ಬೆಂಗಳೂರು ಅ.18: ಮಂಗಳೂರು (Mangaluru) ಕುಕ್ಕರ್ ಬಾಂಬ್ ಸ್ಫೋಟ (Cooker Bomb) ಪ್ರಕರಣದ ಸಂಚು ರೂಪಿಸಿದ್ದ, ಐಸಿಸ್ (ISIS) ಉಗ್ರಗಾಮಿ ಸಂಘಟನೆಯ ಸಂಚುಕೋರ, ಶಿವಮೊಗ್ಗ ಮೂಲದ ಅರಾಫತ್ ಅಲಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದ್ದು, ವಿಚಾರಣೆ ವೇಳೆ ಮತ್ತೊಂದು ಭಯಾನಕ ಅಂಶ ಬಾಯಿಬಿಟ್ಟಿದ್ದಾನೆ. ಕರ್ನಾಟಕದಲ್ಲಿ ಮೂರು ಸ್ಥಳಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದೇವು ಎಂದು ಹೇಳುದ್ದಾನೆ. ಕದ್ರಿ ದೇವಸ್ಥಾನ ಟಾರ್ಗೇಟ್ ಮಾಡಲಾಗಿತ್ತು ಎಂದು ಈ ಹಿಂದೆಯೇ ಬಾಯಿಬಿಟ್ಟಿದ್ದನು. ಇದೀಗ ಉಡುಪಿ ಮಠ, ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನೂ ಕೂಡ ಟಾರ್ಗೆಟ್ ಮಾಡಲಾಗಿತ್ತು ಎಂದು ಹೇಳಿದ್ದಾನೆ.
ಕದ್ರಿ ಬ್ಲಾಸ್ಟ್ ಸಕ್ಸಸ್ ಆಗಿದ್ದರೇ ನಂತರ ಉಡುಪಿ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿ ಕಚೇರಿಯನ್ನು ಬ್ಲಾಸ್ಟ್ ಮಾಡುತ್ತಿದ್ದೇವು. ಆದರೆ ಕದ್ರಿ ದೇವಸ್ಥಾನ ತಲುಪುವ ಮುನ್ನವೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಹೀಗಾಗಿ ಉಡುಪಿ ಕೃಷ್ಣ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿ ಕಚೇರಿ ಬ್ಲಾಸ್ಟ್ ಪ್ಲಾನ್ ಪ್ಲಾಫ್ ಆಗಿದೆ ಎಂದು ಹೇಳಿದ್ದಾನೆ. ಹೀಗಾಗಿಯೇ ಎನ್ಐಎ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಮಲೆನಾಡಲ್ಲಿ ಬೀಡು ಬಿಟ್ಟಿದ್ದಾರೆ. ಎನ್ಐಎ ಅಧಿಕಾರಿಗಳು ಈಗಾಗಲೇ ತೀರ್ಥಹಳ್ಳಿಯ ನಾಲ್ವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.
ಕೊಪ್ಪದಲ್ಲಿ ಬಂದೂಕು ಗ್ರೆನೇಡ್, ಬಾಂಬ್ ಹಾಕುವ ತರಬೇತಿ ನೀಡಿದರು. ಈ ಹಿಂದೆಯೂ ಚಿಕ್ಕಮಗಳೂರಿನಲ್ಲಿ ಉಗ್ರರ ಬಂಧನವಾಗಿತ್ತು. ಬಿಜೆಪಿ ಕಚೇರಿಯನ್ನ ಟಾರ್ಗೆಟ್ ಮಾಡಿದರೆ ಆಶ್ಚರ್ಯ ಏನಿಲ್ಲ. ಯಾರು ರಾಷ್ಟ್ರ ಭಕ್ತಿ ಕೆಲಸ ಮಾಡುತ್ತಾರೋ ಅವರೇ ಇವರ ಶತ್ರು. ಈ ದೇಶವನ್ನು ಇಸ್ಲಾಂ ಮಾಡುವುದು ಇವರು ಅಜೆಂಡಾ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ, ರಾಜಪ್ರಭುತ್ವ ಅಲ್ಲ. ಟಿಪ್ಪು ,ಘಜಿನಿ, ಖಿಲ್ಜಿ, ಬಾಬರ್, ಔರಂಗಜೇಬ್ ಅಜೆಂಡಾವನ್ನು ಇವರು ಮುಂದುವರಿಸಿದ್ದಾರೆ. ಅವತ್ತು ಶಿವಾಜಿ, ರಾಣಾ ಪ್ರತಾಪ್ ,ಗುರು ಗೋವಿಂದ ಸಿಂಹ ಶತ್ರುಗಳಾಗಿ ಕಾಣಿಸುತ್ತಿದ್ದರು. ಇವಾಗ ಇವರಿಗೆ ಬಿಜೆಪಿ ,ಆರ್ಎಸ್ಎಸ್ ,ವಿಹೆಚ್ಪಿ ಶತ್ರುಗಳಾಗಿ ಕಾಣಿಸುತ್ತಾರೆ ಎಂದು ಮಾಜಿ ಶಾಸಕ ಸಿ.ಟಿ ರವಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:43 am, Wed, 18 October 23