AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suicide: ಪ್ರೀತಿಸಿದವನ ಬಿಟ್ಟು ಬೇರೆಯವನ ಜೊತೆ ಮದುವೆ, ಕೆಆರ್‌ಎಸ್‌ ಹಿನ್ನೀರಿಗೆ ಹಾರಿ ನೊಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಸಂಬಂಧಿರಾಗಿದ್ದ ನವೀನ್ ಮತ್ತು ನಿಸರ್ಗ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನವೆಂಬರ್ 20ರಂದು ನಿಸರ್ಗಳಿಗೆ ಬಲವಂತವಾಗಿ ಬೇರೆ ಯುವಕನ ಜೊತೆ ಮದುವೆ ಮಾಡಲಾಗಿತ್ತು. ಹೀಗಾಗಿ ಮನ ನೊಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಡಿಸೆಂಬರ್ 1ರಂದು ನವೀನ್ ಮತ್ತು ನಿಸರ್ಗ ಇಬ್ಬರೂ ಮನೆಯಿಂದ ನಾಪತ್ತೆಯಾಗಿದ್ದಾರೆ.

Suicide: ಪ್ರೀತಿಸಿದವನ ಬಿಟ್ಟು ಬೇರೆಯವನ ಜೊತೆ ಮದುವೆ, ಕೆಆರ್‌ಎಸ್‌ ಹಿನ್ನೀರಿಗೆ ಹಾರಿ ನೊಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ
ಕೆಆರ್​ಎಸ್​ ಡ್ಯಾಂ
Follow us
TV9 Web
| Updated By: ಆಯೇಷಾ ಬಾನು

Updated on:Dec 03, 2021 | 3:25 PM

ಮಂಡ್ಯ: ಕೆಆರ್‌ಎಸ್‌ ಹಿನ್ನೀರಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬಳಿ ನಡೆದಿದೆ. ಮೈಸೂರಿನ ಮೇಟಗಳ್ಳಿಯ ನವೀನ್, ನಿಸರ್ಗ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಸಂಬಂಧಿರಾಗಿದ್ದ ನವೀನ್ ಮತ್ತು ನಿಸರ್ಗ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನವೆಂಬರ್ 21ರಂದು ನಿಸರ್ಗಳಿಗೆ ಬಲವಂತವಾಗಿ ಕಾಂತರಾಜ್ ಜೊತೆ ಮದುವೆ ಮಾಡಲಾಗಿತ್ತು. ಹೀಗಾಗಿ ಮನ ನೊಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಡಿಸೆಂಬರ್ 1ರಂದು ನವೀನ್ ಮತ್ತು ನಿಸರ್ಗ ಇಬ್ಬರೂ ಮನೆಯಿಂದ ನಾಪತ್ತೆಯಾಗಿದ್ದಾರೆ. ಕುಟುಂಬಸ್ಥರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದು ಕೆಆರ್‌ಎಸ್ ನಾರ್ತ್ ಬ್ಯಾಂಕ್ನ ಮಿಲ್ಟ್ರಿ ಕ್ಯಾಂಪ್ ಬಳಿ ಹಿನ್ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಂಡಿರುವುದು ತಿಳಿದು ಬಂದಿದೆ. ಇಬ್ಬರೂ ವೇಲ್ನಿಂದ ಕಟ್ಟಿಕೊಂಡು ಹಿನ್ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯಾಯಕೊಡಿಸಿ ಅಂತ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜ್ ಪುರದ ನಿವಾಸಿ ಕಾಂತರಾಜ್ ಕುಟುಂಬಸ್ಥರು ಪಟ್ಟುಹಿಡಿದಿದ್ದಾರೆ. ಇಬ್ಬರ ಪ್ರೀತಿಯ ವಿಚಾರಗೊತ್ತಿದ್ದರು ಮಧ್ಯವರ್ತಿಗಳ ಮೂಲಕ ಮದುವೆ ಮಾಡಿದ್ದರು. ಮದುವೆಗೆ ನಾವೇ ಹಣ ಖರ್ಚು ಮಾಡಿದ್ದೆವು. ಇವರ ಪ್ರೀತಿ‌ ಮುಚ್ಚಿಟ್ಟು ನಮ್ಮ ಹುಡುಗನಿಗೆ‌‌ ಮೋಸ ಮಾಡಿದ್ದಾರೆ. ಮಧ್ಯವರ್ತಿಗಳಿಗೆ ಶಿಕ್ಷೆಯಾಗಬೇಕು ಎಂದು ಕಾಂತರಾಜ್ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ಪ್ರೇಮಿಗಳು ಇಬ್ಬರೂ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದರು ಇಬ್ಬರು ಯುವ ಪ್ರೇಮಿಗಳು ಜನುಮದ ಜೋಡಿಯಾಗಿ ಪರಸ್ಪರ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದ್ದಾರೆ. ಹಾಗೆ ಪ್ರೇಮಿಗಳು ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಬಳಿ ನಡೆದಿದೆ. ಕೊನೆಗೆ ತೆಪ್ಪ ನಡೆಸುವ ಅಂಬಿಗರಿಂದ ಪ್ರೇಮಿಗಳ ರಕ್ಷಣೆಯಾಗಿದೆ. ಅಭಿ (19) ಮತ್ತು 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯಿಂದ ಆತ್ಮಹತ್ಯೆ ಯತ್ನ ನಡೆದಿದೆ. ಬಾಲಕಿಯು ಚಾಮರಾಜನಗರದ ಕಾಲೇಜು ವಿದ್ಯಾರ್ಥಿನಿಯಾಗಿದ್ದರೆ ಅಭಿ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಬಾಲಕಿಯ ಮನೆಯಲ್ಲಿ ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಹಿನ್ನೆಲೆ ಮುಡಿಕಟ್ಟೆ ಬಳಿ ಪ್ರೇಮಿಗಳು ಕಪಿಲಾ ನದಿಗೆ ಹಾರಿದ್ದಾರೆ. ಇಬ್ಬರಿಗೂ ಈಗ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರೇಮಿಗಳು ಇಬ್ಬರೂ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದರು! ಮುಂದೇನಾದರು?

Published On - 8:19 am, Fri, 3 December 21