ರಾಜ್ಯದಲ್ಲೂ ವೈದ್ಯಕೀಯ ಆಕ್ಸಿಜನ್ ಕೊರತೆ; ಬೆಂಗಳೂರು, ಚಿತ್ರದುರ್ಗದ ಆಸ್ಪತ್ರೆಗಳಲ್ಲಿ ತಲೆದೋರಿದ ಸಮಸ್ಯೆ

ಬೆಂಗಳೂರು: ರಾಜ್ಯದ ಕೆಲವು ಆಸ್ಪತ್ರೆಗಳಲ್ಲೂ ಆಮ್ಲಜನಕದ ಕೊರತೆ ಉಂಟಾಗಿದೆ. ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಸಹ ಆಕ್ಸಿಜನ್ ಇಲ್ಲದೆ 24 ಗಂಟೆಯಲ್ಲಿ 24 ರೋಗಿಗಳು ಮೃತಪಟ್ಟಿದ್ದಾರೆ. ಇದೀಗ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಆಕ್ಸಿಜನ್​ ಖಾಲಿಯಾಗುತ್ತಿದೆ. ಇನ್ನೆರಡು ಗಂಟೆಯಲ್ಲಿ ಆಕ್ಸಿಜನ್ ಖಾಲಿಯಾಗಲಿದೆ. ಕೂಡಲೇ ಪೂರೈಕೆ ಮಾಡಿ ಎಂದು ಆಸ್ಪತ್ರೆಯ ಆಡಳಿತ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಹಾಗೇ , ಬೆಂಗಳೂರಿನ ಆರ್​.ಟಿ.ನಗರದಲ್ಲಿರುವ ಮೆಡಾಕ್ಸ್​ ಆಸ್ಪತ್ರೆಯಲ್ಲೂ ಸಹ ಆಕ್ಸಿಜನ್​ ಖಾಲಿ ಆಗುತ್ತಿದೆ. ಸಂಜೆ 4ಗಂಟೆಯವರೆಗೆ ಆಗುವಷ್ಟು ಮಾತ್ರ ಆಮ್ಲಜನಕ ಇದೆ ಎಂದು ಅಲ್ಲಿನ […]

ರಾಜ್ಯದಲ್ಲೂ ವೈದ್ಯಕೀಯ ಆಕ್ಸಿಜನ್ ಕೊರತೆ; ಬೆಂಗಳೂರು, ಚಿತ್ರದುರ್ಗದ ಆಸ್ಪತ್ರೆಗಳಲ್ಲಿ ತಲೆದೋರಿದ ಸಮಸ್ಯೆ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:May 03, 2021 | 4:19 PM

ಬೆಂಗಳೂರು: ರಾಜ್ಯದ ಕೆಲವು ಆಸ್ಪತ್ರೆಗಳಲ್ಲೂ ಆಮ್ಲಜನಕದ ಕೊರತೆ ಉಂಟಾಗಿದೆ. ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಸಹ ಆಕ್ಸಿಜನ್ ಇಲ್ಲದೆ 24 ಗಂಟೆಯಲ್ಲಿ 24 ರೋಗಿಗಳು ಮೃತಪಟ್ಟಿದ್ದಾರೆ. ಇದೀಗ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಆಕ್ಸಿಜನ್​ ಖಾಲಿಯಾಗುತ್ತಿದೆ. ಇನ್ನೆರಡು ಗಂಟೆಯಲ್ಲಿ ಆಕ್ಸಿಜನ್ ಖಾಲಿಯಾಗಲಿದೆ. ಕೂಡಲೇ ಪೂರೈಕೆ ಮಾಡಿ ಎಂದು ಆಸ್ಪತ್ರೆಯ ಆಡಳಿತ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

ಹಾಗೇ , ಬೆಂಗಳೂರಿನ ಆರ್​.ಟಿ.ನಗರದಲ್ಲಿರುವ ಮೆಡಾಕ್ಸ್​ ಆಸ್ಪತ್ರೆಯಲ್ಲೂ ಸಹ ಆಕ್ಸಿಜನ್​ ಖಾಲಿ ಆಗುತ್ತಿದೆ. ಸಂಜೆ 4ಗಂಟೆಯವರೆಗೆ ಆಗುವಷ್ಟು ಮಾತ್ರ ಆಮ್ಲಜನಕ ಇದೆ ಎಂದು ಅಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಆಸ್ಪತ್ರೆಯ ಐಸಿಯುನಲ್ಲಿ ನಾಲ್ವರು ರೋಗಿಗಳು ಇದ್ದಾರೆ. ಇಲ್ಲಿನ್ನೂ ಆಕ್ಸಿಜನ್ ಪೂರೈಕೆ ಆಗಿಲ್ಲ.

ಚಿತ್ರದುರ್ಗದಲ್ಲೂ ವೈದ್ಯಕೀಯ ಆಕ್ಸಿಜನ್ ಇಲ್ಲ ಇನ್ನು ಚಿತ್ರದುರ್ಗ ನಗರದ ಆಕ್ಸಿಜನ್ ಘಟಕದಲ್ಲೂ ವೈದ್ಯಕೀಯ ಆಕ್ಸಿಜನ್ ಕೊರತೆ ಉಂಟಾಗಿದೆ. ಆಮ್ಲಜನಕ ಖಾಲಿಯಾಗಿರುವ ಪರಿಣಾಮ ಸೋಂಕಿತರಿಗೆ ಹೈ ಫ್ಲೋ ಆಕ್ಸಿಜನ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ರೋಗಿಗಳು, ಸಂಬಂಧಿಕರು ತೀವ್ರ ಆತಂಕದಲ್ಲಿ ಇದ್ದಾರೆ. ಆದರೆ ಆಕ್ಸಿಜನ್​ ವ್ಯತ್ಯಯವಾಗಿಲ್ಲ. ಇನ್ನೇನು ಕೆಲವೇ ಹೊತ್ತಲ್ಲಿ ಆಮ್ಲಜನಕ ಪೂರೈಕೆಯಾಗಲಿದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: K Sudhakar Press Meet: ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ; ಸಚಿವ ಸುಧಾಕರ್ ಸ್ಪಷ್ಟನೆ

ಕೋವಿಡ್‌-19 ಕಾರ್ಯಪಡೆ ಪುನಾರಚನೆ: ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವ, ಆರೋಗ್ಯ ಸಚಿವ ಡಾ ಸುಧಾಕರ್​ಗೆ ಹಿನ್ನಡೆ

Published On - 4:15 pm, Mon, 3 May 21