಸುತ್ತಾರೆ. ಮಾಲತೇಶನ ಕಾರ್ಣಿಕವಾಣಿ ಆಲಿಸುವುದಕ್ಕೆ ಅಂತಲೆ ಆಯುಧ ಪೂಜೆ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕಾರ್ಣಿಕವಾಣಿವನ್ನು ಕೇಳಿ ಮನೆಗೆ ವಾಪಸ್ ಆಗುತ್ತಾರೆ.

malthesh temple

ಮಾಲತೇಶ ದೇವರ ಕಾರ್ಣಿಕವಾಣಿ

ಮಾಲತೇಶ ದೇವಸ್ಥಾನದಲ್ಲಿ ಕಾರ್ಣಿಕೋತ್ಸವ ಸಮಯದಲ್ಲಿ ಪವಾಡಗಳು ನಡೆಯುತ್ತವೆ. ಭಕ್ತರು ದೇವಸ್ಥಾನದಲ್ಲಿ ಬಾರುಕೋಲು ಸೇವೆ, ಪಡ್ಡಲಗಿ ಸೇವೆ ಸಲ್ಲಿಸುತ್ತಾರೆ. ಸರಪಳಿ ಪವಾಡ ಕೂಡ ಇಲ್ಲಿ ನಡೆಯುತ್ತದೆ. ಹಲವರು ಹಲವು ರೀತಿಯ ಇಷ್ಟಾರ್ಥ ಸಿದ್ಧಿಗಾಗಿ ಮಾಲತೇಶ ದೇವರ ಮೊರೆ ಹೋಗುತ್ತಾರೆ. ಹೀಗೆ ಮಾಲತೇಶ ಸ್ವಾಮಿಯ ಮೊರೆ ಹೋದ ಜನರು ಇಷ್ಟಾರ್ಥಗಳು ಸಿದ್ಧಿಸಿದ ಮೇಲೆ ತಮ್ಮ ತಮ್ಮ ಇಚ್ಛೆಗನುಸಾರ ಹರಕೆ ತೀರಿಸುತ್ತಾರೆ.

ದೇವಸ್ಥಾನದ ಆವರಣದಲ್ಲಿ ದೊಡ್ಡದಾದ ಪಾದರಕ್ಷೆಗಳನ್ನು ಇರಿಸಲಾಗಿದೆ. ಅವುಗಳನ್ನು ಮಾಲತೇಶಸ್ವಾಮಿಯ ಪಾದರಕ್ಷೆಗಳು ಎಂತಲೆ ನಂಬಿಕೊಂಡು ಬರಲಾಗಿದೆ. ರಾತ್ರಿ ವೇಳೆಯಲ್ಲಿ ಮಾಲತೇಶಸ್ವಾಮಿ ಈ ಪಾದರಕ್ಷೆಗಳನ್ನು ಧರಿಸಿಕೊಂಡು ಓಡಾಡುತ್ತಾನೆ ಎಂಬ ನಂಬಿಕೆ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮಾಲತೇಶಸ್ವಾಮಿಯ ಪಾದರಕ್ಷೆಗಳನ್ನು ತಲೆ ಮೇಲೆ ಇಟ್ಟುಕೊಳ್ಳುತ್ತಾರೆ. ಮತ್ತೆ ಕೆಲವರು ಅವುಗಳನ್ನು ಮುಟ್ಟಿ, ಎತ್ತಿ ನಮಸ್ಕರಿಸುತ್ತಾರೆ. ಹೀಗೆ ಹಲವು ವಿಶೇಷತೆಗಳನ್ನು ಹೊಂದಿರುವ ಮಾಲತೇಶಸ್ವಾಮಿ ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದಾನೆ. ಮಾಲತೇಶಸ್ವಾಮಿಯ ಮೇಲಿನ ಭಕ್ತಿಯಿಂದ ಲಕ್ಷಾಂತರ ಸಂಖ್ಯೆಯ ಜನರು ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾಲತೇಶಸ್ವಾಮಿಯ ಭಕ್ತಿಗೆ ಪಾತ್ರರಾಗ್ತಾರೆ.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನೂ ಓದಿ: ದಟ್ಟವಾದ ಅರಣ್ಯ ಪ್ರದೇಶದಲ್ಲೊಂದು ಗುಪ್ತಲಿಂಗ ದೇವಸ್ಥಾನ; ಈ ಲಿಂಗದ ಬಳಿ ಬರುವ ನೀರಿಗಿದೆ ಔಷಧೀಯ ಗುಣ

ದುರ್ಗಾಂಬಾ ದೇವಸ್ಥಾನದ ಗಂಟೆಗಳೇ ನ್ಯಾಯ ಪಂಚಾಯಿತಿ ಸಂಕೇತ; ಇಂದಿಗೂ ಪುರಾಣ ಪ್ರಸಿದ್ಧ ಸನ್ನಿವೇಶಗಳು ಜೀವಂತ

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?