ಮಂಗಳೂರು: ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಅರಬಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಈ ಬಗ್ಗೆ ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
2018ರಲ್ಲಿ ಮಹಿಳಾ ಆಯೋಗಕ್ಕೆ ಸಂಶೋಧನಾ ವಿದ್ಯಾರ್ಥಿನಿ ಸಾಕ್ಷ್ಯ ಸಮೇತ ದೂರು ನೀಡಿದ್ದರು. ಆಯೋಗ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸಮಿತಿಯಿಂದ ತನಿಖೆ ಶುರುವಾಗಿತ್ತು. ಬಳಿಕ 2018ರ ಡಿಸೆಂಬರ್ನಲ್ಲೇ ಆಡಳಿತ ಸಮಿತಿ ವರದಿಯನ್ನು ಸಲ್ಲಿಸಿತ್ತು. ಆದರೆ ವಿವಿ ಕುಲಸಚಿವ ಎಂ.ಎಂ. ಖಾನ್ ವರದಿ ತೆರೆಯದೇ ಮುಚ್ಚಿಟ್ಟಿದ್ದರು.
ಆದರೆ ಇತ್ತೀಚೆಗೆ ಮಹಿಳಾ ಆಯೋಗ ಈ ವರದಿ ಬಗ್ಗೆ ಕೇಳಿತ್ತು. ಹೀಗಾಗಿ ಸಿಂಡಿಕೇಟ್ ಎದುರು ಈ ವರದಿ ಬಗ್ಗೆ ಪ್ರಸ್ತಾಪ ಮಾಡಲಾಯಿತು. ವರದಿಯಲ್ಲಿ ಪ್ರೊ. ಅರಬಿ ತಪ್ಪಿತಸ್ಥ ಎಂಬುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನ ಸೇವೆಯಿಂದ ವಜಾ ಮಾಡಲಾಗಿದೆ. ಜೊತೆಗೆ ವರದಿ ಮುಚ್ಚಿಟ್ಟಿದ್ದಕ್ಕೆ ಎಂ.ಎಂ. ಖಾನ್ ವಿರುದ್ಧವೂ ಸರ್ಕಾರಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ.
Published On - 1:48 pm, Thu, 29 October 20