ಬೆಂಗಳೂರು: ದಿನಬಳಕೆ ವಸ್ತುಗಳ ಜತೆಗೆ ಡ್ರಗ್ಸ್ ಪೂರೈಸುತ್ತಿದ್ದ ಇಬ್ಬರ ಬಂಧನ; ಗೋಧಿ ಹಿಟ್ಟಿನ ಬಾಕ್ಸ್, ಕುಕ್ಕರ್ ಒಳಗೆ ಹೆರಾಯಿನ್ ಪತ್ತೆ
ರೈಲಿನಲ್ಲಿ ಮಣಿಪುರದಿಂದ ನಗರಕ್ಕೆ ಬಂದು ಹೆರಾಯಿನ್ ಮಾರಾಟ ಮಾಡಿ ಪುನಃ ಊರಿಗೆ ಆರೋಪಿಗಳು ಹೋಗುತ್ತಿದ್ದರು. ಒಂದು ಗ್ರಾಂ ಹೆರಾಯಿನ್ನನ್ನು 12 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಪೊಲೀಸರ ಮೇಲಿನ ಭಯದಿಂದ ವಾರಕ್ಕೊಮ್ಮೆ ಬೆಂಗಳೂರು ನಗರಕ್ಕೆ ಬರುತ್ತಿದ್ದರು.
ಬೆಂಗಳೂರು: ದಿನಬಳಕೆ ವಸ್ತುಗಳ ಜತೆಗೆ ಡ್ರಗ್ಸ್ (Drugs) ಪೂರೈಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ (arrest) ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಮಯನ್ಮಾರ್ ಗಡಿ ಭಾಗದಿಂದ ರೈಲಿನಲ್ಲಿ ಸಿಟಿಗೆ ಡ್ರಗ್ಸ್ ಪೂರೈಕೆ ಮಾಡುತಿದ್ದ ಮಣಿಪುರ ಮೂಲದ ಸಮೀರ್ ಮತ್ತು ಖಾನ್ ಬಂಧಿತ ಆರೋಪಿಗಳು. ಗೋಧಿ ಹಿಟ್ಟಿನ ಬಾಕ್ಸ್, ಕುಕ್ಕರ್ ಒಳಗೆ ಹೆರಾಯಿನ್ ತಂದು ಸಣ್ಣ ಸಣ್ಣ ಡಬ್ಬಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿರುವುದು ಸದ್ಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ರೈಲಿನಲ್ಲಿ ಮಣಿಪುರದಿಂದ ನಗರಕ್ಕೆ ಬಂದು ಹೆರಾಯಿನ್ ಮಾರಾಟ ಮಾಡಿ ಪುನಃ ಊರಿಗೆ ಆರೋಪಿಗಳು ಹೋಗುತ್ತಿದ್ದರು. ಒಂದು ಗ್ರಾಂ ಹೆರಾಯಿನ್ನನ್ನು 12 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಪೊಲೀಸರ ಮೇಲಿನ ಭಯದಿಂದ ವಾರಕ್ಕೊಮ್ಮೆ ಬೆಂಗಳೂರು ನಗರಕ್ಕೆ ಬರುತ್ತಿದ್ದರು. ಇನ್ನು ಪ್ರತಿ ಬಾರಿಯೂ ಸ್ಥಳ ಬದಲಿಸಿ ಸಬ್ ಪೆಡ್ಲರ್ಸ್ ಹಾಗೂ ಹಳೇ ಕನ್ಸುಮರ್ಸ್ಗೆ ಮಾರಾಟ ಮಾಡುತ್ತಿದ್ದರು. ಈ ಬಾರಿ ನಗರಕ್ಕೆ ಬಂದಿದ್ದಾಗ ಕೆಜಿ ಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದ ಆರೋಪಿಗಳು. ತನಿಖೆ ವೇಳೆ ಸತ್ಯ ಬಾಯಿಬಿಟ್ಟಿದ್ದಾರೆ.
ನೆಲಮಂಗಲ: ಸಿಸಿ ಕ್ಯಾಮಾರಗಳಿಗೆ ಅಳವಡಿಸಿದ್ದ ಬ್ಯಾಟರಿಗಳು ಕಳ್ಳತನ ಸಿಸಿ ಕ್ಯಾಮಾರಗಳಿಗೆ ಅಳವಡಿಸಿದ್ದ ಬ್ಯಾಟರಿಗಳನ್ನು ಕಳ್ಳತನ ಮಾಡಿದ ಘಟನೆ ನೆಲಮಂಗಲದ ಮಲ್ಲಸಂದ್ರ ವಾರ್ಡ್ ಸರ್ಕಲ್ನಲ್ಲಿ ನಡೆದಿದೆ. 30 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಬ್ಯಾಟರಿಗಳು ಕಳ್ಳತನವಾಗಿದೆ. ಬ್ಯಾಟರಿ ಕಳವು ಬಗ್ಗೆ ಪೀಣ್ಯಾ ಸಂಚಾರಿ ಪೊಲೀಸ್ ಠಾಣೆಗೆ ಸದ್ಯ ದೂರು ನೀಡಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ; ಮೂವರ ದುರ್ಮರಣ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಮೂವರು ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ವಾಸಿಂ ಖಾನ್(40), ಸೈಯದ್ ಇಸ್ಮಾಯಿಲ್(65), ಸುಶೀಲಾ ಫರ್ನಾಂಡಿಸ್(60) ಮೃತ ದುರ್ದೈವಿಗಳು. ಇನ್ನೂ ಇಬ್ಬರಿಗೆ ಗಾಯವಾಗಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಲಿಸಲಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜೈಪುರದಲ್ಲಿ 14.65 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ; ಕೀನ್ಯಾದಿಂದ ಬಂದಿದ್ದ ಮಹಿಳೆ ವಶಕ್ಕೆ
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ: ಆರೋಪಿಗಳ ಸಂಚು ನಿರೂಪಿಸುವ ಪುರಾವೆ ಇಲ್ಲ ಎಂದ ಬಾಂಬೆ ಹೈಕೋರ್ಟ್
Published On - 1:24 pm, Tue, 21 December 21