ಪೂಜೆ ಮುಗಿಸಿ ನಾಲೆಗೆ ಇಳಿದಿದ್ದ ಸ್ನೇಹಿತನನ್ನು ರಕ್ಷಿಸಲು ಹೋಗಿದ್ದ ಮೂವರು ನೀರುಪಾಲು

| Updated By: ಆಯೇಷಾ ಬಾನು

Updated on: Aug 25, 2021 | 8:41 AM

ದೇಗುಲಕ್ಕೆ ಬಂದಿದ್ದ ಮೈಸೂರು ಮೂಲದ 8 ಸ್ನೇಹಿತರು ಹರಕೆ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿ ಹೇಮಾವತಿ ಬಲದಂಡೆ ನಾಲೆಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ನೀರಿನಲ್ಲಿ ಮುಳುಗ್ತಿದ್ದ ರವಿ ರಕ್ಷಿಸಲು ಯೋಗೇಶ್ ತೆರಳಿದ್ದಾರೆ.

ಪೂಜೆ ಮುಗಿಸಿ ನಾಲೆಗೆ ಇಳಿದಿದ್ದ ಸ್ನೇಹಿತನನ್ನು ರಕ್ಷಿಸಲು ಹೋಗಿದ್ದ ಮೂವರು ನೀರುಪಾಲು
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಸ್ನೇಹಿತನನ್ನು ರಕ್ಷಿಸಲು ಹೋಗಿದ್ದ ಮೂವರು ನೀರುಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಚಂದಗೋಳಮ್ಮ ದೇಗುಲದ ಬಳಿಯ ಹೇಮಾವತಿ ಬಲದಂಡೆ ನಾಲೆಯಲ್ಲಿ ನಡೆದಿದೆ.

ದೇಗುಲಕ್ಕೆ ಬಂದಿದ್ದ ಮೈಸೂರು ಮೂಲದ 8 ಸ್ನೇಹಿತರು ಹರಕೆ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿ ಹೇಮಾವತಿ ಬಲದಂಡೆ ನಾಲೆಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ನೀರಿನಲ್ಲಿ ಮುಳುಗ್ತಿದ್ದ ರವಿ ರಕ್ಷಿಸಲು ಯೋಗೇಶ್ ತೆರಳಿದ್ದಾರೆ. ಬಳಿಕ ರವಿ, ಯೋಗೇಶ್ ರಕ್ಷಣೆಗೆ ಮಂಜು, ಸೀನು ಹೀಗಿದ್ದಾರೆ. ಇವರೂ ಕೊಚ್ಚಿ ಹೋಗ್ತಿರುವುದು ಗಮನಿಸಿ ಬೆಲ್ಟ್ ಸಹಾಯದಿಂದ ನೀರುಪಾಲಾಗ್ತಿದ್ದ ಓರ್ವನ ರಕ್ಷಣೆ ಮಾಡಲಾಗಿದೆ. ಉಳಿದ ಮೂವರು ನೀರು ಪಾಲಾಗಿದ್ದಾರೆ. ಘಟನೆ ಬಳಿಕ ಮೂವರು ಸ್ನೇಹಿತರು ಪರಾರಿಯಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನಾಲೆ‌ ನೀರು ನಿಲ್ಲಿಸಿ ಮೃತದೇಹಗಳ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಶುರುವಾಗಿದೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಲಂಚ ಸ್ವೀಕರಿಸಿದ ಶಾಲಾ ವಾರ್ಡನ್‌ಗೆ ಜೈಲು ಶಿಕ್ಷೆ, ಕೆರೆಯಲ್ಲಿ ದನ‌‌ ತೊಳೆಯಲು ಹೋಗಿದ್ದಾಗ ಯುವಕರಿಬ್ಬರು ನೀರುಪಾಲು