Mandya: ವೈದ್ಯನ ನಿರ್ಲಕ್ಷ್ಯದಿಂದ ಯುವಕ ಸಾವು ಆರೋಪ; ಕ್ಲಿನಿಕ್ ಎದುರು ಶವ ಇಟ್ಟು ಯುವಕನ ಕುಟುಂಬಸ್ಥರ ಧರಣಿ

| Updated By: ಸಾಧು ಶ್ರೀನಾಥ್​

Updated on: Aug 12, 2021 | 8:27 AM

Doctor negligence: ನಿಶಾಂತ್ ಸಾವಿಗೆ ಖಾಸಗಿ ಕ್ಲಿನಿಕ್ ವೈದ್ಯನ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ. ಪೋಷಕರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಬಳಿಕ, ಪೊಲೀಸರು ಧರಣಿನಿರತ ಪೋಷಕರ ಮನವೊಲಿಸಿ ಕಳಿಸಿದ್ದಾರೆ. ಮಂಡ್ಯದ ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Mandya: ವೈದ್ಯನ ನಿರ್ಲಕ್ಷ್ಯದಿಂದ ಯುವಕ ಸಾವು ಆರೋಪ; ಕ್ಲಿನಿಕ್ ಎದುರು ಶವ ಇಟ್ಟು ಯುವಕನ ಕುಟುಂಬಸ್ಥರ ಧರಣಿ
ವೈದ್ಯನ ನಿರ್ಲಕ್ಷ್ಯದಿಂದ ಯುವಕ ಸಾವು ಆರೋಪ; ಕ್ಲಿನಿಕ್ ಎದುರು ಶವ ಇಟ್ಟು ಯುವಕನ ಕುಟುಂಬಸ್ಥರ ಧರಣಿ
Follow us on

ಮಂಡ್ಯ: ವೈದ್ಯರೊಬ್ಬರ ನಿರ್ಲಕ್ಷ್ಯದಿಂದ ಯುವಕ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿ, ಕ್ಲಿನಿಕ್ ಎದುರು ಶವ ಇಟ್ಟು ಯುವಕನ ಕುಟುಂಬಸ್ಥರು ಧರಣಿ ನಡೆಸಿದ್ದಾರೆ. ಮಂಡ್ಯದ ವಿವಿ ಫಾರಂ ಬಳಿಯ ಕ್ಲಿನಿಕ್ ಎದುರು ಈ ಪ್ರತಿಭಟನೆ ನಡೆದಿದೆ. ಚಂದಗಾಲು ಗ್ರಾಮದ ನಿಶಾಂತ್(17) ಮೃತ ದುರ್ದೈವಿ.

2 ದಿನದ ಹಿಂದೆ ಜ್ವರ ಹಿನ್ನೆಲೆ ನಿಶಾಂತ್ ಕ್ಲಿನಿಕ್‌ಗೆ ಬಂದಿದ್ದ. ಈ ವೇಳೆ ಕ್ಲಿನಿಕ್‌ನ ವೈದ್ಯರೊಬ್ಬರು ನಿಶಾಂತ್‌ಗೆ ಇಂಜೆಕ್ಷನ್ ನೀಡಿದ್ದರು. ಆದರೆ ನಿಶಾಂತ್‌ಗೆ ಜ್ವರ ಕಡಿಮೆಯಾಗುವ ಬದಲು ಹೆಚ್ಚಾದ ಹಿನ್ನೆಲೆ ಆತನನ್ನು ತಕ್ಷಣ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದಾದ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್ಎಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೆ ನಿಶಾಂತ್ ಅಲ್ಲಿ ಮೃತಪಟ್ಟಿದ್ದಾನೆ.

ತದನಂತರ ನಿಶಾಂತ್ ಸಾವಿಗೆ ಖಾಸಗಿ ಕ್ಲಿನಿಕ್ ವೈದ್ಯನ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ. ಪೋಷಕರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಬಳಿಕ, ಪೊಲೀಸರು ಧರಣಿನಿರತ ಪೋಷಕರ ಮನವೊಲಿಸಿ ಕಳಿಸಿದ್ದಾರೆ. ಮಂಡ್ಯದ ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Also read:
ಮಂಡ್ಯದ ಡಾ.ಅಸ್ರಣ್ಣ ಬೇಜವಾಬ್ದಾರಿತನದಿಂದ 15 ಜನ ಅಮಾಯಕರ ಸಾವು: ಪಾಂಡವಪುರ ಎಸಿ ಶಿವಾನಂದ್

(youth in mandya died allegedly due to doctor negligence in private hospital)