ಬೆಂಗಳೂರು, ಜ.29: ಪೋಷಕರೇ ಎಚ್ಚರ ಎಚ್ಚರ! ಮಕ್ಕಳಲ್ಲಿ ಶುರುವಾಗಿದೆ ಮಂಗನ ಬಾವು (Mangana Bavu). ಸಿಲಿಕಾನ್ ಸಿಟಿ ಬೆಂಗಳೂರಿನ ಮಕ್ಕಳಲ್ಲಿ (Children) ಮಮ್ಸ್ ಮಂಗನಬಾವು ವೈರಸ್ ಪತ್ತೆಯಾಗಿದೆ. ಸರ್ಕಾರದ (Government) ದಿವ್ಯ ನಿರ್ಲಕ್ಷ್ಯದಿಂದಾಗಿ ಮಕ್ಕಳಲ್ಲಿ ಮಮ್ಸ್ ವೈರಸ್ ಹಾವಳಿ ಶುರುವಾಗಿದೆ. ಇದರಿಂದ ಕೆಲ ಮಕ್ಕಳಿಗೆ ಎಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ನೋವಿನಿಂದ ಮಕ್ಕಳು ಶಾಲೆಯಿಂದ ಹೊರಗಡೆ ಉಳಿಯಬೇಕಾದ ಸ್ಥಿತಿ ಎದುರಾಗಿದೆ.
ಸರ್ಕಾರ ಮಕ್ಕಳಿಗೆ ಇಂತಹ ಖಾಯಿಲೆ ತಡೆಯುವುದಕ್ಕೆ ಲಸಿಕೆ ಹಾಕಿಸಬೇಕಿತ್ತು. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಖಾಯಿಲೆ ನಿಯಂತ್ರಣಕ್ಕೆ ನೀಡಬೇಕಾದ ಲಸಿಕೆ ನೀಡುವಲ್ಲಿ ನಿರ್ಲಕ್ಷ್ಯವಹಿಸಿದೆ. ಈ ಹಿನ್ನಲೆ ಮಕ್ಕಳಲ್ಲಿ ಈಗ ಹೆಚ್ಚಾಗಿ ಮಮ್ಸ್ ವೈರಸ್ ಕಾಣಿಸಿಕೊಳ್ಳುತ್ತಿದೆ. ಸದ್ಯ ಸರ್ಕಾರ ಮಕ್ಕಳಿಗೆ MR ಲಸಿಕೆ ಮಾತ್ರ ನೀಡುತ್ತಿದೆ. MMR ಲಸಿಕೆ ನೀಡುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಮಮ್ಸ್ ವೈರಸ್ ಕಾಟ ಶುರುವಾಗಿದೆ. ದಿನದಿಂದ ದಿನಕ್ಕೆ ಮಕ್ಕಳಲ್ಲಿ ಈ ವೈರಸ್ ಹೆಚ್ಚಾಗಿ ಕಾಣಸಿಕೊಳ್ಳುತ್ತಿದೆ. ಕುತ್ತಿಗೆ ಮೇಲ್ಭಾಗ ಹಾಗೂ ಗದ್ದ ಕಪಾಳದ ಭಾಗ ಬಾವು ಬರ್ತಿದೆ. ಇದರಿಂದ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದ್ದು ಮಕ್ಕಳು ಪುಲ್ ಹೈರಾಣಾಗುತ್ತಿದ್ದಾರೆ. ಮಮ್ಸ್ ಮಂಗನಬಾವು ಹಾವಳಿ ಕಳೆದ ಎರಡು ವಾರದಿಂದ ಹೆಚ್ಚಾಗಿದೆ. ಮಮ್ಸ್ ಮಂಗನ ಬಾವು ಮಕ್ಕಳಿಂದ ಮಕ್ಕಳಿಗೆ ಬಹು ಬೇಗ ಹರಡುತ್ತಿದೆ. ಈ ಕಾಯಿಲೆ ಬಂದ ಚಿಣ್ಣರಲ್ಲಿ ಜ್ವರ, ಕುತ್ತಿಗೆ ಎರಡು ಕಡೆಗಳಲ್ಲಿ ಊದಿಕೊಳ್ಳುತ್ತವೆ. ಕೆಲವರಿಗೆ ಎಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವಿನಿಂದ ಮಕ್ಕಳು ಶಾಲೆಯಿಂದ ಹೊರಗಡೆ ಉಳಿಯಬೇಕಾದ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಮಂಗಳೂರು: ವೇಣೂರಿನಲ್ಲಿ ಪಟಾಕಿ ಸ್ಫೋಟ ಪ್ರಕರಣ, ಆರೋಪಿ ಸಯ್ಯದ್ ಬಶೀರ್ ಬಂಧನ
ಮಂಗನ ಬಾವು ಅಥವಾ ಕೆಪ್ಪಟ ಮಮ್ಸ್ ಎಂಬ ವೈರಾಣುಗಳಿಂದ ಈ ರೋಗ ಬರುತ್ತದೆ. ಪ್ಯಾರೊಟಿಡ್ ಗ್ರಂಥಿಗಳನ್ನು ದೊಡ್ಡದಾಗಿಸುವ ಮೂಲಕ ತೀವ್ರ ನೋವನ್ನುಂಟು ಮಾಡುತ್ತದೆ. ಕಿವಿಯ ಮುಂಭಾಗದಲ್ಲಿ ಕೆಳಗಡೆ ಇರುವ ಈ ಗ್ರಂಥಿಗಳು ಜೊಲ್ಲನ್ನು ಉತ್ಪಾದಿಸುತ್ತವೆ.
ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ಮಗು, ವ್ಯಕ್ತಿಯ ಸಂಪರ್ಕದಿಂದಾಗಿ (ದೈಹಿಕ ಸ್ಪರ್ಶ,ಎಂಜಲು,ಉಸಿರಾಟ) ಇನ್ನೊಬ್ಬರಿಗೆ ಹರಡುತ್ತದೆ. 2ರಿಂದ 12 ವರ್ಷ ಪ್ರಾಯದ ಮಕ್ಕಳು ಈ ಸೋಂಕಿಗೆ ಹೆಚ್ಚಾಗಿ ಗುರಿಯಾಗುತ್ತಾರೆ. ವಯಸ್ಸಾದವರಲ್ಲಿ ಪ್ಯಾರೊಟಿಡ್ ಗ್ರಂಥಿಗಳ ಜೊತೆಗೆ ವೃಷಣಗಳು, ಮೇದೋಜ್ಜೀರಕ ಗ್ರಂಥಿ ಮತ್ತು ನರಮಂಡಲದಂತಹ ಇತರ ಅಂಗಾಂಗಗಳೂ ಈ ಸೋಂಕಿಗೊಳಗಾಗಬಹುದು. ಸಾಮಾನ್ಯವಾಗಿ ವೈರಾಣು ಸೋಂಕು ಉಂಟಾದ 12ರಿಂದ 14 ದಿನಗಳಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ