ದುರ್ಗದಲ್ಲಿ ಸುಗ್ಗಿ ಕಾಲದ ಮೊದಲ ಜಾತ್ರೆ, ಉತ್ಸವ ಆಚರಿಸಿ ಸಂಭ್ರಮಿಸಿದ ಜನ
ಚಿತ್ರದುರ್ಗ: ಆಯಾ ಪ್ರದೇಶಗಳಿಗೆ ಅನುಗುಣವಾಗಿ ವಿಭಿನ್ನ ಆಚರಣೆಗಳು ಜಾರಿಯಲ್ಲಿರುತ್ತವೆ. ಹಾಗೇ ಅಲ್ಲೂ ಸಹ ಸುಗ್ಗಿಯ ಕಾಲದ ಮೊದಲ ಜಾತ್ರೆ ವಿಶಿಷ್ಟವಾಗಿ ಆಚರಿಸಲಾಯ್ತು. ಹಾಗಾದ್ರೆ ಬನ್ನಿ ಸುಗ್ಗಿಕಾಲದ ಮೊದಲ ಜಾತ್ರೆಯಲ್ಲಿ ಕಿಕ್ಕಿರಿದು ಸೇರಿರುವ ಭಕ್ತರು. ಕಲಾತಂಡಗಳ ವೈಭವ. ಪಲ್ಲಕ್ಕಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ. ಕೆಂಡ ಹಾಯುತ್ತಿರುವ ಭಕ್ತರು. ಎಲ್ಲೆಲ್ಲೂ ಸಂಭ್ರಮ ಸಡಗರ. ಕಾರ್ತಿಕ ಮಾಸದಲ್ಲಿ ನಡೆಯುವ ಜಾತ್ರೆ: ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಸುಗ್ಗಿಕಾಲದ ಮೊದಲ ಜಾತ್ರೆ. ಪ್ರತಿ ಕಾರ್ತಿಕ ಮಾಸದಲ್ಲಿ ಈ ಗ್ರಾಮದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ […]
ಚಿತ್ರದುರ್ಗ: ಆಯಾ ಪ್ರದೇಶಗಳಿಗೆ ಅನುಗುಣವಾಗಿ ವಿಭಿನ್ನ ಆಚರಣೆಗಳು ಜಾರಿಯಲ್ಲಿರುತ್ತವೆ. ಹಾಗೇ ಅಲ್ಲೂ ಸಹ ಸುಗ್ಗಿಯ ಕಾಲದ ಮೊದಲ ಜಾತ್ರೆ ವಿಶಿಷ್ಟವಾಗಿ ಆಚರಿಸಲಾಯ್ತು. ಹಾಗಾದ್ರೆ ಬನ್ನಿ ಸುಗ್ಗಿಕಾಲದ ಮೊದಲ ಜಾತ್ರೆಯಲ್ಲಿ ಕಿಕ್ಕಿರಿದು ಸೇರಿರುವ ಭಕ್ತರು. ಕಲಾತಂಡಗಳ ವೈಭವ. ಪಲ್ಲಕ್ಕಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ. ಕೆಂಡ ಹಾಯುತ್ತಿರುವ ಭಕ್ತರು. ಎಲ್ಲೆಲ್ಲೂ ಸಂಭ್ರಮ ಸಡಗರ.
ಕಾರ್ತಿಕ ಮಾಸದಲ್ಲಿ ನಡೆಯುವ ಜಾತ್ರೆ: ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಸುಗ್ಗಿಕಾಲದ ಮೊದಲ ಜಾತ್ರೆ. ಪ್ರತಿ ಕಾರ್ತಿಕ ಮಾಸದಲ್ಲಿ ಈ ಗ್ರಾಮದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತೆ. ಈ ಸಂದರ್ಭದಲ್ಲಿ ನಾಗರಕಟ್ಟೆ ಹಾಗೂ ಸುತ್ತಮುತ್ತಲಿನ ಏಳು ಹಳ್ಳಿಯ ಸಾವಿರಾರು ಜನ ಸೇರುತ್ತಾರೆ. ಈ ವೇಳೆ ಎನ್.ಜಿ.ಹಳ್ಳಿ ಮುತ್ತಮ್ಮ, ದೇವಿಗೆರೆ ಕರಿಯಮ್ಮ, ಕಬ್ಬಳದ ನರಸಿಂಹಮೂರ್ತಿಸ್ವಾಮಿ, ಕುಂಬಾರಗಟ್ಟೆ ಆಂಜನೇಯಸ್ವಾಮಿ, ಮಾವಿನಗಟ್ಟೆ ಆಂಜನೇಯಸ್ವಾಮಿ ಸೇರಿ ನಾಗರಕಟ್ಟೆಯ ಮಲ್ಲಿಕಾರ್ಜುನಸ್ವಾಮಿ, ವೀರಭದ್ರೇಶ್ವರಸ್ವಾಮಿಯ ಉತ್ಸವ ಮೂರ್ತಿಗಳ ಸಾಂಸ್ಕೃತಿಕ ಮೆರವಣಿಗೆ ನಡೆಯುತ್ತದೆ. ಬಳಿಕ ವಿಶೇಷ ಕೆಂಡಾರ್ಚನೆ ನಡೆಯುತ್ತೆ.
ಇನ್ನು ಇದೇ ವೇಳೆ ಗ್ರಾಮದ ಹಿರಿಯರೊಬ್ಬರ ಮೈಮೇಲೆ ದೇವರು ಬಂದ ಅನುಭವವಾದಾಗ ಅವರು ಬಾಳೆ ಕಂದು ಕಡೆಯುತ್ತಾರೆ. ಆ ಮೂಲಕ ಈ ಭಾಗದ ಸಮೃದ್ಧಿಗಾಗಿ ಜನ ದೇವರಲ್ಲಿ ಮೊರೆ ಇಡ್ತಾರೆ. ಒಟ್ಟಾರೆಯಾಗಿ ಏಳೂರಿನ ದೇವರ ಉತ್ಸವ ಮೂರ್ತಿಗಳ ಸಮೇತ ಜನರೆಲ್ಲಾ ಸೇರಿ ಉತ್ಸವ, ಜಾತ್ರೆ ಆಚರಿಸಿ ಭಕ್ತಭಾವ ಮೆರೆದ್ರು.