ಮೈಕ್ರೋ ರೈಟಿಂಗ್ ಕಲಾವಿದ ರಾಜೇಶ್ ವರ್ಣೇಕರ್ ನಿಧನ; ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್‌ಗೆ ಬಲಿ

|

Updated on: May 14, 2021 | 12:56 PM

ಒಂದು ವಾರದಿಂದ ಕೊವಿಡ್ ಸೋಂಕಿನಿಂದ ದಾವಣಗೆರೆ ನಗರದ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತಕಲಾವಿದ ಇಂದು ಚಿಕಿತ್ಸೆ ಫಲಕಾರಿ ಆಗದೇ‌ ಸಾವನ್ನಪ್ಪಿದ್ದಾರೆ.

ಮೈಕ್ರೋ ರೈಟಿಂಗ್ ಕಲಾವಿದ ರಾಜೇಶ್ ವರ್ಣೇಕರ್ ನಿಧನ; ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್‌ಗೆ ಬಲಿ
ಮೈಕ್ರೋ ರೈಟಿಂಗ್ ಕಲಾವಿದ ರಾಜೇಶ್ ವರ್ಣೇಕ
Follow us on

ದಾವಣಗೆರೆ: ಮೈಕ್ರೋ ರೈಟಿಂಗ್ ಮೂಲಕ ದೇಶದ ಗಮನ ಸೆಳೆದ ರಾಜೇಶ್ ವೇರ್ಣೆಕರ (52) ಕೊವಿಡ್​ಗೆ ಬಲಿಯಾಗಿದ್ದಾರೆ. ಒಂದು ವಾರದಿಂದ ಕೊವಿಡ್ ಸೋಂಕಿನಿಂದ ದಾವಣಗೆರೆ ನಗರದ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತಕಲಾವಿದ ಇಂದು ಚಿಕಿತ್ಸೆ ಫಲಕಾರಿ ಆಗದೇ‌ ಸಾವನ್ನಪ್ಪಿದ್ದಾರೆ. ದಾವಣಗೆರೆ ನಗರದ ನಿವಾಸಿ ರಾಜೇಶ್ ಹೆಸರು ಮೈಕ್ರೋ ರೈಟಿಂಗ್ ವಿಚಾರದಲ್ಲಿ ಲಿಮ್ಕಾ ಬುಕ್ ಆಫ್ ರಿಕಾರ್ಡ್​ನಲ್ಲಿ ದಾಖಲಾಗಿತ್ತು.

ವಿಜಯನಗರದ ಪ್ರಗತಿಪರ ಕೃಷಿಕ ಬಿ.ಎಂ.ಶಿವಯೋಗಿಸ್ವಾಮಿ ಕೊವಿಡ್​ಗೆ ಬಲಿ
ಸಾವಯವ ಕೃಷಿ ಮೂಲಕ‌ ಹೆಸರು ಮಾಡಿ, ಕೃಷಿ ಪಂಡಿತ ಪ್ರಶಸ್ತಿ ವಿಜೇತರಾಗಿದ್ದ ಶಿವಯೋಗಿಸ್ವಾಮಿ (58) ಇಂದು ಕೊವಿಡ್​ನಿಂದಾಗಿ ಮೃತಪಟ್ಟಿದ್ದಾರೆ. ಇವರ ತಾಯಿ ಮೃತಪಟ್ಟ ಮೂರನೇ ದಿನಕ್ಕೆ ವಿಜಯನಗರ ಹರಪನಹಳ್ಳಿ ಪಟ್ಟಣದ ಆಚಾರ್ಯ ಬಡಾವಣೆ ನಿವಾಸಿ ಶಿವಯೋಗಿಸ್ವಾಮಿ ಕೂಡ ಸಾವನ್ನಪ್ಪಿದ್ದಾರೆ. ಪತ್ನಿ, ಮೂರು ಜನ ಪುತ್ರಿಯರು ಹಾಗೂ ಓರ್ವ ಪುತ್ರನನ್ನ ಶಿವಯೋಗಿಸ್ವಾಮಿ ಅಗಲಿದ್ದಾರೆ. ಸ್ವಗ್ರಾಮವಾದ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿಯ ಅವರ ತೋಟದಲ್ಲಿ ಕೊವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ಇದನ್ನೂ ಓದಿ:

Covid 19: ಕೊರೊನಾಕ್ಕೆ ಬಲಿಯಾದ ಗರ್ಭಿಣಿ ವೈದ್ಯೆ; ಗಂಡ ಹಂಚಿಕೊಂಡ ಮನಕಲಕುವ ವಿಡಿಯೋ ಸಂದೇಶ ಇಲ್ಲಿದೆ

ಆದಿಚುಂಚನಗಿರಿ ಶಾಖಾ ಮಠದ ಶಿವನಂದಾ ಸ್ವಾಮೀಜಿ ಕೊರೊನಾಗೆ ಬಲಿ