Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತೃತ್ವ ಸುರಕ್ಷತಾ ಅಭಿಯಾನ: ಪ್ರತಿ ತಿಂಗಳು 2 ದಿನ ಗರ್ಭಿಣಿಯರ ಉಚಿತ ಆರೋಗ್ಯ ತಪಾಸಣೆ

ಮಾತೃತ್ವ ಸುರಕ್ಷತಾ ಅಭಿಯಾನಕ್ಕೆ ಒತ್ತು ನೀಡಲು ಕರ್ನಾಟಕ ಆರೋಗ್ಯ ಇಲಾಖೆ ಮುಂದಾಗಿದ್ದು, ಪ್ರತಿ ತಿಂಗಳು 2 ದಿನ ಗರ್ಭಿಣಿಯರ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಇನ್ನು ಮಾತೃತ್ವ ಸುರಕ್ಷಾ ಅಭಿಯಾನದಲ್ಲಿ ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಕಿಕೊಂಡಿರುವ ಕ್ರಮಗಳು ಈ ಕೆಳಗಿನಂತಿದೆ.

ಮಾತೃತ್ವ ಸುರಕ್ಷತಾ ಅಭಿಯಾನ: ಪ್ರತಿ ತಿಂಗಳು 2 ದಿನ ಗರ್ಭಿಣಿಯರ ಉಚಿತ ಆರೋಗ್ಯ ತಪಾಸಣೆ
ಸಚಿವ ದಿನೇಶ್ ಗುಂಡೂರಾವ್
Follow us
ರಮೇಶ್ ಬಿ. ಜವಳಗೇರಾ
|

Updated on: Jan 20, 2025 | 10:19 PM

ಬೆಂಗಳೂರು, (ಜನವರಿ 20): ಗರ್ಭಿಣಿಯರ ಸುರಕ್ಷತೆ ದೃಷ್ಟಿಯಿಂದ ಮಾತೃತ್ವ ಸುರಕ್ಷತಾ ಅಭಿಯಾನವನ್ನ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ನಡೆಸಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ. ಪ್ರತಿ ತಿಂಗಳು 9 ಹಾಗೂ 24ನೇ ತಾರಿಖಿನಂದು ಎರಡು ಬಾರಿ ಗರ್ಭಿಣಿಯರ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಇದೇ ತಿಂಗಳ 22 ರಂದು ರಾಯಚೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಗರ್ಬಿಣಿಯರಿಗಾಗಿಯೇ ಬೃಹತ್ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಆರೋಗ್ಯ ಸವಿವ ದಿನೇಶ್ ಗುಂಡೂರಾವ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಮಾತೃತ್ವ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಾಯಂದಿರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಗರ್ಭಿಣಿಯರ ಆರೋಗ್ಯ ತಪಾಸಣಾ ಶಿಬಿರಗಳನ್ನ ದೊಡ್ಡಮಟ್ಟದಲ್ಲಿ ರಾಜ್ಯದಾದ್ಯಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಸುವಂತೆ ಸೂಚನೆ ನೀಡಿದ್ದಾರೆ.‌

ಮಾತೃತ್ವ ಸುರಕ್ಷಾ ಅಭಿಯಾನದಲ್ಲಿ ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಕಿಕೊಂಡಿರುವ ಕ್ರಮಗಳು ಈ ಕೆಳಗಿನಂತಿದೆ.

  • ಗುಣಾತ್ಮಕ ಹೆರಿಗೆ ಸೇವೆಗಳನ್ನ ಒದಗಿಸುವುದು.
  • ಆರಂಭಿಕ ANC ನೋಂದಣಿ, 4 ದಿನ ನಿತ್ಯದ ANC ಭೇಟಿಗಳನ್ನು ಖಚಿತಪಡಿಸಿಕೊಳ್ಳುವುದು.
  • ಸಾಮಾನ್ಯ ಗರ್ಭಿಣಿ ಮಹಿಳೆಯರಿಗೆ 1 PMSMA ಭೇಟಿ ಮತ್ತು HRP ಗಳಿಗೆ ಹೆಚ್ಚುವರಿ 3 ಭೇಟಿಗಳು.
  • ಪ್ರತಿ ಗರ್ಭಿಣಿ ಮಹಿಳೆಗೆ ಜನನ ಯೋಜನೆಯನ್ನು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳುವುದು.
  • ಗರ್ಭಧಾರಣೆಯ 3 ತಿಂಗಳ ಮೊದಲು ಮತ್ತು ಗರ್ಭಧಾರಣೆಯ 1 ನೇ ತ್ರೈಮಾಸಿಕದಲ್ಲಿ ಪೋಲಿಕ್ ಆಮ್ಲ ಮಾತ್ರೆಗಳನ್ನು ನೀಡಲಾಗುತ್ತದೆ.
  • 500 mcg ಕ್ಯಾಲ್ಸಿಯಂ ಅನ್ನು ಗರ್ಭಧಾರಣೆಯ 14 ನೇ ವಾರದಿಂದ ಹೆರಿಗೆ ಮತ್ತು 6 ತಿಂಗಳ ನಂತರದ ಅವಧಿಯವರೆಗೆ ನೀಡಲಾಗುತ್ತಿದೆ.
  • 3 ನೇ ತ್ರೈಮಾಸಿಕ PW ಗಳ ಲೈನ್ ಪಟ್ಟಿ ಮತ್ತು PHCO ಗಳು ಮತ್ತು CHO ಗಳಿಂದ HWC ಗಳಲ್ಲಿ ಕಡ್ಡಾಯವಾಗಿ follow up ಮಾಡಲಾಗುತ್ತಿದೆ.
  • ಓರಲ್ ಗ್ರೂಕೋಸ್ ಟಾಲರೆನ್ಸ್ ಟೆಸ್ಟ್ (OGTT) ಬಳಸಿಕೊಂಡು ಗರ್ಭಾವಸ್ಥೆಯ ಮಧುಮೇಹ ಮೆಲ್ಲಿಟಸ್‌ಗಾಗಿ
  • ಪ್ರತಿ ಗರ್ಭಿಣಿಯ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ.
  • ಪ್ರತಿ ಭೇಟಿಯಲ್ಲಿ ರಕ್ತದೊತ್ತಡ ಮತ್ತು ತೂಕವನ್ನು ರೆಕಾರ್ಡ್ ಮಾಡಲಾಗುವುದು.
  • ಹೆರಿಗೆಯ ಚಿಹ್ನೆಗಳು ಮತ್ತು ಅಪಾಯದ ಚಿಹ್ನೆಗಳ ಬಗ್ಗೆ, ಗರ್ಭಿಣಿಯರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅರಿವು ಮೂಡಿಸುವುದು.
  •  ಗರ್ಭಿಣಿಯರಿಗೆ ಆಹಾರ (ಪೌಷ್ಠಿಕಾಂಶ) ಮತ್ತು ವಿಶ್ರಾಂತಿಯ ಬಗ್ಗೆ ಸಲಹೆ.
  • ಪ್ರತಿ ತಿಂಗಳ 9 ಮತ್ತು 24 ರಂದು PMSMA ಮತ್ತು e-PMSMA ದಿನಗಳಲ್ಲಿ ಗಂಡಾಂತರ ಗರ್ಭಿಣಿಯರಿಗೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರುಗಳಿಂದ ಉತ್ತಮ ಆರೈಕೆ.
  • ಪ್ರತಿ ತಿಂಗಳು ಗರ್ಭಿಣಿಯರ ಮಾಸಿಕ ಭೇಟಿಯಲ್ಲಿ ಅವಶ್ಯವಿರುವ ಎಲ್ಲಾ ರಕ್ತ ತಪಾಸಣೆ. (Hb%, urine albumin etc.)
  • ಪ್ರತಿ ಗರ್ಭಿಣಿಯರಿಗೆ 2 dose ಗಳ TT injection.
  • ಪ್ರತಿ ಹಳ್ಳಿಯಲ್ಲಿ ನಿಯಮಿತ VHND ದಿನಗಳನ್ನು ಆಯೋಜಿಸಲಾಗುತ್ತಿದ್ದು ಗರ್ಭಿಣಿಯರಿಗೆ ಮತ್ತು ಅವರ ಮನೆಯವರಿಗೆ ಗರ್ಭಾವಸ್ಥೆಯಲ್ಲಿ ಅವಶ್ಯವಿರುವ ಪೋಷಕಾಂಶದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
  • ತುರ್ತು ಪರಿಸ್ಥಿತಿ ಎದುರಾದರೆ ಎಲ್ಲಿಗೆ ಹೋಗಬೇಕು ಮತ್ತು ಹೇಗೆ ವ್ಯವಸ್ಥೆ ಮಾಡಬೇಕು ಎಂಬುದರ ಕುರಿತು ಮಹಿಳೆಗೆ ಸಲಹೆ.
  • ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಎಲ್ಲಾ ವರ್ಗದ ಗರ್ಭಿಣಿಯರಿಗೆ (APL/BPL) ಉಚಿತವಾಗಿ ವೈದ್ಯಕೀಯತಪಾಸಣೆ ಹಾಗೂ ಹೆರಿಗೆ, ಪ್ರಯೋಗಾಲಯ ಪರೀಕ್ಷೆಗಳು ಔಷದೋಪಚಾರಗಳು.
  • ಹೆರಿಗೆ ಸಮಯದಲ್ಲಿ ಊಟದ ವ್ಯವಸ್ಥೆ (ಸಾಮಾನ್ಯ ಹೆರಿಗೆಗೆ 3 ದಿನ, ಸಿಜೇರಿಯನ್ ಹೆರಿಗೆಗೆ 7 ದಿನ)
  • ಹೆರಿಗೆ ಸಮಯದಲ್ಲಿ ಮತ್ತು ಹೆರಿಗೆಯ ನಂತರ ಸಾರಿಗೆ ವ್ಯವಸ್ಥೆ.

ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ