ಮೈಸೂರು: ಕಿಚ್ ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜೈಲಲ್ಲಿದ್ದುಕೊಂಡೇ ತನ್ನ ಕರಾಮತ್ತು ತೋರಿಸಿದ್ದಾರೆ. ಸಾಲೂರು ಮಠದ ನಿರ್ವಹಣೆ ಹೊಣೆಗಾರಿಕೆಯ ವಿವರಗಳನ್ನೊಳಗೊಂಡ ವಿಲ್ ಅನ್ನು ರದ್ದು ಮಾಡಿಸಿದ್ದಾರೆ.
ತಮ್ಮ ಶಿಷ್ಯ ನಾಗೇಂದ್ರನಿಗೆ ಜವಾಬ್ದಾರಿ ನೀಡಿ ಸಾಲೂರು ಮಠದ ಗುರುಸ್ವಾಮಿ ವಿಲ್ ಮಾಡಿದ್ದರು. ಆದ್ರೆ ವಿಲ್ ಮಾಡಿದ ದಿನದಿಂದಲೂ ರದ್ದು ಮಾಡಿಸಲು ಇಮ್ಮಡಿ ಮಹದೇವಸ್ವಾಮಿ ಒತ್ತಡ ಹಾಕುತ್ತಿದ್ದರು. ಈ ಮಧ್ಯೆ, ಜೈಲಿನಲ್ಲಿದ್ದುಕೊಂಡೇ ತನ್ನ ಬೆಂಬಲಿಗರು, ಶಿಷ್ಯಂದಿರ ಮೂಲಕ ಒತ್ತಡ ಹಾಕಿಸುತ್ತಿದ್ದರು. ಹೀಗಾಗಿ ಇಮ್ಮಡಿ ಮಹದೇವಸ್ವಾಮಿ ಒತ್ತಡಕ್ಕೆ ಮಣಿದು ತಾವೇ ಮಾಡಿದ ವಿಲ್ ಅನ್ನು ಮೈಸೂರಿನ ರಾಮಕೃಷ್ಣನಗರದ ಉಪನೋಂದಣಿ ಕಚೇರಿಯಲ್ಲಿ ನಿನ್ನೆ ಗುರುಸ್ವಾಮಿ ರದ್ದು ಮಾಡಿಸಿದ್ದಾರೆ.
ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು:
2018ರ ಡಿಸೆಂಬರ್ 14ರಂದು ಸುಳ್ವಾಡಿ ಕಿಚ್ಗುತ್ತಿ ಮಾರಮ್ಮ ದೇವಸ್ಥಾನದ ಗೋಪುರ ಶಂಕು ಸ್ಥಾಪನೆ ಸಮಾರಂಭದಲ್ಲಿ ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು. ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಪ್ರಕರಣ ಸಂಬಂಧ ದೇವಾಲಯ ಸೇವಾ ಟ್ರಸ್ಟ್ನ ಅಧ್ಯಕ್ಷರಾಗಿದ್ದ ಇಮ್ಮಡಿ ಮಹದೇವಸ್ವಾಮಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಗೋಪುರ ನಿರ್ಮಾಣ ಸಂಬಂಧ ಎರಡು ಗುಂಪುಗಳ ನಡುವೆ ವಿವಾದವಿತ್ತು. ಹೀಗಾಗಿ ತಿನ್ನುವ ಪ್ರಸಾದದಲ್ಲಿ ಕ್ರಿಮಿನಾಷಕ ಬೆರೆಸಿ 17 ಮಂದಿ ಸಾವಿಗೆ ಕಾರಣರಾಗಿದ್ದರು.
Published On - 12:33 pm, Sat, 19 October 19