ಕೂಡು ಒಕ್ಕಲಿಗ ಎಂಬುದು ಲಿಂಗಾಯತ ಸಮುದಾಯದ ಉಪಪಂಗಡ: ಎಂ.ಬಿ. ಪಾಟೀಲ್ ಸ್ಪಷ್ಟನೆ

| Updated By: ganapathi bhat

Updated on: Sep 12, 2021 | 4:56 PM

MB Patil: ಎನ್. ಶಂಕ್ರಪ್ಪ ಆಯೋಗದ ವರದಿ ಸಂದರ್ಭದಲ್ಲಿ ತಪ್ಪಾಗಿದೆ. ನಮ್ಮನ್ನು ಒಕ್ಕಲಿಗರು ಅಂತ ಕೆಲವು ಕಡೆ ದಾಖಲಿಸಲಾಗಿದೆ. ಅದಕ್ಕೆ ಅಫಿಡವಿಟ್ ಸಲ್ಲಿಸಿ ಸರಿಪಡಿಸಲು ಮನವಿ ಮಾಡಿದ್ದೇವೆ ಎಂದು ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಕೂಡು ಒಕ್ಕಲಿಗ ಎಂಬುದು ಲಿಂಗಾಯತ ಸಮುದಾಯದ ಉಪಪಂಗಡ: ಎಂ.ಬಿ. ಪಾಟೀಲ್ ಸ್ಪಷ್ಟನೆ
ಎಂ.ಬಿ. ಪಾಟೀಲ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕೂಡು ಒಕ್ಕಲಿಗ ಸಮುದಾಯ ಲಿಂಗಾಯತ ಸಮುದಾಯದ ಒಂದು ಉಪ ಪಂಗಡವಾಗಿದೆ. ನಾನು ಸಹ ಕೂಡು ಒಕ್ಕಲಿಗ ಪಂಗಡದಲ್ಲಿ ಜನಿಸಿದವನು. ನಮ್ಮ ತಂದೆ ಕೂಡು ಒಕ್ಕಲಿಗ ಸಮುದಾಯದವರು. ಕೂಡು ಒಕ್ಕಲಿಗರು ಶುದ್ಧ ಶಾಖಾಹಾರಿಗಳು ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದಾರೆ. ಒಕ್ಕಲಿಗರು, ನಾವು ಇಬ್ಬರೂ ಒಕ್ಕಲುತನ ಮಾಡುತ್ತೇವೆ. ಅದಷ್ಟೇ ನಮಗೂ ಒಕ್ಕಲಿಗರಿಗೂ ಇರುವ ಸಾಮ್ಯತೆ. ನಮ್ಮನ್ನು ಕೂಡು ಒಕ್ಕಲಿಗರು ಅಂತಾರೆ ಎಂದು ಕೂಡು ಒಕ್ಕಲಿಗ ಸಮುದಾಯದ ಬಗ್ಗೆ ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.

ಆದ್ರೆ ಕೂಡು ಒಕ್ಕಲಿಗರೂ ಒಕ್ಕಲಿಗ ಸಮುದಾಯದವರಲ್ಲ. ಅವರು ಲಿಂಗಾಯತ ಸಮುದಾಯದ ಉಪಪಂಗಡದವರು. ಎನ್. ಶಂಕ್ರಪ್ಪ ಆಯೋಗದ ವರದಿ ಸಂದರ್ಭದಲ್ಲಿ ತಪ್ಪಾಗಿದೆ. ನಮ್ಮನ್ನು ಒಕ್ಕಲಿಗರು ಅಂತ ಕೆಲವು ಕಡೆ ದಾಖಲಿಸಲಾಗಿದೆ. ಅದಕ್ಕೆ ಅಫಿಡವಿಟ್ ಸಲ್ಲಿಸಿ ಸರಿಪಡಿಸಲು ಮನವಿ ಮಾಡಿದ್ದೇವೆ ಎಂದು ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಕೂಡು ಒಕ್ಕಲಿಗ ಸಹ ಲಿಂಗಾಯತದ ಒಂದು ಪಂಗಡ. ನಾವು ಒಕ್ಕಲಿಗರ ಭಾಗ ಅಲ್ಲ, ಲಿಂಗಾಯತರ ಒಂದು ಭಾಗ. ನಾವು ಜನಸಂಖ್ಯೆಯಲ್ಲೂ ಹೆಚ್ಚಿಗೆ ಇದ್ದೇವೆ. ಕೂಡು ಒಕ್ಕಲಿಗ ಲಿಂಗಾಯತರು ಕೃಷಿ ಅವಲಂಬಿಸಿದ್ದಾರೆ. ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಗೆ ಮನವಿ ಇದೆ. ಹಲವು ವರ್ಷಗಳಿಂದ ಮೀಸಲಾತಿಗೆ ಬೇಡಿಕೆ ಇಡ್ತಿದ್ದಾರೆ. ಇಂದು ನನ್ನನ್ನು ಭೇಟಿಯಾಗಿ ಮತ್ತೆ ಬೇಡಿಕೆ ಇಟ್ಟಿದ್ದಾರೆ. ಅವರಿಗೆ ಸಲಹೆ ಸಹಕಾರ ನೀಡುವ ಕೆಲಸ ಮಾಡ್ತಿದ್ದೇನೆ. ಪಂಚಮಸಾಲಿ ಸೇರಿ ಎಲ್ಲರೂ ಮೀಸಲಾತಿ‌ ಕೇಳುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.

ಕೂಡು ಒಕ್ಕಲಿಗರು ಲಿಂಗಾಯತ ಮೀಸಲಾತಿಗೆ ಹೋರಾಟ ಮಾಡುತ್ತಿದ್ದೇನೆ. ಎಲ್ಲರು ಬಡತದಲ್ಲಿದ್ದವರು ಹೀಗಾಗಿ ಮೀಸಲಾತಿ ಕೇಳುತ್ತಿದ್ದಾರೆ. ಇಂದು ಬೀದರ್ ಮತ್ತು ಕಲಬುರಗಿಯಿಂದ ಬಂದಿದ್ದಾರೆ. 3ಎ ಅಥವಾ 2ಎಯಲ್ಲಿ ಮೀಸಲಾತಿ ಕೇಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ, ಕುರುಬ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಪರಾಮರ್ಶನೆಗೆ ಉನ್ನತ ಮಟ್ಟದ ಸಮಿತಿ ರಚನೆ

ಇದನ್ನೂ ಓದಿ: ಜಾತಿ ಆಧಾರಿತ ಮೀಸಲಾತಿ ನಿಲ್ಲಿಸಿ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಆಧರಿಸಿ ಮೀಸಲಾತಿ ಒದಗಿಸಿ: ಮುಖ್ಯಮಂತ್ರಿ ಚಂದ್ರು ಒತ್ತಾಯ

Published On - 4:56 pm, Sun, 12 September 21