ಒಂದು ನಿಮಿಷದ ಕೆಲಸ, ಆದರೆ ಮಾಜಿ ಸಚಿವರಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ ಬದಲಾಯಿಸಿಕೊಳ್ಳದ ಮಾಜಿ ಸಚಿವರು!

ಬೆಂಗಳೂರು: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅದು ನಿಜಕ್ಕೂ ಒಂದು ನಿಮಿಷದ ಕೆಲಸ, ಆದರೆ ರಾಜ್ಯ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಅನೇಕ ಮಾಜಿ ಸಚಿವರು ತಾವು ಖಾತೆ ಕಳೆದುಕೊಂಡು, ಮಾಜಿಗಳಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ಯನ್ನು ಬದಲಾವಣೆ ಮಾಡಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಹಾಗಾಗಿ ದಿನ 4 ಆದರೂ ಇನ್ನೂ ಸಚಿವರಾಗಿಯೇ ರಾರಾಜಿಸುತ್ತಿದ್ದಾರೆ. ಅಥವಾ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಅದಮ್ಯ ವಿಶ್ವಾಸವಿದ್ದು, ಮತ್ತೆ ಅದಅದೇ ಖಾತೆಗಳನ್ನು ತಮಗೆ ದಯಪಾಲಿಸುತ್ತಾರೆ ಎಂಬ ಅಪಾರ ನಂಬಿಕೆಯೋ ಅಂತೂ […]

ಒಂದು ನಿಮಿಷದ ಕೆಲಸ, ಆದರೆ ಮಾಜಿ ಸಚಿವರಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ ಬದಲಾಯಿಸಿಕೊಳ್ಳದ ಮಾಜಿ ಸಚಿವರು!
’ಶಿಕ್ಷಣ ಸಚಿವ’ ಸುರೇಶ್ ಕುಮಾರ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 30, 2021 | 11:06 AM

ಬೆಂಗಳೂರು: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅದು ನಿಜಕ್ಕೂ ಒಂದು ನಿಮಿಷದ ಕೆಲಸ, ಆದರೆ ರಾಜ್ಯ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಅನೇಕ ಮಾಜಿ ಸಚಿವರು ತಾವು ಖಾತೆ ಕಳೆದುಕೊಂಡು, ಮಾಜಿಗಳಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ಯನ್ನು ಬದಲಾವಣೆ ಮಾಡಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಹಾಗಾಗಿ ದಿನ 4 ಆದರೂ ಇನ್ನೂ ಸಚಿವರಾಗಿಯೇ ರಾರಾಜಿಸುತ್ತಿದ್ದಾರೆ. ಅಥವಾ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಅದಮ್ಯ ವಿಶ್ವಾಸವಿದ್ದು, ಮತ್ತೆ ಅದಅದೇ ಖಾತೆಗಳನ್ನು ತಮಗೆ ದಯಪಾಲಿಸುತ್ತಾರೆ ಎಂಬ ಅಪಾರ ನಂಬಿಕೆಯೋ ಅಂತೂ ಅವರಿನ್ನೂ ಹಾಲಿ ಸಚಿವರಾಗಿ, ಖಾತೆಗಳ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.

ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್​ ಆದಿಯಾಗಿ ಅನೇಕ ಮಾಜಿ ಸಚಿವರು ಇಂತಹ ಚಿಕ್ಕ ಪ್ರಯತ್ನಕ್ಕೂ ಕೈ ಹಾಕದೆ, ಖಾತೆ ಕೈ ತಪ್ಪುವ ಭೀತಿಯಲ್ಲಿದ್ದಾರೆ.

ಕೆಲವರು ಮಾತ್ರ ಪ್ರಾಂಪ್ಟ್​: ಬಿ ಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಬದಲಾದ ನಂತರವೂ ಟ್ವಿಟರ್​​ನಲ್ಲಿ ಅನೇಕ ಮಾಜಿ ಸಚಿವರು ಇನ್ನೂ ತಮ್ಮ ಡೆಸಿಗ್ನೇಷನ್​ ಬದಲಾಯಿಸಿಕೊಂಡಿಲ್ಲ. ತಮ್ಮ ತಮ್ಮ ಇಲಾಖೆಗಳ ಹೆಸರು ಸಮೇತ ಅವರು ಸಚಿವರಾಗಿಯೇ ಮುಂದುವರಿದಿದ್ದಾರೆ! ಕೆಲವರು ಮಾತ್ರ ಪ್ರಾಂಪ್ಟ್​ ಆಗಿ ಮಾಜಿ ಸಚಿವರೆಂದು ಬರೆದುಕೊಂಡಿದ್ದಾರೆ. ಬಹುತೇಕ ಮಾಜಿ ಸಚಿವರು 4 ದಿನ ಕಳೆದರೂ, ಈ ಕ್ಷಣದವರೆಗೂ ಬದಲಾಯಿಸಿಕೊಳ್ಳದೆ ಹಾಲಿ ಸಚಿವರು ಎಂದೇ ದಾಖಲಾಗಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಗಿರಿಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದರೂ ಸದ್ಯಕ್ಕೆ ಆರೋಗ್ಯ ಸಚಿವ ಡಾ. ಆರ್​ ಸುಧಾಕರ್ ಅಂತಹವರು ಮಾಜಿಗಳಾಗಿ ಬದಲಾವಣೆ ಕಂಡಿದ್ದಾರೆ.

Many ex ministers in karnataka not ready to change designation in social media accounts 3

ಆರೋಗ್ಯ ಸಚಿವ ಡಾ. ಆರ್​ ಸುಧಾಕರ್ ಅಂತಹವರು ಮಾಜಿಗಳಾಗಿ ಬದಲಾವಣೆ ಕಂಡಿದ್ದಾರೆ

Many ex ministers in karnataka not ready to change designation in social media accounts 1

ಕೆ ಎಸ್​ ಈಶ್ವರಪ್ಪ ಅವರು ಇನ್ನೂ ತಮ್ಮ ಗ್ರಾಮೀಣಾಭಿವೃದ್ಧಿ ಖಾತೆಯಲ್ಲೇ ಮುಂದುವರಿದಿದ್ದಾರೆ.

Published On - 5:01 pm, Thu, 29 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ