ಫಾಸ್ಟ್‌ಟ್ಯಾಗ್ ಇದ್ದರೂ ಹಣ ಕಟ್ಟುವಂತೆ ಚಾಲಕನ ಮೇಲೆ ಹಲ್ಲೆ?

ಮಂಡ್ಯ: ಫಾಸ್ಟ್‌ಟ್ಯಾಗ್ ವಿಚಾರಕ್ಕೆ ಸಂಬಂಧಿಸಿ ವಾಹನ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನ ನೆಲ್ಲಿಗೆರೆಯ ಟೋಲ್‌ನಲ್ಲಿ ನಡೆದಿದೆ. ಫಾಸ್ಟ್‌ಟ್ಯಾಗ್ ಇದ್ದರೂ ಹಣ ಕಟ್ಟುವಂತೆ ಟೋಲ್ ಸಿಬ್ಬಂದಿ ಹೇಳಿದ್ದಾರೆ. ಆದ್ರೆ ಇದಕ್ಕೆ ಕಾರು ಚಾಲಕ ಒಪ್ಪದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಗೆರೆಯ ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್ ಇದ್ದರೂ ಹಣ ಪಾವತಿಸುವಂತೆ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಫಾಸ್ಟ್‌ಟ್ಯಾಗ್ ಇಟ್ಟುಕೊಂಡು ನಾವು ಹಣ ಕಟ್ಟುವುದಿಲ್ಲ ಎಂದು […]

ಫಾಸ್ಟ್‌ಟ್ಯಾಗ್ ಇದ್ದರೂ ಹಣ ಕಟ್ಟುವಂತೆ ಚಾಲಕನ ಮೇಲೆ ಹಲ್ಲೆ?
ಸಾಧು ಶ್ರೀನಾಥ್​

Updated on: Feb 07, 2020 | 12:01 PM

ಮಂಡ್ಯ: ಫಾಸ್ಟ್‌ಟ್ಯಾಗ್ ವಿಚಾರಕ್ಕೆ ಸಂಬಂಧಿಸಿ ವಾಹನ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನ ನೆಲ್ಲಿಗೆರೆಯ ಟೋಲ್‌ನಲ್ಲಿ ನಡೆದಿದೆ. ಫಾಸ್ಟ್‌ಟ್ಯಾಗ್ ಇದ್ದರೂ ಹಣ ಕಟ್ಟುವಂತೆ ಟೋಲ್ ಸಿಬ್ಬಂದಿ ಹೇಳಿದ್ದಾರೆ. ಆದ್ರೆ ಇದಕ್ಕೆ ಕಾರು ಚಾಲಕ ಒಪ್ಪದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಗೆರೆಯ ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್ ಇದ್ದರೂ ಹಣ ಪಾವತಿಸುವಂತೆ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಫಾಸ್ಟ್‌ಟ್ಯಾಗ್ ಇಟ್ಟುಕೊಂಡು ನಾವು ಹಣ ಕಟ್ಟುವುದಿಲ್ಲ ಎಂದು ಚಾಲಕ ಹೇಳಿದ್ದಾನೆ. ಇಲ್ಲಿ ಫಾಸ್ಟ್‌ಟ್ಯಾಗ್ ನಡೆಯುವುದಿಲ್ಲ ಎಂದು ಗಲಾಟೆ ಮಾಡಿ ವಾಹನ ಚಾಲಕನಿಗೆ ಸಿಬ್ಬಂದಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.



ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us