AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಗವದ್ಗೀತೆಯಂತೆ ಕುರಾನ್ ಬಗ್ಗೆ ಚಿಂತನೆ ಮಾಡುತ್ತಾರಾ?; ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸಿಎಫ್ಐ ವಿರೋಧ!

ಭಗವದ್ಗೀತೆಯಂತೆ ಕುರಾನ್ ಬಗ್ಗೆ ಚಿಂತನೆ ಮಾಡುತ್ತಾರಾ? ಕುರಾನ್ ಬೋಧನೆಗೆ ಪರ್ಯಾಯ ವ್ಯವಸ್ಥೆ ಇದೆ. ಅದೇ ರೀತಿ ಭಗವದ್ಗೀತೆ ಬೋಧನೆಗೆ ಪರ್ಯಾಯ ವ್ಯವಸ್ಥೆ ಇದೆ.

ಭಗವದ್ಗೀತೆಯಂತೆ ಕುರಾನ್ ಬಗ್ಗೆ ಚಿಂತನೆ ಮಾಡುತ್ತಾರಾ?; ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸಿಎಫ್ಐ ವಿರೋಧ!
ಭಗವದ್ಗೀತೆ
TV9 Web
| Updated By: sandhya thejappa|

Updated on:Mar 19, 2022 | 10:21 AM

Share

ಬೆಂಗಳೂರು: ಪಠ್ಯದಲ್ಲಿ ಭಗವದ್ಗೀತೆ (Bhagavad Gita) ಅಳವಡಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಸಿಎಫ್ಐ (CFI) ವಿರೋಧ ವ್ಯಕ್ತಪಡಿಸಿದೆ. ಪಠ್ಯದಲ್ಲಿ ಭಗವದ್ಗೀತೆ ಪರಿಚಯ ಚಿಂತನೆ ಸಂವಿಧಾನಬಾಹಿರ. ಪಠ್ಯದಲ್ಲಿ ಭಗವದ್ಗೀತೆಗೆ ಅಳವಡಿಸಿದರೆ ಕೋರ್ಟ್​ಗೆ ಹೋಗುತ್ತೇವೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಭಗವದ್ಗೀತೆಯಂತೆ ಕುರಾನ್ ಬಗ್ಗೆ ಚಿಂತನೆ ಮಾಡುತ್ತಾರಾ? ಕುರಾನ್ ಬೋಧನೆಗೆ ಪರ್ಯಾಯ ವ್ಯವಸ್ಥೆ ಇದೆ. ಅದೇ ರೀತಿ ಭಗವದ್ಗೀತೆ ಬೋಧನೆಗೆ ಪರ್ಯಾಯ ವ್ಯವಸ್ಥೆ ಇದೆ. ಆದರೆ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ವಿರೋಧಿಸುತ್ತೇವೆ ಅಂತ ಸಿಎಫ್ಐ ತಿಳಿಸಿದೆ.

ಗುಜರಾತ್​ನ ಶಾಲೆಗಳಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧಿಸಲು ಆದೇಶಿಸಲಾಗಿದೆ. ಹೊಸ ಶಿಕ್ಷಣ ನೀತಿ (NEP) ಅಡಿಯಲ್ಲಿ ಗುಜರಾತ್​ನ ಶಾಲೆಗಳ ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸಲಾಗುತ್ತದೆ ಎಂದು ಗುಜರಾತ್ ಸರ್ಕಾರ ಮಾರ್ಚ್ 17ಕ್ಕೆ ಪ್ರಕಟಿಸಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ 6 ರಿಂದ 12 ನೇ ತರಗತಿಯ ಮಕ್ಕಳಿಗೆ ಭಗವದ್ಗೀತೆಯ ತತ್ವಗಳು ಮತ್ತು ಮೌಲ್ಯಗಳನ್ನು ಕಲಿಸಲಾಗುವುದು ಎಂದು ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ಹೇಳಿದ್ದಾರೆ.

ಈ ವರ್ಷ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವುದಿಲ್ಲ: ಬಿಸಿ ನಾಗೇಶ್: ಕರ್ನಾಟಕದ ಪಠ್ಯದಲ್ಲಿ ಭಗವದ್ಗೀತೆ ಪರಿಚಯಿಸುವ ವಿಚಾರವಾಗಿ ನಿನ್ನೆ (ಮಾರ್ಚ್ 18) ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ಈ ವರ್ಷದ ಪಠ್ಯದಲ್ಲಿ ಭಗವದ್ಗೀತೆಯನ್ನ ಪರಿಚಯಿಸಲ್ಲ. ರಾಜ್ಯದ ಪಠ್ಯಪುಸ್ತಕದಲ್ಲಿ ಈ ವರ್ಷ ಭಗವದ್ಗೀತೆ ಸೇರಿಸಲ್ಲ. ಈಗ ಪುಸ್ತಕದಲ್ಲಿ ಜ್ಞಾನವಿದೆ, ಸಂಸ್ಕಾರವಿಲ್ಲ ಎನ್ನುತ್ತಿದ್ದಾರೆ. ಮಾರಲ್ ಸೈನ್ಸ್ ತರುವಂತೆ ಹಲವರು ಬೇಡಿಕೆ ಇಟ್ಟಿದ್ದಾರೆ. ಇಂತಹದೊಂದು ಬೇಡಿಕೆ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ತಜ್ಞರ ಜೊತೆ ಚರ್ಚಿಸುತ್ತೇವೆ. ಅದನ್ನು ಹೇಗೆ ಜಾರಿ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ನನಗೆ ಗುಜರಾತ್ ಮಾದರಿ ಎಂಬುದು ನನಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಜ್ಞಾನದ ಜತೆ ಸಂಸ್ಕಾರ ಕಲಿಸಬೇಕಿದೆ. ಅದರ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಪಠ್ಯದಲ್ಲಿ ಮಾರೆಲ್ ಸೈನ್ಸ್ ಸೇರಿಸಲು ಬೇಡಿಕೆ ಇದೆ. ಬೈಬಲ್, ಕುರಾನ್, ಭಗವದ್ಗೀತೆಗಳಲ್ಲಿನ ಒಳ್ಳೆಯ ಅಂಶಗಳನ್ನು ಸೇರಿಸಿ ಅಂತ ಹೇಳಬಹುದು ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಹೆಚ್ಡಿ ಕುಮಾರಸ್ವಾಮಿ ಹೇಳಿದ್ದೇನು?: ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ ಬಗ್ಗೆ ಚರ್ಚೆ ವಿಚಾರವಾಗಿ ಟಿ.ಮಾಯಗೌಡನಹಳ್ಳಿಯಲ್ಲಿ ಹೆಚ್ ಡಿ ಕುಮಾರಸ್ವಾಮಿ ನಿನ್ನೆ ಹೇಳಿಕೆ ನೀಡಿದ್ದರು. ಜನರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ರಮಗಳು ಬೇಕು. ಮಕ್ಕಳ ಬದುಕು ಕಟ್ಟಿಕೊಡೋದಕ್ಕೆ ಸರ್ಕಾರ ಇರುವುದು. ಮಕ್ಕಳ ಭವಿಷ್ಯ ನಿರ್ಮಿಸುವ ವಿಚಾರ ಶಾಲೆಗಳಲ್ಲಿ ಇರಬೇಕು. ಕೇವಲ ಮತ ಬ್ಯಾಂಕ್​ಗಾಗಿ ಇಂತಹ ವಿಚಾರಗಳ ಚರ್ಚೆ ಮಾಡಲಾಗುತ್ತಿದೆ. ಇತರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ

ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ? ನೆಟ್ಟಿಗರು ಏನಂತಾರೆ? ಇಲ್ಲಿದೆ ಮಾಹಿತಿ

ಆಕ್ಸಿಜನ್​ ಪ್ಲ್ಯಾಂಟ್​ನಲ್ಲಿ ಏಕಾಏಕಿ ಸ್ಪೋಟ; ಮೂವರು ಕಾರ್ಮಿಕರಿಗೆ ಗಂಭೀರ ಗಾಯ

Published On - 10:20 am, Sat, 19 March 22

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ