[lazy-load-videos-and-sticky-control id=”2xb3qsX9PdE”]
ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಪಿಜಿ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆ ತಲೆ ಎತ್ತಿದೆ. ಅಲ್ಲದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಅಧಿಕೃತವಾಗಿ ಸಾಥ್ ನೀಡಿದೆಯಾ ಎಂಬ ಅನುಮಾನ ಶುರುವಾಗಿದೆ. ಭಾರಿ ಪ್ರಮಾಣದ ‘ಸೀಟ್ ಅಕ್ರಮ’ ನಡೆದ ಬಗ್ಗೆ ಆರೋಪ ಕೇಳಿ ಬಂದಿದೆ.
ರಾತ್ರೋರಾತ್ರಿ ಪಿಜಿ ಮೆಡಿಕಲ್ ಸೀಟ್ ಹಂಚಿಕೆಯಾಗಿದೆ. ಈ ಗೋಲ್ಮಾಲ್ಗೆ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ವೆಂಕಟರಾಜ ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಡೆಗಣಿಸಿ ಸೀಟ್ ಹಂಚಿಕೆ ಮಾಡಲಾಗಿದೆ. ಹಾಗೂ ಮೆಡಿಕಲ್ ಸೀಟ್ ಬ್ಲಾಕ್ ಮಾಡಿ ಭಾರಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಜುಲೈ 18ರಂದು ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪಿಜಿ ಮೆಡಿಕಲ್ ಕೌನ್ಸೆಲಿಂಗ್ ನಡೆದಿತ್ತು. ಫಿಸಿಕಲ್ ವೆರಿಫಿಕೇಶನ್ ಮೂಲಕ 176 ಸೀಟುಗಳಿಗೆ ಪಿಜಿ ಮೆಡಿಕಲ್ ಕೌನ್ಸೆಲಿಂಗ್ ನಡೆಸಲಾಗಿದೆ. ಆದ್ರೆ ಜುಲೈ 17ರ ರಾತ್ರಿ 9 ಗಂಟೆ 40 ನಿಮಿಷದಲ್ಲಿ ಸೀಟ್ ಹಂಚಿಕೆ ಮಾಡಲಾಗಿದೆ ಎಂಬ ಆರೋಪವಿದೆ. ರಾತ್ರೋರಾತ್ರಿ ಸೀಟ್ ಅಲಾಟ್ ಮಾಡಿರೋದು ಯಾಕೆ? ಪ್ರತಿದಿನ ಸಂಜೆ 5.30ರೊಳಗೆ ಮುಗಿಯುತ್ತಿದ್ದ ಸೀಟ್ ಹಂಚಿಕೆ ದಿಢೀರನೆ ಅಲಾಟ್ ಮಾಡಿರೋದು ಅನುಮಾನಗಳಿಗೆ ಕಾರಣವಾಗಿದೆ.
Published On - 10:50 am, Wed, 26 August 20