ಹೈನುಗಾರಿಕೆ ನಂಬಿದ ಜಿಲ್ಲೆ ರೈತರಿಗೆ ಪ್ರೋತ್ಸಾಹ ಧನ ನೀಡದ ‘ರಾಬಕೊ’ ಒಕ್ಕೂಟ
ಕೊಪ್ಪಳ: ಆ ಮೂರು ಜಿಲ್ಲೆಯ ಬಹುತೇಕ ರೈತರು ಹೈನುಗಾರಿಕೆ ನಂಬಿ ಜೀವನ ಕಟ್ಟಿಕೊಂಡಿದ್ದಾರೆ. ಹೈನುಗಾರಿಕೆಯಿಂದಲೇ ಕುಟುಂಬ ಸಾಗಿಸುತ್ತಿದ್ದಾರೆ. ಆದ್ರೆ ಆ ಮೂರು ಜಿಲ್ಲೆಯ ರೈತರಿಗೆ ಕಳೆದ ಮೂರು ತಿಂಗಳಿಂದ ಪ್ರೋತ್ಸಾಹ ಧನ ಸಿಕ್ಕಿಲ್ಲ. ಕಳೆದ ಮೂರು ತಿಂಗಳಿಂದ ಒಕ್ಕೂಟ ಪ್ರೋತ್ಸಾಹ ಧನ ನೀಡದೆ ರೈತರ ಹೊಟ್ಟೆ ಮೇಲೆ ಬರೆ ಎಳೆದಿದೆ. ಹೈನುಗಾರಿಕೆ ನಂಬಿದ ರೈತರು ಕಂಗಾಲು: ರಾ.ಬ.ಕೊ ಅಂದ್ರೆ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟ. ಸದ್ಯ ಈ ಹಾಲು ಒಕ್ಕೂಟ ರೈತರಿಗೆ ಶಾಕ್ ನೀಡಿದೆ. […]
ಕೊಪ್ಪಳ: ಆ ಮೂರು ಜಿಲ್ಲೆಯ ಬಹುತೇಕ ರೈತರು ಹೈನುಗಾರಿಕೆ ನಂಬಿ ಜೀವನ ಕಟ್ಟಿಕೊಂಡಿದ್ದಾರೆ. ಹೈನುಗಾರಿಕೆಯಿಂದಲೇ ಕುಟುಂಬ ಸಾಗಿಸುತ್ತಿದ್ದಾರೆ. ಆದ್ರೆ ಆ ಮೂರು ಜಿಲ್ಲೆಯ ರೈತರಿಗೆ ಕಳೆದ ಮೂರು ತಿಂಗಳಿಂದ ಪ್ರೋತ್ಸಾಹ ಧನ ಸಿಕ್ಕಿಲ್ಲ. ಕಳೆದ ಮೂರು ತಿಂಗಳಿಂದ ಒಕ್ಕೂಟ ಪ್ರೋತ್ಸಾಹ ಧನ ನೀಡದೆ ರೈತರ ಹೊಟ್ಟೆ ಮೇಲೆ ಬರೆ ಎಳೆದಿದೆ.
ಹೈನುಗಾರಿಕೆ ನಂಬಿದ ರೈತರು ಕಂಗಾಲು: ರಾ.ಬ.ಕೊ ಅಂದ್ರೆ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟ. ಸದ್ಯ ಈ ಹಾಲು ಒಕ್ಕೂಟ ರೈತರಿಗೆ ಶಾಕ್ ನೀಡಿದೆ. ಕೊಪ್ಪಳ ಬಳ್ಳಾರಿ ಹಾಗೂ ರಾಯಚೂರ ಜಿಲ್ಲೆಯ ಹೈನುಗಾರಿಕೆ ನಂಬಿದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಯಾಕಂದ್ರೆ ಮೂರು ತಿಂಗಳಿಂದ ರಾ.ಬ.ಕೊ ಹಾಲು ಒಕ್ಕೂಟ ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಸರ್ಕಾರದಿಂದ ಎರಡು ರೂಪಾಯಿ ಪ್ರೋತ್ಸಾಹ ಧನ ಬರಬೇಕಾದ ಹಣವನ್ನು ರೈತರ ಖಾತೆಗೆ ಜಮೆ ಮಾಡಿಲ್ಲ. ಮೂರು ಜಿಲ್ಲೆಯು ರೈತರಿಗೆ ಕಳೆದ ಸಪ್ಟೆಂಬರ್ ಹಣ ಜಮೆಯಾಗಿದ್ದು ಬಿಟ್ರೆ ಹೊಸ ವರ್ಷ ಬಂದ್ರೂ ಪ್ರೋತ್ಸಾಹ ಧನ ಮರಿಚೀಕೆಯಾಗಿದೆ.
ಪ್ರೋತ್ಸಾಹ ಧನಕ್ಕೆ ಒಕ್ಕೂಟ ಬ್ರೇಕ್: ಹೀಗಾಗಿ ಮೂರು ಜಿಲ್ಲೆಯ ಹೈನುಗಾರಿಕೆ ನಂಬಿದ ರೈತರು ಪ್ರೋತ್ಸಾಹ ಧನ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ. ಸುಮಾರು 6 ಕೋಟಿ ಅಷ್ಟು ಹಣವನ್ನು ರಾ.ಬ.ಕೊ. ಒಕ್ಕೂಟ ಪ್ರೋತ್ಸಾಹ ಧನ ನೀಡಿಲ್ಲ. ತ್ರಿವಳಿ ಜಿಲ್ಲೆಯ ಮೂರು ಜಿಲ್ಲೆಯಲ್ಲಿ 32 ಸಾವಿರ ಹಾಲು ಉತ್ಪಾದಕರಿದ್ದು ಪ್ರೋತ್ಸಾಹ ಧನಕ್ಕೆ ಬ್ರೇಕ್ ಹಾಕಲಾಗಿದೆ. ಇದರಿಂದ ನಿತ್ಯ ಹಾಲು ಮಾರಿ ಜೀವನ ನಡೆಸುತ್ತಿರೋ ರೈತ ಕುಟುಂಬಗಳು ಕಂಗಾಲಾಗಿವೆ.
ಹಾಲು ಉತ್ಪಾದಕರ ಆಕ್ರೋಶ: ತ್ರಿವಳಿ ಜಿಲ್ಲೆಯಲ್ಲಿ ನಿತ್ಯ ಒಟ್ಟು 2 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಕೊಪ್ಪಳದಿಂದ 70 ಸಾವಿರ, ರಾಯಚೂರಿನಿಂದ 30 ಸಾವಿರ ಹಾಗೂ ಬಳ್ಳಾರಿ ಇಂದ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ತ್ರಿವಳಿ ಜಿಲ್ಲೆಯಲ್ಲಿ ಹೈನುಗಾರಿಕೆ ಇದ್ರೂ ಒಕ್ಕೂಟ ಮಾತ್ರ ಹಣ ಬಿಡುಗಡೆ ಮಾಡದೆ ಇರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೈನುಗಾರಿಕೆ ಮಾಡೋ ಸಣ್ಣ ಪುಟ್ಟ ಕುಟಂಬಗಳಿಗೆ ಪ್ರೋತ್ಸಾಹ ಧನವೇ ಆಸರೆಯಾಗಿದ್ದು, ಒಕ್ಕೂಟ ಮೂರು ತಿಂಗಳಿಂದ ಹಣ ಬಿಡುಗಡೆ ಮಾಡದೆ ಇರೋದು ಬಡ ರೈತರನ್ನು ಬೀದಿಗೆ ತಳ್ಳಿದಂತಾಗಿದೆ.
ಒಟ್ಟಾರೆ ಸರ್ಕಾರ ಹಾಗೂ ಒಕ್ಕೂಟ ಮಾಡಿದ ಯುಡವಟ್ಟಿಗೆ ತ್ರಿವಳಿ ಜಿಲ್ಲೆಯ ರೈತರು ಬೀದಿಗೆ ಬಂದಿದ್ದಾರೆ. ಒಕ್ಕೂಟ ಲಾಭದಲ್ಲಿದ್ರೂ ಅಧಿಕಾರಿಗಳು ಮಾತ್ರ ಸರ್ಕಾರ ನೀಡೋ ಪ್ರೋತ್ಸಾಹ ಧನಕ್ಕೆ ಕಡಿವಾಣ ಹಾಕಿ ರೈತರ ಹೊಟ್ಟೆ ಮೇಲೆ ಬರೆ ಎಳೆದಿದ್ದು ಮಾತ್ರ ದುರಂತ.