ಬಳ್ಳಾರಿ: ಜಿಲ್ಲೆಯ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ (Election) ಇಂದು ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರಿಗೆ ವಿಫ್ ಜಾರಿ ಮಾಡಲಾಗಿದೆ. ಇಂದು ನಡೆಯಲಿರುವ ಮೇಯರ್ ಉಪಮೇಯರ್ ಆಯ್ಕೆ ಮಾಡಲಿದ್ದು, ಮೇಯರ್, ಉಪಮೇಯರ್ ಸ್ಥಾನಕ್ಕೆ ಸ್ಪರ್ದಿಸುವ ಕುರಿತು ಬಿಜೆಪಿಯಿಂದ ಚರ್ಚೆ ಮಾಡಲಾಗುತ್ತಿದೆ. ಮುಂಜಾನೆ ೯ ಗಂಟೆಗೆ ಶಾಸಕ ಸೋಮಶೇಖರ್ ರೆಡ್ಡಿ ಮನೆಯಲ್ಲಿ ಬಿಜೆಪಿ ಸದಸ್ಯರ ಸಭೆ ನಡೆಯಿತು. ರೆರ್ಸಾಟ್ ನಿಂದ ನೇರವಾಗಿ ಮೇಯರ್ ಚುನಾವಣೆಗೆ ಕಾಂಗ್ರೆಸ್ ಸದಸ್ಯರು ಆಗಮಿಸಲಿದ್ದಾರೆ. ಕಾಂಗ್ರೆಸ್ನಿಂದ ಇನ್ನೂ ಮೇಯರ್ ಅಭ್ಯರ್ಥಿ ಫೈನಲ್ ಆಗಿಲ್ಲ. ಮೇಯರ್ ಸ್ಥಾನಕ್ಕೆ ಹೆಸರು ಆಯ್ಕೆ ಮಾಡುವ ಜವಾಬ್ದಾರಿ ಕಾಂಗ್ರೆಸ್ ವೀಕ್ಷಕರಿಗೆ ಬಿಟ್ಟಿದೆ. ನಾಮಪತ್ರ ಸಲ್ಲಿಕೆ ವೇಳೆ ಮೇಯರ್ ಹೆಸರು ಬಹಿರಂಗ ಪಡಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಚುನಾವಣೆ ಹಿನ್ನಲೆ ಕಾಂಗ್ರೆಸ್ ಸದಸ್ಯರಿಗೆ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬೆಂಬಲ ನೀಡಿದ್ರೆ ಉಪಮೇಯರ್ ಸ್ಥಾನ ನೀಡುತ್ತೇವೆ ಎಂದು ಬಿಜೆಪಿ ಶಾಸಕರಿಂದ ಓಪನ್ ಆಫರ್ ನೀಡಲಾಗಿದೆ. ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಪಾಲಿಕೆಯ ಮೇಯರ್ ಉಪಮೇಯರ್ ಚುನಾವಣೆಗೆ ನಾವೂ ಸ್ಪರ್ದೆ ಮಾಡುತ್ತೇವೆ. ನಮ್ಮ ಪಕ್ಷದ ಸದಸ್ಯರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಮ್ಮಗೆ ಬಹುಮತ ಇಲ್ಲ. ನಮ್ಮ ಪಕ್ಷದ ೧೩ ಸದಸ್ಯರು ಹಾಗೂ ಇಬ್ಬರು ಚುನಾಯಿತ ಜನ ಪ್ರತಿನಿಧಿಗಳು ಇದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಮೇಯರ್ ಆಯ್ಕೆಗೆ ಗೊಂದಲ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ಮಧ್ಯೆ ಗುಂಪುಗಳಾಗಿವೆ. ಕಾಂಗ್ರೆಸ್ ಸದಸ್ಯರು ಬಂಡಾಯ ಎದ್ದು ನಮ್ಮಗೆ ಬೆಂಬಲ ನೀಡಿದ್ರೆ ನಾವೂ ಪಾಲಿಕೆ ವಶಕ್ಕೆ ಪಡೆಯುತ್ತೇವೆ. ಬಂಡಾಯ ಸದಸ್ಯರು ಬೆಂಬಲ ನೀಡಿದ್ರೆ ಅವರಿಗೆ ಉಪಮೇಯರ್ ಸ್ಥಾನ ನೀಡುತ್ತವೆ. ಕಾಂಗ್ರೆಸ್ ನ ಬಂಡಾಯ ಸದಸ್ಯರಿಗೆ ಮೇಯರ್ ಸ್ಥಾನ ಕೊಡಲ್ಲ. ನಾವೂ ಆಪರೇಷನ್ ಕಮಲವೂ ಸಹ ಮಾಡ್ತಿಲ್ಲ. ನಮ್ಮಗೆ ಬಹುಮತ ಇಲ್ಲ. ಬಂಡಾಯ ಸದಸ್ಯರು ಬೆಂಬಲ ನೀಡದಿದ್ರೆ ಸ್ಪರ್ದೆ ಮಾಡಿ ಸೋಲುತ್ತೇವೆ ಎಂದು ಹೇಳಿದರು.
ಬಿಜೆಪಿಯಿಂದ ಮೇಯರ್ ಅಭ್ಯರ್ಥಿಯಾಗಿ ಸುರೇಖಾ ಮಲ್ಲನಗೌಡರಿಂದ ನಾಮಪತ್ರ ಸಲ್ಲಿಸಲು ನಿರ್ಧಾರಿಸಲಾಗಿದ್ದು, ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಗೋವಿಂದರಾಜುಲು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಮರಹರಿಗೌಡರಿಂದ ಸೂಚನೆ ನೀಡಲಾಗಿದೆ.
ಕಾಂಗ್ರೆಸ್ ಸದಸ್ಯರು ಬೆಂಬಲ ಸೂಚಿಸಿದ್ರೆ ಮಾತ್ರ ಉಪಮೇಯರ್ ಸ್ಥಾನದಿಂದ ಹಿಂದೆ ಸರಿಯಲು ತೀರ್ಮಾನಿಸಲಾಗಿದೆ. ಅದೇ ರೀತಿಯಾಗಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಿಂದ ನಾಮಪತ್ರ ಸಲ್ಲಿಕೆ ಮಾಡಲಾಯಿತು. ಮೇಯರ್ ಅಭ್ಯರ್ಥಿಯಾಗಿ ರಾಜೇಶ್ವರಿ ಸುಬ್ಬರಾಯುಡು ನಾಮಪತ್ರ ಸಲ್ಲಿಕೆ ಸಲ್ಲಿಸಿದ್ದು, ಉಪ ಮೇಯರ್ ಅಭ್ಯರ್ಥಿಯಾಗಿ ಮಾಲನ್ ಬಿ ನಾಮಪತ್ರ ಸಲ್ಲಿಸಿದರು. ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ:
ಪತಿ ಸ್ಯಾಡಿಸ್ಟ್ ಸೈಕೊ ಎಂದು ಆರೋಪಿಸಿ ಪತ್ನಿ ಆತ್ಮಹತ್ಯೆ, ಮತ್ತೊಂದೆಡೆ ಗಂಡ ಕೈಕೊಟ್ಟಿದ್ದಕ್ಕೆ ಹೆಂಡತಿ ಪ್ರತಿಭಟನೆ