ಮೆನು ಬದಲಾದ್ರೂ ವಿದ್ಯಾರ್ಥಿಗಳಿಗೆ ಹಳೆಯ ಬಿಸಿಯೂಟವೇ ಗತಿ!
ದೀಪಾವಳಿ ಹಬ್ಬಕ್ಕೆ ಶಾಲಾ ಮಕ್ಕಳಿಗೆ ಗಿಫ್ಟ್ ನೀಡಿದ್ದ ರಾಜ್ಯ ಸರ್ಕಾರ ಬಿಸಿಯೂಟದ ಮೆನುವನ್ನ ಬದಲಾಯಿಸಿತ್ತು. ಅದರಂತೆ ನ.1ರಿಂದ ಪ್ರತಿದಿನ ಬಗೆ ಬಗೆಯ ಬಿಸಿ ಬಿಸಿ ಊಟ ಸಿಗುತ್ತೆ ಅಂತ ಮಕ್ಕಳು ಕಾಯ್ತಾ ಇದ್ರು. ಆದ್ರೆ ಬಿಸಿಯೂಟದ ಹೊಸ ಮೆನುಗೆ ವಿಘ್ನ ಎದುರಾಗಿದೆ. ಹೊಸ ಮೆನು ಜಾರಿ ಮಾಡಿರೋ ಸರ್ಕಾರ, ಅದಕ್ಕಾಗಿ ಹಣವನ್ನೇ ಬಿಡುಗಡೆ ಮಾಡ್ತಿಲ್ಲ. ಇದ್ರಿಂದ ಹಿಂದಿನ ಮೆನುವಿನ ಪ್ರಕಾರವೇ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಬೆಂಗಳೂರು ನಗರದ ಶಾಲೆಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ನೀಡಿದ ಆಹಾರವನ್ನ ಪೂರೈಸಲಾಗ್ತಿದೆ. ಹೊಸದಾಗಿ […]
ದೀಪಾವಳಿ ಹಬ್ಬಕ್ಕೆ ಶಾಲಾ ಮಕ್ಕಳಿಗೆ ಗಿಫ್ಟ್ ನೀಡಿದ್ದ ರಾಜ್ಯ ಸರ್ಕಾರ ಬಿಸಿಯೂಟದ ಮೆನುವನ್ನ ಬದಲಾಯಿಸಿತ್ತು. ಅದರಂತೆ ನ.1ರಿಂದ ಪ್ರತಿದಿನ ಬಗೆ ಬಗೆಯ ಬಿಸಿ ಬಿಸಿ ಊಟ ಸಿಗುತ್ತೆ ಅಂತ ಮಕ್ಕಳು ಕಾಯ್ತಾ ಇದ್ರು. ಆದ್ರೆ ಬಿಸಿಯೂಟದ ಹೊಸ ಮೆನುಗೆ ವಿಘ್ನ ಎದುರಾಗಿದೆ.
ಹೊಸ ಮೆನು ಜಾರಿ ಮಾಡಿರೋ ಸರ್ಕಾರ, ಅದಕ್ಕಾಗಿ ಹಣವನ್ನೇ ಬಿಡುಗಡೆ ಮಾಡ್ತಿಲ್ಲ. ಇದ್ರಿಂದ ಹಿಂದಿನ ಮೆನುವಿನ ಪ್ರಕಾರವೇ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಬೆಂಗಳೂರು ನಗರದ ಶಾಲೆಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ನೀಡಿದ ಆಹಾರವನ್ನ ಪೂರೈಸಲಾಗ್ತಿದೆ. ಹೊಸದಾಗಿ ಏನೂ ಬದಲಾಗಿಲ್ಲ.
ಸೋಮವಾರ ಅನ್ನದ ಜೊತೆಗೆ ಸೊಪ್ಪು ಅಥವಾ ತರಕಾರಿ ಸಾಂಬಾರು, ಮಂಗಳವಾರ ತರಕಾರಿ ಪಲಾವ್ ಮತ್ತು ದಾಲ್ ಅಥವಾ ಟೋಮ್ಯಾಟೋ ಬಾತ್ ಮತ್ತು ಪಲ್ಯ ನೀಡಬೇಕು. ಬುಧವಾರ ಅನ್ನದ ಜೊತೆ ಬೇಳೆ ರಸಂ ಮತ್ತು ಕಾಳುಪಲ್ಯ ಅಥವಾ ತರಕಾರಿ ಪಲ್ಯ ಕೊಡಬೇಕು. ಗುರುವಾರ ಅನ್ನ ಮತ್ತು ಮಿಶ್ರ ತರಕಾರಿ ಸಾಂಬಾರು, ಶುಕ್ರವಾರ ಬಿಸಿ ಬೇಳೆ ಬಾತ್ ಮತ್ತು ಖಾರ ಬೂಂದಿ, ಶನಿವಾರ ತರಕಾರಿ ಉಪ್ಪಿಟ್ಟು ಅಥವಾ ವಾಂಗಿಬಾತ್ ಅಥವಾ ಗೋಧಿ ಪೊಂಗಲ್ ಅಥವಾ ಚಪಾತಿ ಮತ್ತು ಪೂರಿ ಸಾಗು ಸೇರಿದಂತೆ ಇನ್ನಿತರ ಆಹಾರ ನೀಡಬೇಕು.
ಆದ್ರೆ, ಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕಾದ ಆಹಾರದಲ್ಲಿ ಕೆಲ ಸಂಘ-ಸಂಸ್ಥೆಗಳು ಕಾಂಪ್ರಮೈಸ್ ಮಾಡಿಕೊಂಡಿವೆ. ಹೊಸ ಮೆನುವನ್ನ ಶಾಲೆ ಹಾಗೂ ಸಂಘ-ಸಂಸ್ಥೆಗಳು ಪಾಲಿಸುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಸರ್ಕಾರ ಹಣ ಬಿಡುಗಡೆ ಮಾಡದಿರೋದೇ ಇದಕ್ಕೆ ಕಾರಣ ಎನ್ನಲಾಗಿದೆ.