ಮೆನು ಬದಲಾದ್ರೂ ವಿದ್ಯಾರ್ಥಿಗಳಿಗೆ ಹಳೆಯ ಬಿಸಿಯೂಟವೇ ಗತಿ!

ದೀಪಾವಳಿ ಹಬ್ಬಕ್ಕೆ ಶಾಲಾ ಮಕ್ಕಳಿಗೆ ಗಿಫ್ಟ್ ನೀಡಿದ್ದ ರಾಜ್ಯ ಸರ್ಕಾರ ಬಿಸಿಯೂಟದ ಮೆನುವನ್ನ ಬದಲಾಯಿಸಿತ್ತು. ಅದರಂತೆ ನ.1ರಿಂದ ಪ್ರತಿದಿನ ಬಗೆ ಬಗೆಯ ಬಿಸಿ ಬಿಸಿ ಊಟ ಸಿಗುತ್ತೆ ಅಂತ ಮಕ್ಕಳು ಕಾಯ್ತಾ ಇದ್ರು. ಆದ್ರೆ ಬಿಸಿಯೂಟದ ಹೊಸ ಮೆನುಗೆ ವಿಘ್ನ ಎದುರಾಗಿದೆ. ಹೊಸ ಮೆನು ಜಾರಿ ಮಾಡಿರೋ ಸರ್ಕಾರ, ಅದಕ್ಕಾಗಿ ಹಣವನ್ನೇ ಬಿಡುಗಡೆ ಮಾಡ್ತಿಲ್ಲ. ಇದ್ರಿಂದ ಹಿಂದಿನ ಮೆನುವಿನ ಪ್ರಕಾರವೇ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಬೆಂಗಳೂರು ನಗರದ ಶಾಲೆಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ನೀಡಿದ ಆಹಾರವನ್ನ ಪೂರೈಸಲಾಗ್ತಿದೆ. ಹೊಸದಾಗಿ […]

ಮೆನು ಬದಲಾದ್ರೂ ವಿದ್ಯಾರ್ಥಿಗಳಿಗೆ ಹಳೆಯ ಬಿಸಿಯೂಟವೇ ಗತಿ!
ಸಾಧು ಶ್ರೀನಾಥ್​

Updated on: Nov 22, 2019 | 9:35 PM

ದೀಪಾವಳಿ ಹಬ್ಬಕ್ಕೆ ಶಾಲಾ ಮಕ್ಕಳಿಗೆ ಗಿಫ್ಟ್ ನೀಡಿದ್ದ ರಾಜ್ಯ ಸರ್ಕಾರ ಬಿಸಿಯೂಟದ ಮೆನುವನ್ನ ಬದಲಾಯಿಸಿತ್ತು. ಅದರಂತೆ ನ.1ರಿಂದ ಪ್ರತಿದಿನ ಬಗೆ ಬಗೆಯ ಬಿಸಿ ಬಿಸಿ ಊಟ ಸಿಗುತ್ತೆ ಅಂತ ಮಕ್ಕಳು ಕಾಯ್ತಾ ಇದ್ರು. ಆದ್ರೆ ಬಿಸಿಯೂಟದ ಹೊಸ ಮೆನುಗೆ ವಿಘ್ನ ಎದುರಾಗಿದೆ.

ಹೊಸ ಮೆನು ಜಾರಿ ಮಾಡಿರೋ ಸರ್ಕಾರ, ಅದಕ್ಕಾಗಿ ಹಣವನ್ನೇ ಬಿಡುಗಡೆ ಮಾಡ್ತಿಲ್ಲ. ಇದ್ರಿಂದ ಹಿಂದಿನ ಮೆನುವಿನ ಪ್ರಕಾರವೇ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಬೆಂಗಳೂರು ನಗರದ ಶಾಲೆಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ನೀಡಿದ ಆಹಾರವನ್ನ ಪೂರೈಸಲಾಗ್ತಿದೆ. ಹೊಸದಾಗಿ ಏನೂ ಬದಲಾಗಿಲ್ಲ.

ಸೋಮವಾರ ಅನ್ನದ ಜೊತೆಗೆ ಸೊಪ್ಪು ಅಥವಾ ತರಕಾರಿ ಸಾಂಬಾರು, ಮಂಗಳವಾರ ತರಕಾರಿ ಪಲಾವ್‌ ಮತ್ತು ದಾಲ್‌ ಅಥವಾ ಟೋಮ್ಯಾಟೋ ಬಾತ್‌ ಮತ್ತು ಪಲ್ಯ ನೀಡಬೇಕು. ಬುಧವಾರ ಅನ್ನದ ಜೊತೆ ಬೇಳೆ ರಸಂ ಮತ್ತು ಕಾಳುಪಲ್ಯ ಅಥವಾ ತರಕಾರಿ ಪಲ್ಯ ಕೊಡಬೇಕು. ಗುರುವಾರ ಅನ್ನ ಮತ್ತು ಮಿಶ್ರ ತರಕಾರಿ ಸಾಂಬಾರು, ಶುಕ್ರವಾರ ಬಿಸಿ ಬೇಳೆ ಬಾತ್‌ ಮತ್ತು ಖಾರ ಬೂಂದಿ, ಶನಿವಾರ ತರಕಾರಿ ಉಪ್ಪಿಟ್ಟು ಅಥವಾ ವಾಂಗಿಬಾತ್‌ ಅಥವಾ ಗೋಧಿ ಪೊಂಗಲ್‌ ಅಥವಾ ಚಪಾತಿ ಮತ್ತು ಪೂರಿ ಸಾಗು ಸೇರಿದಂತೆ ಇನ್ನಿತರ ಆಹಾರ ನೀಡಬೇಕು.

ಆದ್ರೆ, ಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕಾದ ಆಹಾರದಲ್ಲಿ ಕೆಲ ಸಂಘ-ಸಂಸ್ಥೆಗಳು ಕಾಂಪ್ರಮೈಸ್​ ಮಾಡಿಕೊಂಡಿವೆ. ಹೊಸ ಮೆನುವನ್ನ ಶಾಲೆ ಹಾಗೂ ಸಂಘ-ಸಂಸ್ಥೆಗಳು ಪಾಲಿಸುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಸರ್ಕಾರ ಹಣ ಬಿಡುಗಡೆ ಮಾಡದಿರೋದೇ ಇದಕ್ಕೆ ಕಾರಣ ಎನ್ನಲಾಗಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us