ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟವರ್ಯಾರು? 3 ವಿಶೇಷ ಪಡೆಗಳಿಂದ ರಾತ್ರಿಯಿಡೀ ತನಿಖೆ

ಮಂಗಳೂರು: ಒಂದೇ ಒಂದು ಕ್ಷಣ ಯಾಮಾರಿದ್ರೂ ನಿನ್ನೆ ಕರಾವಳಿ ಕದಡಿ ಹೋಗ್ತಿತ್ತು. ದೊಡ್ಡ ದುರಂತವೇ ನಡೆದು ಹೋಗ್ತಿತ್ತು. ಅಮಾಯಕರ ನೆತ್ತರೋಕುಳಿ ಹರಿಯುತ್ತಿತ್ತು. ಆದ್ರೆ, ಇದಕ್ಕೆಲ್ಲ ಬ್ರೇಕ್ ಹಾಕಿದ್ದು ಖಾಕಿ ಪಡೆ ಮತ್ತು ಬಾಂಬ್ ನಿಷ್ಕ್ರಿಯ ದಳ ಸಾಹಸದ ಕಾರ್ಯಾಚರಣೆ. ಇಡೀ ಮಂಗಳೂರನ್ನೇ ಬೆಚ್ಚಿ ಬೀಳಿಸುವಂತಹ ಘಟನೆ ನಿನ್ನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದುಬಿಟ್ಟಿತ್ತು. ಏರ್​ಪೋರ್ಟ್ ಆವರಣದಲ್ಲಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿತ್ತು. ನರರಕ್ಕಸರು ಅಮಾಯಕರ ರಕ್ತ ಹರಿಸಲು ಸ್ಕೆಚ್ ಹಾಕಿದ್ರು. ಆದ್ರೆ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟವರ್ಯಾರು? 3 ವಿಶೇಷ ಪಡೆಗಳಿಂದ ರಾತ್ರಿಯಿಡೀ ತನಿಖೆ
Follow us
ಸಾಧು ಶ್ರೀನಾಥ್​
|

Updated on: Jan 21, 2020 | 6:39 AM

ಮಂಗಳೂರು: ಒಂದೇ ಒಂದು ಕ್ಷಣ ಯಾಮಾರಿದ್ರೂ ನಿನ್ನೆ ಕರಾವಳಿ ಕದಡಿ ಹೋಗ್ತಿತ್ತು. ದೊಡ್ಡ ದುರಂತವೇ ನಡೆದು ಹೋಗ್ತಿತ್ತು. ಅಮಾಯಕರ ನೆತ್ತರೋಕುಳಿ ಹರಿಯುತ್ತಿತ್ತು. ಆದ್ರೆ, ಇದಕ್ಕೆಲ್ಲ ಬ್ರೇಕ್ ಹಾಕಿದ್ದು ಖಾಕಿ ಪಡೆ ಮತ್ತು ಬಾಂಬ್ ನಿಷ್ಕ್ರಿಯ ದಳ ಸಾಹಸದ ಕಾರ್ಯಾಚರಣೆ.

ಇಡೀ ಮಂಗಳೂರನ್ನೇ ಬೆಚ್ಚಿ ಬೀಳಿಸುವಂತಹ ಘಟನೆ ನಿನ್ನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದುಬಿಟ್ಟಿತ್ತು. ಏರ್​ಪೋರ್ಟ್ ಆವರಣದಲ್ಲಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿತ್ತು. ನರರಕ್ಕಸರು ಅಮಾಯಕರ ರಕ್ತ ಹರಿಸಲು ಸ್ಕೆಚ್ ಹಾಕಿದ್ರು. ಆದ್ರೆ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಮಂಗಳೂರು ಪೊಲೀಸ್ರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಯ ಕೆಚ್ಚೆದೆಯ ಕಾರ್ಯಾಚರಣೆಯಿಂದ ಸಜೀವ ಬಾಂಬ್​ನ್ನು ಸ್ಫೋಟಿಸಿ ನಾಶಗೊಳಿಸಲಾಯ್ತು.

3 ‘ವಿಶೇಷ ಪಡೆ’ಗಳಿಂದ ರಾತ್ರಿಯಿಡೀ ತನಿಖೆ! ಈ ಬಾಂಬ್​ನ್ನು ಇಬ್ಬರು ದುಷ್ಕರ್ಮಿಗಳು ಇಟ್ಟು ಹೋಗಿರೋ ಶಂಕೆ ಇದೆ. ಬಾಡಿಗೆ ಆಟೋದಲ್ಲಿ ಬಂದ ಇಬ್ಬರು ಲ್ಯಾಪ್​ಟಾಪ್ ಮಾದರಿ ಬ್ಲ್ಯಾಕ್ ಬ್ಯಾಗ್​ನಲ್ಲಿ ಬಾಂಬ್ ತಂದಿಟ್ಟು ಹೋಗಿರುವ ಸ್ಪಷ್ಟ ಮಾಹಿತಿ ಖಾಕಿಗೆ ಸಿಕ್ಕಿದೆ. ಈ ದೃಶ್ಯ ಏರ್​ಪೋರ್ಟ್​ ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಆರೋಪಿಗಳ ಫೋಟೋ ಮತ್ತು ಆಟೋ ನಂಬರ್​ನ್ನು ಎಲ್ಲಾ ಠಾಣೆಗಳಿಗೆ ರವಾನಿಸಲಾಗಿದೆ. ಇನ್ನು, ರಾತ್ರಿಯಿಡೀ 3 ವಿಶೇಷ ತಂಡಗಳು ತನಿಖೆ ನಡೆಸಿದ್ವು. ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿದ್ರು. ಏರ್​ಪೋರ್ಟ್​ ಸಿಬ್ಬಂದಿ, ಪೊಲೀಸರು ಮತ್ತು ವ್ಯಕ್ತಿಗಳ ಫೋನ್ ಟ್ರ್ಯಾಪ್ ಮಾಡ್ಲಾಯಿತು. ಈ ವೇಳೆ, ಬಲವಾದ ಸಾಕ್ಷ್ಯಗಳು ದೊರೆತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಭಯೋತ್ಪಾದನಾ ಸಂಘಟನೆಗಳಿಂದ ಕೃತ್ಯ ಶಂಕೆ! ಹೊರಗಿನಿಂದ ಬಂದವರು ಅಥವಾ ಭಯೋತ್ಪಾದನಾ ಸಂಘಟನೆಗಳು ಕೃತ್ಯ ಎಸಗಿರೋ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಹಲವಾರು ಶಂಕಿತರನ್ನು ಪಾಯಿಂಟ್ ಔಟ್ ಮಾಡಿರುವ ಪೊಲೀಸರು ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಅಲ್ದೆ, ಕೇರಳ ಗಡಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ನಾಕಾಬಂದಿ ಹಾಕಿ ಪ್ರತಿಯೊಂದು ವಾಹನಗಳನ್ನೂ ಚೆಕ್ ಮಾಡಿ ಬಿಡಲಾಗುತ್ತಿದೆ.

ಇನ್ನು, ಈ ಘಟನೆಯಿಂದಾಗಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ಸೇರಿದಂತೆ ವಿವಿಧ ಕಡೆ ಖಾಕಿ ಹದ್ದಿನ ಕಣ್ಣಿಟ್ಟಿದೆ. ಸದ್ಯ ಮಂಗಳೂರು ಬಾಂಬ್ ಬಗ್ಗೆ ಬಜ್ಪೆ ಠಾಣೆ ಪೊಲೀಸ್ರು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಆದ್ರೆ, ಈ ಬಾಂಬ್​ನ್ನು ಉಗ್ರರೇ ಇಟ್ಟಿದ್ದಾರಾ? ಅಥವಾ ಯಾವುದಾದ್ರೂ ಸಂಘಟನೆಗಳ ಕೈವಾಡ ಇರಬಹುದಾ? ಅನ್ನೋ ಪ್ರಶ್ನೆಗಳು ತನಿಖಾ ತಂಡಗಳನ್ನು ಕಾಡುತ್ತಿವೆ. ಹೀಗಾಗೇ ರಾತ್ರಿಯಿಡೀ ಪೊಲೀಸ್ರು ತನಿಖೆ ಚುರುಕುಗೊಳಿಸಿದ್ದಾರೆ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?