ಕೆಆರ್ಎಸ್ ಡ್ಯಾಂ ಕಾಮಗಾರಿ ಪರಿಶೀಲನೆ; ಬೆದರಿಸಿದರೆ ನಾನು ಹೆದರಲ್ಲ: ಸುಮಲತಾ ಖಡಕ್ ಮಾತು
Sumalatha: ಕೆಆರ್ಎಸ್ನ ಕಾವೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ, ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ, ಪೊಲೀಸ್ ಮತ್ತು ರೈತ ಮುಖಂಡರು ಭಾಗಿ ಆಗಿದ್ದಾರೆ. ಸಭೆಗೂ ಮೊದಲು, ಕೆಆರ್ಎಸ್ ಜಲಾಶಯಕ್ಕೆ ಸಂಸದೆ ಸುಮಲತಾ ಭೇಟಿ ನೀಡಿದ್ದಾರೆ.
ಮಂಡ್ಯ: ನನ್ನ ಸಿಬ್ಬಂದಿ ಅಂದ್ಮೇಲೆ ಇದು ಅಧಿಕೃತವೇ, ಗೌಪ್ಯ ಸಭೆ ಅಲ್ಲ. ಸಭೆಯನ್ನು ಇಡೀ ಪ್ರಪಂಚವೇ ನೋಡಿದೆ. ಅವರು ಬಂದಿದ್ದೇ ಸಭೆ ನಡೆಸಬಾರದೆಂಬ ಉದ್ದೇಶದಿಂದ. ಅವರು ಸಭೆಗೆ ಬರುತ್ತಾರೆ ಅನ್ನುವಾಗಲೇ ನನಗೆ ಗೊತ್ತಿತ್ತು. ಇವರು ಇದೇ ಉದ್ದೇಶಕ್ಕಾಗಿ ಬರುತ್ತಿದ್ದಾರೆ ಅನ್ನುವುದು. ಕೊವಿಡ್ ವೇಳೆಯೂ ಸಭೆಗೆ ಬರದವರು ಇಂದು ಬಂದಿದ್ರು. ನನ್ನ ಆಪ್ತ ಕಾರ್ಯದರ್ಶಿ ನನ್ನ ಹೆಸರಿನಲ್ಲಿ ಸಹಿ ಮಾಡ್ತಿಲ್ಲ. ಆಪ್ತ ಕಾರ್ಯದರ್ಶಿ ಎಂದೇ ಅವರು ಸಹಿ ಮಾಡುತ್ತಿದ್ದಾರೆ. ಸುಮ್ಮನೆ ಸಣ್ಣ ವರ್ತನೆ ತೋರಬಾರದು. ನನ್ನ ಹೆದರಿಸಿ ಬೆದರಿಸಿದರೆ ನಾನು ಹೆದರಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.
ಅಧಿಕಾರಿಗಳ ಸಭೆ ಬಳಿಕ ಸಂಸದೆ ಸುಮಲತಾ ಅಂಬರೀಶ್ ಬುಧವಾರ (ಆಗಸ್ಟ್ 18) ಮಾತನಾಡಿದ್ದಾರೆ. ದಿಶಾ ಸಭೆಗೆ ಜೆಡಿಎಸ್ ಶಾಸಕರು ಯಾಕೆ ಬಂದ್ರು ಅನ್ನೋದು ಎಲ್ಲರಿಗೂ ಗೊತ್ತಿರೊ ವಿಚಾರ. ಏಳು ಸಭೆಗೆ ಬಾರದವರು ಎಂಟನೆ ಸಭೆಗೆ ಬಂದರು. ಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚೆ ಮಾಡಬಹುದಿತ್ತು. ಆದ್ರೆ ಅಕ್ರಮ ಗಣಿಗಾರಿಕೆ ವಿಚಾರ ಸಭೆಯಲ್ಲಿ ಚರ್ಚೆಗೆ ಬಂದಿರುವುದು ಹಾಗೂ ಅದನ್ನು ಸಮರ್ಥಿಸಿಕೊಳ್ಳಲೆಂದೇ ಸಭೆಗೆ ಬಂದಿರೋದು ಈ ಜಿಲ್ಲೆಯ ದುರಂತ ಎಂದು ಸುಮಲತಾ ಹೇಳಿದ್ದಾರೆ.
ಕೆಆರ್ಎಸ್ನಲ್ಲಿ ಜೆಡಿಎಸ್ ಶಾಸಕರಿಂದ ನಡೆದ ದೃಷ್ಟಿ ಪೂಜೆ ಬಗ್ಗೆ ಸುಮಲತಾ ಪ್ರಶ್ನಿಸಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಸುಮಲತಾ ಪ್ರಶ್ನೆ ಮಾಡಿದ್ದಾರೆ. ಕೆಆರ್ಎಸ್ನಲ್ಲಿ ಕೈಗಾರಿಕಾ ಭದ್ರತಾ ಪಡೆ ಇದ್ದರೂ ಹೇಗೆ ಹೋಮ ಮಾಡಲಾಯ್ತು. ಹೋಮ ಮಾಡಲು ಹೇಗೆ ಅವಕಾಶ ನೀಡಿದ್ದೀರಾ. ಇದರ ಬಗ್ಗೆ ಸಮಗ್ರ ವರದಿ ನೀಡಬೇಕು ಎಂದು ಸುಮಲತಾ ಆಗ್ರಹಿಸಿದ್ದಾರೆ.
ಕೆಆರ್ಎಸ್ ಡ್ಯಾಂ ವೀಕ್ಷಣೆ ಬಳಿಕ ಕೆಆರ್ಎಸ್ನ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಂಸದೆ ಸುಮಲತಾ ಸಭೆ ನಡೆಸಿದ್ದಾರೆ. ಸಭೆ ನಡೆಸುವ ಹಕ್ಕು ಸಂಸದರಿಗಿಲ್ಲ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಸಭೆ ನಡೆಸಲು ಅವಕಾಶ ಇಲ್ಲವೆಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ವಿಜಯ್ ಕುಮಾರ್ಗೆ ಅರ್ಜಿ ಸಲ್ಲಿಸಿದ್ದರು. ಶಾಸಕರ ಆಕ್ಷೇಪಕ್ಕೆ ಕ್ಯಾರೇ ಎನ್ನದೆ ಸಂಸದೆ ಸುಮಲತಾ ಸಭೆ ನಡೆಸಿದ್ದಾರೆ.
ಕೆಆರ್ಎಸ್ನ ಕಾವೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ, ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ, ಪೊಲೀಸ್ ಮತ್ತು ರೈತ ಮುಖಂಡರು ಭಾಗಿ ಆಗಿದ್ದಾರೆ. ಸಭೆಗೂ ಮೊದಲು, ಕೆಆರ್ಎಸ್ ಜಲಾಶಯಕ್ಕೆ ಸಂಸದೆ ಸುಮಲತಾ ಭೇಟಿ ನೀಡಿದ್ದಾರೆ. ಮೆಟ್ಟಿಲುಗಳ ಬಳಿ ತಡೆಗೋಡೆ ಕುಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದಾರೆ. ಪೂರ್ಣಗೊಂಡ ಕಾಮಗಾರಿ ಪರಿಶೀಲಿಸಿದ್ದಾರೆ. ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಕಾಮಗಾರಿ ಪರಿಶೀಲನೆ ಮಾಡಿದ್ದಾರೆ.
ಮಂಡ್ಯ: ದಿಶಾ ಸಭೆ ಆರಂಭದಲ್ಲೇ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್, ಸುಮಲತಾ ಸಿಬ್ಬಂದಿ ವಿರುದ್ಧ ಗರಂ