ಹಾವೇರಿ: ಸ್ಮಶಾನಕ್ಕೆ ದಾರಿಯಿಲ್ಲದೆ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರ ಪರದಾಟ

Haveri News: ಭತ್ತದ ಗದ್ದೆಯಲ್ಲಿ ತೆರಳಿ ಸ್ಮಶಾನಕ್ಕೆ ಶವ ಕೊಂಡೊಯ್ಯಲಾಗಿದೆ. ಬಸಪ್ಪ ಪೂಜಾರ ಎಂಬುವರ ಅಂತ್ಯಸಂಸ್ಕಾರ ವೇಳೆ ಘಟನೆ ನಡೆದಿದೆ. ಕೆಸರಿನ ಭತ್ತದ ಗದ್ದೆಯಲ್ಲೇ ತೆರಳಿ ಗ್ರಾಮಸ್ಥರು ಶವ ಸಾಗಿಸಿದ್ದಾರೆ.

ಹಾವೇರಿ: ಸ್ಮಶಾನಕ್ಕೆ ದಾರಿಯಿಲ್ಲದೆ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರ ಪರದಾಟ
ಹಾವೇರಿ ಶವ ಸಾಗಿಸಲು ಪರದಾಟ

ಹಾವೇರಿ: ಸ್ಮಶಾನಕ್ಕೆ ದಾರಿಯಿಲ್ಲದೆ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಪರದಾಟ ನಡೆಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹೊಳೆಆನ್ವೇರಿ ಗ್ರಾಮದಲ್ಲಿ ನಡೆದಿದೆ. ಹೊಳೆ ಆನ್ವೇರಿ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿಯಿಲ್ಲದೆ ಮೃತರ ಮನೆಯವರು, ಸಂಬಂಧಿಕರು ಹಾಗೂ ಊರವರು ಪರದಾಟ ನಡೆಸಿದ್ದಾರೆ. ಬಳಿಕ, ಭತ್ತದ ಗದ್ದೆಯಲ್ಲಿ ತೆರಳಿ ಸ್ಮಶಾನಕ್ಕೆ ಶವ ಕೊಂಡೊಯ್ಯಲಾಗಿದೆ. ಬಸಪ್ಪ ಪೂಜಾರ ಎಂಬುವರ ಅಂತ್ಯಸಂಸ್ಕಾರ ವೇಳೆ ಘಟನೆ ನಡೆದಿದೆ. ಕೆಸರಿನ ಭತ್ತದ ಗದ್ದೆಯಲ್ಲೇ ತೆರಳಿ ಗ್ರಾಮಸ್ಥರು ಶವ ಸಾಗಿಸಿದ್ದಾರೆ.

ಕಳಪೆ ಆಹಾರ ಪದಾರ್ಥ ವಿತರಣೆ; ಕಾರ್ಮಿಕ ಮಹಿಳೆ ಆಕ್ರೋಶ
ರಸ್ತೆಯಲ್ಲೇ ತಹಶೀಲ್ದಾರ್‌ಗೆ ಕಾರ್ಮಿಕ ಮಹಿಳೆ ತರಾಟೆ ತೆಗೆದುಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದಿದೆ. ಕಳಪೆ ಆಹಾರ ಪದಾರ್ಥ ನೀಡಿದ್ದಕ್ಕೆ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಬಳಿಕ ಘಟನೆ ನಡೆದಿದೆ. ಕಾರ್ಮಿಕ ಮಹಿಳೆ ಹೊನ್ನಾಳಿ ತಹಶೀಲ್ದಾರ್ ಬಸವರಾಜು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ. ರೇಣುಕಾಚಾರ್ಯ, ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಫುಡ್ ಕಿಟ್‌ ವಿತರಿಸಿದ್ದರು.

ಬಳ್ಳಾರಿ: ಪಿಒಪಿ ಗಣೇಶ ಮೂರ್ತಿ ಜಪ್ತಿ
ಬಳ್ಳಾರಿ ಜಿಲ್ಲೆ ಸಿರುಗುಪ್ಪದಲ್ಲಿ ಪಿಒಪಿಯಿಂದ ತಯಾರಿಸಲಾದ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿದ್ದಾರೆ. ನಗರಸಭೆ ಅಧಿಕಾರಿಗಳಿಂದ ಪಿಒಪಿ ಮೂರ್ತಿಗಳ ಜಪ್ತಿ ಮಾಡಲಾಗಿದೆ. ಈ ಕಾರಣಕ್ಕೆ, ನಗರಸಭೆ ಆಯುಕ್ತ ರಾಘವೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಿಂದೂಪರ ಸಂಘಟನೆಗಳು ದಿಢೀರ್​ ಪ್ರತಿಭಟನೆ ನಡೆಸಿವೆ.

ಬಾಗಲಕೋಟೆ: ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧೆ ರಕ್ಷಣೆ
ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧೆ ರಕ್ಷಣೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಂದಿರದ ಸೇತುವೆ ಬಳಿ ನಡೆದಿದೆ. ನದಿಗೆ ಹಾರಿದ್ದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಮಂಗಳೂರು ಗ್ರಾಮದ ಯುವಕರಿಂದ ವೃದ್ಧೆಯ ರಕ್ಷಣೆ ಆಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ವೃದ್ಧೆ ಸೊಸೆಯಂದಿರ ಕಾಟ ತಾಳಲಾರದೆ ಮನೆಬಿಟ್ಟು ಬಂದಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸೋಯಾಬೀನ್ ಬೆಳೆಗೆ ಬೂದು ರೋಗ; ಹಾವೇರಿ ರೈತರು ಕಂಗಾಲು

ಇದನ್ನೂ ಓದಿ: Puneeth Rajkumar: ಕೊಪ್ಪಳದ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಮನಸೋತ ​ಅಪ್ಪು; ವಿಡಿಯೊ ನೋಡಿ

Click on your DTH Provider to Add TV9 Kannada