ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ದೇವೇಗೌಡರ ಹಿರಿಯ ಮಗ ಹೆಚ್​ಡಿ ರೇವಣ್ಣ ಫೋಟೋಗೆ ಕೋಕ್

ಅದ್ಯಾಕೋ ಗೊತ್ತಿಲ್ಲ ಒಂದಿಲ್ಲೊಂದು ವಿವಾದಗಳು ಮಾಜಿ ಸಚಿವ ರೇವಣ್ಣ ಕುಟುಂಬವನ್ನ ಸುತ್ತಿಕೊಳ್ಳುತ್ತಿವೆ. ಇದು ಜೆಡಿಎಸ್ ಪಾಳಯಕ್ಕೂ ಕೂಡ ದೊಡ್ಡ ಮಟ್ಟಿನ ಪೆಟ್ಟನ್ನ ಕೊಟ್ಟಿದೆ. ಹೀಗಾಗಿ ದಳಪತಿಗಳು ರೇವಣ್ಣನಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದು, ಫೆಕ್ಸ್ ಗಳಲ್ಲಿ ರೇವಣ್ಣ ಭಾವಚಿತ್ರ ಹಾಕದೇ ಅಂತರ ಕಾಯ್ದುಕೊಂಡಿದೆ.

ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ದೇವೇಗೌಡರ ಹಿರಿಯ ಮಗ ಹೆಚ್​ಡಿ ರೇವಣ್ಣ ಫೋಟೋಗೆ ಕೋಕ್
ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ದೇವೇಗೌಡರ ಹಿರಿಯ ಮಗ ಹೆಚ್​ಡಿ ರೇವಣ್ಣ ಫೋಟೋಗೆ ಕೋಕ್
Edited By:

Updated on: Jun 25, 2024 | 10:23 PM

ಮಂಡ್ಯ, ಜೂ.25: ಕಳೆದ ಕೆಲವು ತಿಂಗಳಿಂದ ಒಂದಿಲ್ಲೊಂದು ವಿವಾದಗಳು ಮಾಜಿ ಪ್ರಧಾನಿ ದೇವೇಗೌಡ (HD Deve Gowda)ರ ಹಿರಿಯ ಮಗ ರೇವಣ್ಣ(HD Revanna) ಕುಟುಂಬಕ್ಕೆ ಸುತ್ತಿಕೊಳ್ಳುತ್ತಿದೆ. ಸಾಕಷ್ಟು ವಿವಾದದಿಂದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಇದು ಕೇವಲ ಅದೊಂದೆ ಕುಟುಂಬಕ್ಕೆ ಅಷ್ಟೇ ಅಲ್ಲ, ಜೆಡಿಎಸ್​ಗೂ ಕೂಡ ದೊಡ್ಟಮಟ್ಟಿನ ಮುಜುಗರ ತಂದಿದೆ. ಈ ಮುಜಗರದಿಂದ ಪಾರಾಗಲೂ ಇದೀಗ ಮಂಡ್ಯದ ದಳಪತಿಗಳು ಮುಂದಾಗಿದ್ದಾರೆ.

ಅಂದಹಾಗೆ ಮಂಡ್ಯದಿಂದ ಗೆದ್ದು ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಜಿಲ್ಲೆಯ ದಳಪತಿಗಳು ದೊಡ್ಡ ದೊಡ್ಡ ಫ್ಲೆಕ್ಸ್​ಗಳನ್ನ ಜಿಲ್ಲೆಯ ಹಲವೆಡೆ ಹಾಕಿಸಿದ್ದಾರೆ. ಆದರೆ, ಈ ಫ್ಲೆಕ್ಸ್​ಗಳಲ್ಲಿ ಮಾಜಿ ಸಚಿವ ರೇವಣ್ಣ ಭಾವಚಿತ್ರಕ್ಕೆ ಕೊಕ್ ನೀಡಲಾಗಿದೆ. ಬಿಜೆಪಿಯ ಹಲವು ನಾಯಕರ ಫೋಟೋಗಳು ಇವೆ. ಆದರೆ, ರೇವಣ್ಣ ಫೋಟೋ ಮಾತ್ರ ಮಾಯಾವಾಗಿದೆ.

ಇದನ್ನೂ ಓದಿ:ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ವಿರುದ್ಧ ಎಫ್​ಐಆರ್​ ದಾಖಲು

ಮುಜಗರದಿಂದ ಪಾರಾಗಲು ಮುಂದಾದ ದಳಪತಿಗಳು

ಮಾಜಿ ಸಂಸದ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದ ಕಿಡ್ನಾಪ್ ಕೇಸ್ ನಲ್ಲಿ ರೇವಣ್ಣ ಜೈಲು ಪಾಲಾಗಿ ಬಂದಿದ್ದು. ಭವಾನಿ ರೇವಣ್ಣ ಬೇಲ್ ಮೇಲೆ ಹೊರಗೆ ಇರುವುದು. ಇದೀಗ ಪ್ರಜ್ವಲ್ ಜೈಲು ಪಾಲಾದ್ರೆ, ಸೂರಜ್ ಸಿಐಡಿ ಕಸ್ಟಡಿಯಲ್ಲಿ ಇದ್ದಾನೆ. ಹೀಗಾಗಿ ಇದು ಜೆಡಿಎಸ್​ಗೆ ಸಾಕಷ್ಟು ಮುಜುಗರವನ್ನ ತರುತ್ತಿದೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ ರೇವಣ್ಣ ತನ್ನದೆ ಆದ ಹಿಡಿತವನ್ನು ಕೂಡ ಹೊಂದಿದ್ದರು. ಆದರೆ, ಈ ಘಟನೆ ನಡೆದ ಮೇಲೆ ಸಾಕಷ್ಟು ಮುಜುಗರ ಎದುರಾಗಿದೆ. ಹೀಗಾಗಿ ರೇವಣ್ಣರಿಂದ ಅಂತರ ಕಾಯ್ದುಕೊಂಡು, ಡ್ಯಾಮೇಜ್ ಕಂಟ್ರೋಲ್​ಗೆ ಜಿಲ್ಲೆಯ ದಳಪತಿಗಳು ಮುಂದಾಗಿದ್ದಾರೆ.

ಒಟ್ಟಾರೆ ಹಲವು ವಿವಾದಗಳು ರೇವಣ್ಣ ಕುಟುಂಬವನ್ನ ಸಂಕಷ್ಟಕ್ಕೆ ಸಿಲುಕಿಸಿದ್ರೆ, ಜೆಡಿಎಸ್​ಗೂ ಮುಜುಗರ ತಂದಿದೆ. ಹೀಗಾಗಿ ರೇವಣ್ಣರಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ನಾಯಕರು ಕೂಡ ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ