Mekedatu Project: ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರೂ ಮೇಕೆದಾಟು ಯೋಜನೆಗೆ ಎದುರಾಗಿರುವ ಅಡೆತಡೆಗಳು ಏನು?

| Updated By: ಸಾಧು ಶ್ರೀನಾಥ್​

Updated on: Dec 21, 2021 | 12:54 PM

Mekedatu Project TimeLine: ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕದ ಮಹತ್ವದ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ನಾನಾ ಕಾಲಘಟ್ಟದಲ್ಲಿ ಅನೇಕ ಅಡ್ಡಿಆತಂಕಗಳು ಎದುರಾಗಿವೆ. ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರೂ ಮೇಕೆದಾಟು ಯೋಜನೆಗೆ ಅಡೆತಡೆಗಳು ಎದುರಾಗುತ್ತಲೇ ಇವೆ.

Mekedatu Project: ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರೂ ಮೇಕೆದಾಟು ಯೋಜನೆಗೆ ಎದುರಾಗಿರುವ ಅಡೆತಡೆಗಳು ಏನು?
ಮೇಕೆದಾಟು
Follow us on

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕದ ಮಹತ್ವದ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ನಾನಾ ಕಾಲಘಟ್ಟದಲ್ಲಿ ಅನೇಕ ಅಡ್ಡಿಆತಂಕಗಳು ಎದುರಾಗಿವೆ. ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರೂ ಮೇಕೆದಾಟು ಯೋಜನೆಗೆ ಅಡೆತಡೆಗಳು ಎದುರಾಗುತ್ತಲೇ ಇವೆ. ತಾಜಾ ಬೆಳವಣಿಗೆಯಲ್ಲಿ ಕರ್ನಾಟಕ ಕಾಂಗ್ರೆಸ್​ ಜನವರಿ 9 ರಿಂದ 19 ರವರೆಗೆ ಸುದೀರ್ಘ ಪಾದಯಾತ್ರೆ ಹಮ್ಮಿಕೊಂಡಿದ್ದು, ಮೇಕೆದಾಟು ಯೋಜನೆ ಅನುಷ್ಠಾನ ನಮ್ಮ ಹಕ್ಕು ಅದುಈಡೇರಲೇಬೇಕು ಎಂದು ಆಗ್ರಹಿಸಿದೆ.

ಮೇಕೆದಾಟು ವಿಚಾರದ ಬಗ್ಗೆ ಬೆಳಗಾವಿಯಲ್ಲಿ ನಡೆದಿರುವ ವಿಧಾನಸಭೆ ಅಧಿವೇಶನದಲ್ಲಿ ಇದೀಗತಾನೆ ಸಿಎಂ ಬಸವರಾಜ ಬೊಮ್ಮಾಯಿ ಸಹ ಸ್ಪಷ್ಟನೆ ನೀಡಿದ್ದಾರೆ. ಮೇಕೆದಾಟು ವಿಚಾರದ ಬಗ್ಗೆ ಶಾಸಕ ಶರತ್ ಬಚ್ಚೇಗೌಡ ಎತ್ತಿದ್ದ ಪ್ರಶ್ನೆಗೆ ಉತ್ತರಿಸುತ್ತಾ ಮೇಕೆದಾಟು ಯೋಜನೆಯ ಜಾರಿ ಬಗ್ಗೆ ಗಂಭೀರವಾಗಿದ್ದೇವೆ. ಮುಂದಿನ ಸಭೆಯಲ್ಲಿ ಅಪ್ರೂವಲ್ ಪಡೆದು ಯೋಜನೆ ಜಾರಿ ಮಾಡಲಾಗುವುದು. ಕಾವೇರಿ ಮಾನಿಟರ್ ಬೋರ್ಡ್ ಅನುಮತಿ ಪಡೆಯಬೇಕು. ಈಗಾಗಲೇ ಮೇಕೆದಾಟು ಬಗ್ಗೆ ಎರಡು ಸಭೆ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಅಪ್ರೂವಲ್ ತೆಗೆದುಕೊಂಡು ಎಲ್ಲ ರೀತಿಯಲ್ಲೂ ಯೋಜನೆ ಜಾರಿಗೆ ಸರ್ಕಾರ ಸಿದ್ಧವಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೇಕೆದಾಟು ಯೋಜನೆಗೆ ಎದುರಾಗಿರುವ ಅಡೆತಡೆಗಳು ಏನೇನು ಎಂದು ಅವಲೋಕಿಸುವುದಾದರೆ..

– ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆಯನ್ನು ನೀಡಿದೆ.
– ಮೇಕೆದಾಟು ಯೋಜನೆಯ 9,000 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ವರದಿಯನ್ನು 2018 ರಲ್ಲಿ ಸಲ್ಲಿಸಿದೆ. ಕೇಂದ್ರ ಜಲ ಆಯೋಗದ ಅನುಮೋದನೆ ಕೋರಿ 18-01-2019ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಕೇಂದ್ರ ಜಲ ಆಯೋಗವು 25-01-2019 ರ ಪತ್ರದಲ್ಲಿ ಮೇಕೆದಾಟು ಯೋಜನೆ ವಿವರವಾದ ಯೋಜನಾ ವರದಿಯನ್ನು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಕಳುಹಿಸಿ ಅಭಿಪ್ರಾಯವನ್ನು ಕೋರಲಾಗಿದೆ.
– ಯೋಜನೆಗೆ ಅವಶ್ಯವಿರುವ EIA & EMP ವರದಿಗಳನ್ನು ತಯಾರಿಸಲು Terms of Reference (TOR) ಅರ್ಜಿಯನ್ನು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MOEF) ವೆಬ್ ಸೈಟ್ ನಲ್ಲಿ 20-06-2019ಗೆ ಅಪ್ಲೋಡ್​ ಮಾಡಲಾಗಿದೆ.
– ಅದರಂತೆ, ಈ ಪ್ರಸ್ತಾವನೆಯನ್ನು 19-07-2019 ರಂದು Expert Appraisal committee ಸಭೆಯಲ್ಲಿ ಸೂಚಿಸಿದಂತೆ ಹೆಚ್ಚುವರಿ ಮಾಹಿತಿಗಳನ್ನು 4-10-2019 ರಂದು MoEF ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ‌
– ಸದ್ಯ ಸಮಗ್ರ ಯೋಜನಾ ವರದಿಯ ಪರಿಶೀಲನೆ ಕೇಂದ್ರ ಜಲ ಆಯೋಗದ ಮುಂದೆ ಇದೆ.
– ಹಾಗೆಯೇ ಅರಣ್ಯ ಮತ್ತು ಪರಿಸರ ಸಚಿವಾಲಯದ ಒಪ್ಪಿಗೆ ಪ್ರಕ್ರಿಯೆ ಇನ್ನೂ ಬಾಕಿಉಳಿದುಕೊಂಡಿದೆ.
– ಕೇಂದ್ರ ಜಲ ಆಯೋಗದ CWMAಯಿಂದ ಪ್ರಸ್ತಾವನೆಗೆ ಕೇಂದ್ರ ಜಲ ಆಯೋಗದ ವಿವಿಧ ನಿರ್ದೇಶನಾಲಯಗಳ ಅನುಮೋದನೆ ಪಡೆಯಬೇಕಿದೆ.
– ಯೋಜನೆಯಡಿ ಮುಳುಗಡೆಯಾಗಲಿರುವ ಒಟ್ಟಾರೆ ಪ್ರದೇಶದಲ್ಲಿ ಶೇ.96 ರಷ್ಟು ಅರಣ್ಯ ಪ್ರದೇಶವಿದ್ದು, ಅದರಲ್ಲಿ ಶೇ.63 ರಷ್ಟು ವನ್ಯಜೀವಿ ಅರಣ್ಯ ಪ್ರದೇಶವಿದೆ.
– ಈ ಕುರಿತು ಪರಿಸರ ಪ್ರಭಾವದ ಮೌಲ್ಯಮಾಪನ (Environmental Impact Assessment) ಹಾಗೂ ಪರಿಸರಕ್ಕೆ ಉಂಟಾಗಬಹುದಾದ ಪರಿಸರ ಪ್ರಭಾವ ಪರಿಣಾಮಗಳ ಕುರಿತು Environmental Impact Plan ಅಧ್ಯಯನಗಳ ಉಲ್ಲೇಖಾ ನಿಬಂಧನೆಗಳು (Terms of Reference) ಪ್ರಸ್ತಾವನೆಯನ್ನು ಭಾರತ ಸರ್ಕಾರದ MOEFಗೆ ಕಳುಹಿಸಲಾಗಿದ್ದು, ಅನುಮೋದನೆ ಪಡೆಯಬೇಕಾಗಿದೆ.
– ಇದುವರೆಗೆ Terms Of Reference ನೀಡದಿರುವುದು
– ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸರ್ಕಾರ 2018ರಲ್ಲಿ ಸುಪ್ರೀಂಕೋರ್ಟ್​​ ನಲ್ಲಿ ಸಲ್ಲಿಸಿರುವ ಅರ್ಜಿ ಕೂಡ ತೊಡಕು.

 

Published On - 12:39 pm, Tue, 21 December 21